ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲೆ ಮುಂದುವರಿದ ದಾಳಿ ವಿರೋಧಿಸಿ, ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶಕ್ಕೆ ಒತ್ತಾಯಿಸಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ನೇತೃತ್ವದಲ್ಲಿ ಗುರುವಾರ ಇಲ್ಲಿನ ಮಹಾನಗರ ಪಾಲಿಕೆ ಎದುರು ಹಗಲು ರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿ, ಸಂಡೆ ಬಜಾರ್ ವ್ಯಾಪಾರದಲ್ಲಿ ಬಡ ಗ್ರಾಹಕರ ಹಿತಾಸಕ್ತಿಯನ್ನು ಪಾಲಿಕೆ ಗೌರವಿಸಬೇಕು. ಸಂಡೆ ಬಜಾರ್ ವ್ಯಾಪಾರಿಗಳ ಮೇಲೆ ಮತ್ತೆ ದಬ್ಬಾಳಿಕೆ ಮುಂದುವರಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಸಿಐಟಿಯು ಜಿಲ್ಲಾ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಜಯಂತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಸುನಿಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಜ್, ರಮೇಶ್ ಉಳ್ಳಾಲ್, ರವಿಚಂದ್ರ ಕೊಂಚಾಡಿ, ಜಯಂತ್ ನಾಯ್ಕ್, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ ಮತ್ತಿತರರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್. ಎಸ್, ವಿಜಯ್ ಜೈನ್, ಶಿವಪ್ಪ, ರಿಯಾಜ್ ಮದಕ, ನೌಶಾದ್ ಕಣ್ಣೂರ್, ರಫೀಕ್ ಪಾಂಡೇಶ್ವರ, ಸಿಕಂದರ್ ಬೇಗ್, ಅಶ್ರಫ್, ಪಕೀರ ನಾಯ್ಕ್, ಕಾಜ ಮೊಯ್ದಿನ್, ಶಿವಾನಂದ್, ಪ್ರದೀಪ್, ನಾಗರಾಜ್, ಜ್ಯೋತಿ ಬಾಯಿ, ಲಕ್ಕಮ್ಮ, ಮಂಜುಳಾ, ಹನುಮಂತ ನಾಯ್ಕ, ಮಹೇಶ್ ನಾಯ್ಕ್, ಖಾದರ್ ವಾಮಂಜೂರ್, ಸಿದ್ದವ್ವ, ಸಯ್ಯದ್ ಫಾರುಕ್, ಮಾಜಿ ವಿದ್ಯಾರ್ಥಿ ನಾಯಕ ಹಿದಾಯತುಲ್ಲ ಅಡ್ಡೂರು, ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ಯೋಗಿತಾ ಸುವರ್ಣ ಮತ್ತಿತರರಿದ್ದರು.ಪಾಲಿಕೆ ಕಾರ್ಯಾಚರಣೆ ವಿರೋಧಿಸಿ ವ್ಯಾಪಾರಸ್ಥರ ಸತ್ಯಾಗ್ರಹ
ಪಾಲಿಕೆ ಕಾರ್ಯಾಚರಣೆ ವಿರೋಧಿಸಿ ವ್ಯಾಪಾರಸ್ಥರ ಸತ್ಯಾಗ್ರಹ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.