ಸೂಫಿ ಉಲಮಾಗಳು ಸುಖಸಮೃದ್ಧಿಯ ಕಾಲದಲ್ಲಲ್ಲ, ಬದಲಾಗಿ ಸಂಕಷ್ಟದ ದಿನಗಳಲ್ಲಿ ಗ್ರಾಮಗ್ರಾಮಗಳಿಗೆ ತೆರಳಿ, ಕತ್ತಲೆಯಲ್ಲೇ ಧಾರ್ಮಿಕ ಸಂದೇಶಗಳನ್ನು ಸಾರುತ್ತಾ, ಮದರಸಗಳು ಹಾಗೂ ಮಸೀದಿಗಳನ್ನು ನಿರ್ಮಿಸಿ, ತ್ಯಾಗದ ಬದುಕು ನಡೆಸಿದ್ದಾರೆ. ಇಂತಹ ಮಹಾನ್ ತ್ಯಾಗಗಳ ಫಲವಾಗಿ ಇಂದು ನಾವು ಧರ್ಮವನ್ನು ಅನುಸರಿಸುವಂತಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಮುಖಂಡ ಹಾಗೂ ಸಮಸ್ತ ಮೂರನೇ ಪ್ರಚಾರ ಸಮಿತಿಯ ಹಾಸನ ಜಿಲ್ಲಾ ಉಸ್ತುವಾರಿ ಕೊಲ್ಲಹಳ್ಳಿ ಸಲೀಂ ಮಾತನಾಡಿ, ಕೇರಳ ಜಮ್ಮಿಯತ್ ಉಲಮಾ ಸಂಸ್ಥೆ ಇಸ್ಲಾಮಿಕ್ ಮೌಲ್ಯಗಳನ್ನು ಶುದ್ಧವಾಗಿ ಪಾಲಿಸಿಕೊಂಡು, ಜಗತ್ತಿನಲ್ಲೇ ಮುಂಚೂಣಿಯ ಧಾರ್ಮಿಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಧರ್ಮವನ್ನು ಸೂಫಿ ಸಂತರು ಹಾಗೂ ಧಾರ್ಮಿಕ ಮುಖಂಡರು ಉಳಿಸಿಕೊಂಡು ಬಂದಿದ್ದಾರೆ ಹೊರತು ಶ್ರೀಮಂತ ಉದ್ಯಮಿಗಳು ಅಲ್ಲ ಎಂದು ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಮುಖಂಡ ಅನೀಶ್ ಕೈಸರಿ ಹೇಳಿದರು.ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಸಮಸ್ತದ ನೂರನೇ ಅಂತಾರಾಷ್ಟ್ರೀಯ ಮಹಾಸಮ್ಮೇಳನದ ಪ್ರಚಾರ ಮಹಾಸಮ್ಮೇಳನದಲ್ಲಿ ಅವರು ಮಾತನಾಡಿ, ಕಳೆದ ನೂರು ವರ್ಷಗಳಿಂದ ಇಸ್ಲಾಮಿಕ್ ಶಿಕ್ಷಣ, ಧಾರ್ಮಿಕ ಮೌಲ್ಯಗಳು ಹಾಗೂ ಸಮಾಜ ಸೇವೆಯ ಮೂಲಕ ದೇಶದಾದ್ಯಂತ ತನ್ನದೇ ಆದ ಸ್ಥಾನವನ್ನು ಗಳಿಸಿದೆ ಎಂದು ಹೇಳಿದರು.
ಫೆಬ್ರವರಿ 4ರಿಂದ 8ರವರೆಗೆ ನಡೆದ ನೂರನೇ ವರ್ಷದ ಶತಮಾನೋತ್ಸವ ಮಹಾಸಮ್ಮೇಳನದಲ್ಲಿ ಸುಮಾರು 33 ಸಾವಿರಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿವರು. ಇದು ಭಾರತದ ಇತಿಹಾಸದಲ್ಲೇ ಅಪರೂಪದ ಹಾಗೂ ಭವ್ಯ ಶಿಬಿರವಾಗಿದ್ದು, ದೇಶದ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯ ವಿಶ್ವಾಸಿಗಳು ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.ಸೂಫಿ ಉಲಮಾಗಳು ಸುಖಸಮೃದ್ಧಿಯ ಕಾಲದಲ್ಲಲ್ಲ, ಬದಲಾಗಿ ಸಂಕಷ್ಟದ ದಿನಗಳಲ್ಲಿ ಗ್ರಾಮಗ್ರಾಮಗಳಿಗೆ ತೆರಳಿ, ಕತ್ತಲೆಯಲ್ಲೇ ಧಾರ್ಮಿಕ ಸಂದೇಶಗಳನ್ನು ಸಾರುತ್ತಾ, ಮದರಸಗಳು ಹಾಗೂ ಮಸೀದಿಗಳನ್ನು ನಿರ್ಮಿಸಿ, ತ್ಯಾಗದ ಬದುಕು ನಡೆಸಿದ್ದಾರೆ. ಇಂತಹ ಮಹಾನ್ ತ್ಯಾಗಗಳ ಫಲವಾಗಿ ಇಂದು ನಾವು ಧರ್ಮವನ್ನು ಅನುಸರಿಸುವಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಮುಖಂಡ ಹಾಗೂ ಸಮಸ್ತ ಮೂರನೇ ಪ್ರಚಾರ ಸಮಿತಿಯ ಹಾಸನ ಜಿಲ್ಲಾ ಉಸ್ತುವಾರಿ ಕೊಲ್ಲಹಳ್ಳಿ ಸಲೀಂ ಮಾತನಾಡಿ, ಕೇರಳ ಜಮ್ಮಿಯತ್ ಉಲಮಾ ಸಂಸ್ಥೆ ಇಸ್ಲಾಮಿಕ್ ಮೌಲ್ಯಗಳನ್ನು ಶುದ್ಧವಾಗಿ ಪಾಲಿಸಿಕೊಂಡು, ಜಗತ್ತಿನಲ್ಲೇ ಮುಂಚೂಣಿಯ ಧಾರ್ಮಿಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.ಹಾಸನ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳಿಂದ ಮದರಸೆಗಳ ಮೂಲಕ ಶಿಕ್ಷಣ, ಬಡವರ ನೆರವು, ಆರೋಗ್ಯ ಸೇವೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಸ್ತ ಹಾಗೂ ಎಸ್‌ಕೆಎಸ್‌ಎಸ್‌ಎಫ್ ನಡೆಸಿಕೊಂಡು ಬಂದಿದೆ. 2008ರಲ್ಲಿ ಸಾಮೂಹಿಕ ವಿವಾಹ, 2016ರಲ್ಲಿ ಆಂಬ್ಯುಲೆನ್ಸ್ ಸೇವೆ, 2019ರಲ್ಲಿ ರಜತ ಮಹೋತ್ಸವ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸೈಯದ್ ಅಲಿ ತಂಗಳ ಕೊಂಬೊಳ್, ಸೈಯದ್ ಮಾರನಹಳ್ಳಿ ತಂಗಳ್, ಶೈಕುನ ಅಬ್ದುಲ್ ಖಾದರ್ ಬಾಮ್ರಾನ ಉಸ್ತಾದ್, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಕುನ ಅಬ್ದುಲ್ಲ ಮುಸ್ಲಿಯಾರ್, ಶೈಕುನ ಉಸ್ಮಾನ್ ಫೈಝಿ, ಮೊಯ್ದು ಫೈಜಿ ಕುಂತೂರ್ ಮೊಯ್ದು ಫೈಜಿ ಆನೆ ಮಹಲ್, ಬದ್ರುದ್ದೀನ್ ದಾರಿಮಿ, ಶರೀಫ್ ಹರ್ಷದಿ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಯಾದ್ಗಾರ್ ಝಾಕೀರ್, ಹಿರಿಯರಾದ ಹಾಜಿ ಅಹಮದ್ ಬಾವ, ಖಾಸಿಂ ಗುಳಗಳಲೆ ಇನ್ನಿತರರು ಉಪಸ್ಥಿತರಿದ್ದರು.