ಸಾರಾಂಶ
ಯೋಗ ನಮ್ಮ ಆರೋಗ್ಯವನ್ನು ಸದೃಢ ಮಾಡುತ್ತದೆ. ಮಾನಸಿಕ, ದೈಹಿಕ ಶಕ್ತಿಯನ್ನು ನಮ್ಮಲ್ಲಿ ತುಂಬಿ ನಿತ್ಯ ನಮ್ಮನ್ನು ಸೃಜನಶೀಲರನ್ನಾಗಿ ಮಾಡುತ್ತದೆ ಎಂದು ಶ್ರೀ ಪದ್ಮರಾಜ ಪಬ್ಲಿಕ್ ಶಾಲೆಯ ಪ್ರಾಚಾರ್ಯ ವಿ.ಬಿ.ಲಮಾಣಿ ಹೇಳಿದರು.
ಸಿಂದಗಿ: ಯೋಗ ನಮ್ಮ ಆರೋಗ್ಯವನ್ನು ಸದೃಢ ಮಾಡುತ್ತದೆ. ಮಾನಸಿಕ, ದೈಹಿಕ ಶಕ್ತಿಯನ್ನು ನಮ್ಮಲ್ಲಿ ತುಂಬಿ ನಿತ್ಯ ನಮ್ಮನ್ನು ಸೃಜನಶೀಲರನ್ನಾಗಿ ಮಾಡುತ್ತದೆ ಎಂದು ಶ್ರೀ ಪದ್ಮರಾಜ ಪಬ್ಲಿಕ್ ಶಾಲೆಯ ಪ್ರಾಚಾರ್ಯ ವಿ.ಬಿ.ಲಮಾಣಿ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಪದ್ಮರಾಜ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ವೇಳೆ ಶಾಲಾ ಮಕ್ಕಳಿಗೆ ಯೋಗಾಸನದ ವಿವಿಧ ಆಸನಗಳ ಬಗ್ಗೆ ತಿಳಿಸಿ ಅದರ ಉಪಯೋಗಗಳನ್ನು ವಿವರಿಸಿದರು. ನಂತರ ಯೋಗದ ಆಸನಗಳ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ರಾಣಿ ಜೋಗೂರ, ಕೆ.ಎಸ್.ಲಾತೂರ, ಎಸ್.ಎಸ್.ಪೋದ್ದಾರ, ಸಾವಿತ್ರಿ ಹಾಲಕೇರಿ, ಶ್ರೀಧರ ಮಲ್ಲೇದ, ಅರುಣಾ ಕವಲಗಿ, ಅಕ್ಷತಾ ಕಿಣಗಿ, ವಿಜಯಲಕ್ಷ್ಮೀ ಚೌಧರಿ, ಭಾರತಿ ಹಿರೇಮಠ, ಅಭಿಷೇಕ ಬಿರಾದಾರ, ಕಲಾವತಿ ಹಿರೇಮಠ, ಸುರೇಶ ಸುಣಗಾರ ಸೇರಿದಂತೆ ಇತರರು ಇದ್ದರು.