ಕೆಂಪೇಶ್ವರರ ವೈಭವದ ರಥೋತ್ಸವ

| Published : Jun 22 2024, 12:54 AM IST

ಸಾರಾಂಶ

ಪೂಜೆಯ ಬಳಿಕ ಸಂಜೆ 6.30ಕ್ಕೆ ಅಪಾರ ಭಕ್ತ ವೃಂದ ಅತ್ಯಂತ ಸಡಗರದಿಂದ ರಥವನ್ನು ಎಳೆಯುವ ಮೂಲಕ ಕೆಂಪೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.

ಹರಪನಹಳ್ಳಿ: ಇತಿಹಾಸ ಪ್ರಸಿದ್ಧ ಪಂಚಗಣಾಧೀಶರಲ್ಲಿ ಒಬ್ಬರಾಗಿ ಪಟ್ಟಣದಲ್ಲಿ ನೆಲೆಸಿರುವ ಪವಾಡ ಪುರುಷ ಗುರುಕೆಂಪೇಶ್ವರ ಸ್ವಾಮಿಯ ರಥೋತ್ಸವವು ಶುಕ್ರವಾರ ಸಂಜೆ ವೈಭವದಿಂದ ಜರುಗಿತು.ಇಲ್ಲಿಯ ಮೇಗಳಪೇಟೆಯ ಕೆಂಪೇಶ್ವರ ಮಠದ ಬಳಿ ಪೂಜೆ ನೇರವೇರಿಸಿ ಸಮಾಳ, ನಂದಿಕೋಲು ವಾದ್ಯಗಳೊಂದಿಗೆ ರಥೋತ್ಸವ ಬಳಿ ಬಂದು ರಥದ ಗಾಲಿಗೆ ಪೂಜೆ ನೇರವೇರಿಸಿ ನಂತರ ಧ್ವಜವನ್ನು ಹರಾಜು ಮಾಡಲಾಯಿತು.

ಪೂಜೆಯ ಬಳಿಕ ಸಂಜೆ 6.30ಕ್ಕೆ ಅಪಾರ ಭಕ್ತ ವೃಂದ ಅತ್ಯಂತ ಸಡಗರದಿಂದ ರಥವನ್ನು ಎಳೆಯುವ ಮೂಲಕ ಕೆಂಪೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.

ಕೆಂಪೇಶ್ವರರ ದೇವಸ್ಥಾನದಲ್ಲಿ ಮೂರ್ತಿಗೆ ಹೂವಿನ ಅಲಂಕಾರಗಳಿಂದ ವಿಶೇಷ ಪೂಜೆಯ ಮಾಡಲಾಗಿತ್ತು. ಗುರುಪಾದ ದೇವರ ಮಠದ ಶ್ರೀಗಳು ತೇರನ್ನು ಏರಿದ್ದರು. ಕಲ್ಮಠದ ಶ್ರೀಗಳು ನೇತೃತ್ವ ವಹಿಸಿದ್ದರು.

ರಥೋತ್ಸವ ಕಾರ್ಯಕ್ರಮದಲ್ಲಿ ಅರ್ಚಕ ಕೆ.ಎಂ.ಶಿವಯೋಗಿ, ಕೆಂಪೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ರಾಜಶೇಖರ, ಕಾರ್ಯದರ್ಶಿ ಪಟೇಲ್ ಬೆಟ್ಟನಗೌಡ, ಖಜಾಂಚಿ ಹುಳ್ಳಿ ಕೊಟ್ರಪ್ಪ, ಪಿ.ಬಿ. ಗೌಡ, ಆರುಂಡಿ ನಾಗರಾಜ, ಸಿ.ಎಂ. ಕೊಟ್ರಯ್ಯ, ಎಚ್‌.ಎಂ. ಕೊಟ್ರಯ್ಯ, ಮುಖ್ಯ ಶಿಕ್ಷಕ ಎ.ಎಸ್ .ಎಂ. ಗುರುಪ್ರಸಾದ್, ಶಿವರಾಜ ಸಾವಳಗಿ, ಪ್ರಕಾಶ ಸಾವಳಗಿ, ವಕೀಲ ಪಿ.ಬಸವರಾಜ, ಸಿನಿಮಾ ಚಂದ್ರಣ್ಣ, ಪಾಟೀಲ್‌ ಪ್ರವೀಣ ಎಲ್.ಕೊಟ್ರೇಶ, ಕೊಟ್ಗಿ ಕರಿಬಸಪ್ಪ, ಎಚ್.ಎಂ. ಜಗದೀಶ ಇದ್ದರು.