ಮಡಿಕೇರಿ: ಕುಂದಚೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 1.25 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಚೆಟ್ಟಿಮಾನಿ, ಕುಂದಚೇರಿ, ಕಾನಕಂಡಿ ರಸ್ತೆಯನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.ನಂತರ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಡಿಸಿಸಿ ಸದಸ್ಯ ಕೆ.ಯು.ಹ್ಯಾರೀಸ್ ಮಾತನಾಡಿ, ಕಳೆದ 25 ವರ್ಷಗಳಿಂದ ಚೆಟ್ಟಿಮಾನಿ, ಕುಂದಚೇರಿ, ಕಾನಕಂಡಿ ರಸ್ತೆ ಹೊಂಡ ಗುಂಡಿಗಳಿಂದ ಕೂಡಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು 6 ತಿಂಗಳ ಹಿಂದೆ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ಡಾಂಬರೀಕರಣಗೊಂಡ ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಂಡಿದ್ದು, ಶಾಸಕರ ಕಾರ್ಯ ಶ್ಲಾಘನೀಯವೆಂದರು.ಶಾಸಕ ಎ.ಎಸ್.ಪೊನ್ನಣ್ಣ, ಕಾರ್ಯಪಾಲಕ ಅಭಿಯಂತರ ಗಿರೀಶ್ ಹಾಗೂ ಗುಣಮಟ್ಟದ ರಸ್ತೆಯನ್ನು ನೀಡಿದ ಗುತ್ತಿಗೆದಾರ ಕೆ.ಟಿ.ಸತೀಶ್ ಅವರನ್ನು ಗೌರವಿಸಲಾಯಿತು. ಹಿರಿಯ ಮುಖಂಡರಾದ ಕೆದಂಬಾಡಿ ರಮೇಶ್, ವಲಯ ಅಧ್ಯಕ್ಷ ಕೀರ್ತಿ ಉತ್ತಪ್ಪ, ಕಾರ್ಯದರ್ಶಿ ಸಿ.ಕೆ.ಫೈಸಲ್, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಮಂಗೇರಿರ ಜಗದೀಶ್ ಸೋಮಯ್ಯ, ವೇಣುಗೋಪಾಲ್ (ಸರು), ಕೆ.ಎಸ್.ಅಣ್ಣಯ್ಯ, ಜಿ.ಎಚ್.ತಮೀಮ್ ಕೆ.ಎಂ.ಬಶೀರ್ ಚೇರಂಬಾಣೆ, ಶಿವಕುಮಾರ್, ಹಂಸ, ರಶೀದ್, ಜಿಲ್ಲಾ ಯೋಜನಾ ಉಪಾಧ್ಯಕ್ಷ ಬಾಲಚಂದ್ರ ನಾಯರ್, ಪಿ.ಎಲ್.ಸುರೇಶ್ ಸಂಪಾಜೆ, ಹೊಸೂರು ಸೂರಜ್, ಗೌರೀಶ ಭಾಗಮಂಡಲ, ಅಬ್ದುಲ್ ರೆಹಮಾನ್ ಅಯ್ಯಂಗೇರಿ, ಮಾಜಿ ಅಧ್ಯಕ್ಷರಾದ ಜಯಲಲಿತ, ಮಂಗೇರಿರ ಗೀತಾ ಪೂಣಚ್ಚ, ಬಶೀರ್, ಅಪ್ರು ರವೀಂದ್ರ, ಸೆಟ್ಟೀಜನ ಜಿತಿನ್, ಜಮ್ಮಡ ಸೋಮಣ್ಣ, ಅಬ್ದುಲ್ ರೆಹಮಾನ್ ನಾಪೋಕ್ಲು ಮತ್ತಿತರರಿದ್ದರು.

ಶಾಸಕ ಎ.ಎಸ್.ಪೊನ್ನಣ್ಣ ಅವರ 52ನೇ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.