ಚಾಮರಾಜನಗರಕ್ಕೆ ತಂಪೆರೆದ ಮಳೆರಾಯ

| Published : Apr 29 2025, 12:49 AM IST

ಸಾರಾಂಶ

ಬಿಸಿಲು, ಧಗೆಯಿಂದ ಬಸವಳಿದಿದ್ದ ನಗರದ ಜನತೆಗೆ ಕೊನೆಗೂ ಮಳೆ ಸಿಂಚನ ಮುದ ನೀಡಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿಸಿಲು, ಧಗೆಯಿಂದ ಬಸವಳಿದಿದ್ದ ನಗರದ ಜನತೆಗೆ ಕೊನೆಗೂ ಮಳೆ ಸಿಂಚನ ಮುದ ನೀಡಿತು. ಹಲವಾರು ದಿನಗಳಿಂದ ಮಳೆಯಿಲ್ಲದ ಬೆ‍ಳೆ ಒಣಗುತ್ತಿದ್ದು, ಕೆಲ ಭಾಗದಲ್ಲಿ ಮ‍ಳೆಯಾಗಿದ್ದರೂ ಹೆಚ್ಚಿನ ಭಾಗದಲ್ಲಿ ಮಳೆಯಿಲ್ಲದೆ ರೈತರು ಆತಂಕಕ್ಕೊಳಗಾಗಿದ್ದರು.ಸೋಮವಾರ ಬೆಳಿಗ್ಗೆಯಿಂದ ಬಿಸಿಲು, ಮೋಡವಿದ್ದು, ಧಗೆಗೆ ಜನತೆ ತತ್ತರಿಸಿದರು. ಮಧ್ಯಾಹ್ನ 3 30 ಸಮಯದಲ್ಲಿ ಗಾಳಿಯೊಂದಿಗೆ ಮಳೆ ಸುರಿದು ತಂಪೆರೆದು ಜನರಲ್ಲಿ ಹರ್ಷ ತಂದಿತು. ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದಿದ್ದು, ಜನಸಾಮಾನ್ಯರು ರಸ್ತೆಗಳಲ್ಲಿ ಓಡಾಡಲು ಪ್ರಯಾಸ ಪಡಬೇಕಾಯಿತು.

ಚಾಮರಾಜನಗರ ಸಮೀಪದ ಸೋಮವಾರ ತಾವರಕಟ್ಟೆ ಕೆಳ ಸೇತುವೆ ಬಳಿ ನಿಂತಿದ್ದರಿಂದ ಸಾರ್ವಜನಿಕರು ಓಡಾಡಲು ಕೆಲ ಕಾಲ ತೊಂದರೆ ಅನುಭವಿಸುವಂತಹ ಪರಿಸ್ಧಿತಿ ನಿರ್ಮಾಣವಾಗಿತ್ತು. ಕೆಲ ಪ್ರದೇಶದಲ್ಲಿ ಮರದ ರಂಬೆ ಕೊಂಬೆಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್‌ ಅಡಚಣೆ

ಉಂಟಾಗಿತ್ತು.