ಸಾರಾಂಶ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಳಿಗೆ ದಿನನಿತ್ಯ ನ್ಯೂಸ್ ಪೇಪರ್‌ಗಳನ್ನು ಓದುವುದರಿಂದ ಪಿಎಸೈ ಮೊದಲ ಪತ್ರಿಕೆ ಇಂಗ್ಲಿಷ್ ಭಾಷಾಂತರಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕೋಚಿಂಗ್ ಸೆಂಟರ್‌ನ ನಿರ್ದೇಶಕ ಲಕ್ಷ್ಮಣ ಮ.ಅಷ್ಟಗಿ ಹೇಳಿದರು.
ಕನ್ಡಪ್ರಭ ವಾರ್ತೆ ಬೆಳಗಾವಿ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಳಿಗೆ ದಿನನಿತ್ಯ ನ್ಯೂಸ್ ಪೇಪರಗಳನ್ನು ಓದುವುದರಿಂದ ಪಿಎಸೈ ಮೊದಲ ಪತ್ರಿಕೆ ಇಂಗ್ಲಿಷ್ ಭಾಷಾಂತರಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕೋಚಿಂಗ್ ಸೆಂಟರ್‌ನ ನಿರ್ದೇಶಕ ಲಕ್ಷ್ಮಣ ಮ.ಅಷ್ಟಗಿ ಹೇಳಿದರು.ನಗರದ ಗಡಿನಾಡು ಕೋಚಿಂಗ್ ಸೆಂಟರ್‌ನಲ್ಲಿ ಈಚೆಗೆ ಕೆಎಎಸ್, ಪಿಎಸೈ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಡೆದ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪರೀಕ್ಷೆಗಳನ್ನು ಯಶಸ್ವಿಯಾಗಿ ಹೇಗೆ ಉತ್ತೀರ್ಣವಾಗಿ ತಮ್ಮ ಬದುಕನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಮುಂಬರುವ ಪೊಲೀಸ್ ಹಾಗೂ ಪಿಎಸೈ ಪರೀಕ್ಷೆಗಳ ಬಗ್ಗೆ ಸಂಪೂರ್ಣವಾದ ತಿಳುವಳಿಕೆ ನೀಡಿ, ಯಾವ ವಿಷಯದ ಮೇಲೆ ಹೆಚ್ಚಿನ ಪ್ರಶ್ನೆಗಳನ್ನು ಕೇಳುತ್ತಾರೆ? ಇಂದಿನ ದಿನನಿತ್ಯದ ಪ್ರಚಲಿತ ಘಟನೆಗಳ ಮೇಲೆ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಎಂಬುವುದರ ಕುರಿತು ತಿಳಿಸಿದರು.ಗಡಿನಾಡು ಕೊಂಚಿಂಗ್ ಸೆಂಟರ್‌ನ ಸಂಸ್ಥಾಪಕ ಮಾರುತಿ ಅಷ್ಟಗಿ ಅವರು, ಇತಿಹಾಸದ ವಿಷಯದಲ್ಲಿ ಯಾವ ರೀತಿ ಪ್ರಶ್ನೆಗಳು ಬರುತ್ತವೆ, ಯಾವ ಸಾಮ್ರಾಜ್ಯದ ಬಗ್ಗೆ ಹೆಚ್ಚಿಗೆ ಒತ್ತು ಕೊಡಬೇಕೆಂಬುವುದರ ಕುರಿತು ಅಗತ್ಯ ಮಾಹಿತಿ ನೀಡಿದರು.
ಕೋಚಿಂಗ್ ಸೆಂಟರ್‌ನಿಂದ ಪಿಎಸೈ ಆಗಿ ಆಯ್ಕೆಯಾದ ರಾಮನಗರ ಠಾಣೆಯ ಪಿಎಸೈ ಬಸವರಾಜ ಮಬನೂರ ಮಾತನಾಡಿ, ಬದಲಾಗುತ್ತಿರುವ ಪಠ್ಯಕ್ರಮದ ಬಗ್ಗೆ ತಿಳುವಳಿಕೆ ನೀಡಿದರು ಹಾಗೂ ನಂತರ ಈಗಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಅವಶ್ಯಕವಾಗಿರುವ ಸಮಯದ ಸರಿಯಾದ ಉಪಯೋಗವನ್ನು ಹೇಗೆ ಮಾಡಬೇಕೆಂಬುವುದರ ಕುರಿತು ತಮ್ಮ ಅನುಭವದ ಜ್ಞಾನ ಹಂಚಿಕೊಂಡರು.ನ್ನೋರ್ವ ಪಿಎಸೈ ಆಗಿ ಆಯ್ಕೆಯಾದಂತಹ ಕಲಘಟಗಿ ಠಾಣೆಯ ಪಿಎಸೈ ಬಸವರಾಜ ಯದ್ದಲಗುಡ್ಡ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯದ ಅವಕಾಶವನ್ನು ಹೇಗೆ ಉಪಯೋಗ ಮಾಡಿಕೊಂಡು ಯಾವ ತರಹ ದಿನ ನಿತ್ಯ ಪರೀಕ್ಷೆಗೆ ತಯಾರಿ ನಡೆಸಬೇಕು ಎಂಬುವುದರ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಇಬ್ಬರು ಪಿಎಸೈಗಳಿಗೆ ಗಡಿನಾಡು ಕೊಚಿಂಗ್ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು. ಈ ಉಚಿತ ಕಾರ್ಯಾಗಾರದಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿ ಇದರ ಸದುಪಯೋಗ ಪಡೆದುಕೊಂಡರು.ಈಗಿನ ಸ್ಪರ್ಧಾತ್ಮಕ ಕಾಲವು ಮೊದಲಿನಂತಹ ಸ್ಥಿತಿಯಲ್ಲಿರದೇ, ಸಾಕಷ್ಟು ಪ್ರಮಾಣದ ಬದಲಾವಣೆಯಾಗಿದೆ. ಹೀಗಾಗಿ ನಮ್ಮ ಅಭ್ಯಾಸ ಮಾಡುವ ರೀತಿಯೂ ಬದಲಾಗಬೇಕು ಆಗ ಮಾತ್ರ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ.
-ಬಸವರಾಜ ಮಬನೂರ, ರಾಮನಗರ ಠಾಣೆಯ ಪಿಎಸೈ