ಧಾರ್ಮಿಕ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿದಾಯಕ: ಒಪ್ಪತ್ತೇಶ್ವರ ಶ್ರೀ

| Published : Oct 08 2024, 01:13 AM IST

ಧಾರ್ಮಿಕ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿದಾಯಕ: ಒಪ್ಪತ್ತೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಶ್ರೀಗಳ ಧಾರ್ಮಿಕ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿದಾಯಕವಾಗಿವೆ

ಲಿಂ.ಬಸವಲಿಂಗೇಶ್ವರ ಶಿವಾಚಾರ್ಯ ಶ್ರೀಗಳ ೩೮ನೇ ಪುಣ್ಯಾರಾಧನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಶ್ರೀಗಳ ಧಾರ್ಮಿಕ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಪೂಜ್ಯ ಲಿಂ.ಬಸವಲಿಂಗೇಶ್ವರ ಶಿವಾಚಾರ್ಯ ಶ್ರೀಗಳ ೩೮ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀ ಮಠದ ಪೀಠಾಧಿಪತಿಗಳು ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಶ್ರೀಗಳು ಬಡ ಮಕ್ಕಳಿಗಾಗಿ ಶಾಲೆ, ಗೋವುಗಳ ರಕ್ಷಣೆಗಾಗಿ ಗೋಶಾಲೆ ತೆರೆದು ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ. ಇಡೀ ಭಕ್ತ ಸಮೂಹವನ್ನು ಕಟ್ಟಿಕೊಂಡು ಧಾರ್ಮಿಕವಾಗಿ ಶ್ರೀಮಠವನ್ನು ಸಾಕಷ್ಟು ಅಭಿವೃದ್ಧಿ ಪಡಿಸುತ್ತಾ ಭಕ್ತರ ಏಳಿಗೆಗಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದರು.

ನವಲಗುಂದದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬಸಲಿಂಗೇಶ್ವರ ಶ್ರೀಗಳು ಮಠಕ್ಕೆ ಭಕ್ತರೇ ಆಸ್ತಿಯನ್ನಾಗಿ ಮಾಡಿದ್ದಾರೆ. ಮಠದ ಅಭಿವೃದ್ಧಿಯಲ್ಲಿ ಭಕ್ತರ ಕೊಡುಗೆ ದೊಡ್ಡದಾಗಿದೆ ಎಂದರು.

ಜೀಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಶ್ರೀಮಠದ ಲಿ.ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳ ಕೃರ್ತ ಗದ್ದಿಗೆ ವಿಶೇಷ ಸಲ್ಲಿಸಲಾಯಿತು. ಬಳಿಕ ಪಟ್ಟಣದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು.

ಈ ಸಂದರ್ಭ ಮುಖಂಡರಾದ ಅಡಿವೆಯ್ಯ ಪೂಜಾರ, ವೀರಣ್ಣ ಹುಬ್ಬಳ್ಳಿ, ಈಶಪ್ಪ ಸ್ಟಾಂಪಿನ್, ಮಹೇಶ ಹುಬ್ಬಳ್ಳಿ, ಬಸವರಾಜ ಸಾದರ, ಮಲ್ಲಪ್ಪ ಭೂತೆ, ಶಂಕರ್ ಕಲಬುರಗಿ, ಮಹೇಶ ಕುಂಬಾರ, ವೀರೇಶ ಸ್ಟಾಂಪಿನ್, ಬಸವರಾಜ ಕೊಳ್ಳಿ, ಮಹಾಂತೇಶ ಭಾಸ್ಕರ, ಮಲ್ಲಪ್ಪ ಬನ್ನಿಕೊಪ್ಪ ಮತ್ತಿತರರು ಇದ್ದರು.