ಸಾರಾಂಶ
ಉಡುಪಿ ಜಿಲ್ಲೆ ಸಾಲಿಗ್ರಾಮದಲ್ಲಿ ಇತ್ತೀಚೆಗೆ ನಡೆದ 2024- 2025ರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್‌ಪ್ರೆಸ್ ಸ್ಟರ್ಧೆಯಲ್ಲಿ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು, ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ.ರಕ್ಷಿತ್ ಅವರು 93 ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ 2 ವಿಭಾಗಗಳ ಸ್ಪರ್ಧೆಯಲ್ಲಿ 182.5 ಕೆ.ಜಿ. ಮತ್ತು 140 ಕೆ.ಜಿ. ಭಾರವನ್ನೆತ್ತಿ 2 ಚಿನ್ನದ ಪದಕ ಗಳಿಸಿದ್ದಾರೆ.
ದಾವಣಗೆರೆ: ಉಡುಪಿ ಜಿಲ್ಲೆ ಸಾಲಿಗ್ರಾಮದಲ್ಲಿ ಇತ್ತೀಚೆಗೆ ನಡೆದ 2024- 2025ರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್‌ಪ್ರೆಸ್ ಸ್ಟರ್ಧೆಯಲ್ಲಿ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು, ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ.ರಕ್ಷಿತ್ ಅವರು 93 ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ 2 ವಿಭಾಗಗಳ ಸ್ಪರ್ಧೆಯಲ್ಲಿ 182.5 ಕೆ.ಜಿ. ಮತ್ತು 140 ಕೆ.ಜಿ. ಭಾರವನ್ನೆತ್ತಿ 2 ಚಿನ್ನದ ಪದಕ ಗಳಿಸಿದ್ದಾರೆ.
ಹಾಗೆಯೇ ರಕ್ಷಿತ್ ತಂದೆ, ಕ್ರೀಡಾ ತರಬೇತುದಾರ ಪಿ.ವಿಶ್ವನಾಥ್ ಸಹ ಈ ಎರಡು ವಿಭಾಗಗಳ ಸ್ಪರ್ಧೆಯಲ್ಲಿ ಸ್ಪರ್ಧಿಸಿ 2 ಕಂಚಿನ ಪದಕ ಪಡೆದಿದ್ದಾರೆ. ಅಕ್ಟೊಂಬರ್ 14ರಿಂದ 18ರವರೆಗೆ ಗೋವಾ ರಾಜ್ಯದಲ್ಲಿ ನಡೆಯಲಿರುವ 2024- 2025ರ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಬೆಂಚ್‌ಪ್ರೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.- - - -22ಕೆಡಿವಿಜಿ32ಃ: ವಿ.ರಕ್ಷಿತ್
-22ಕೆಡಿವಿಜಿ33ಃ: ಪಿ.ವಿಶ್ವನಾಥ