ಪಟ್ಟಣದ ತೋಟ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಗುರುವಾರ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಉದಯ್ ಜೋಷಿ ಭೇಟಿ ನೀಡಿ ತುಮ್ ಕೋಸ್ ಸಂಸ್ಥೆಯ ಆಡಳಿತ, ವ್ಯವಹಾರ, ರೈತರಿಗೆ ನೀಡುತ್ತೀರುವ ಸಹಕಾರದ ಬಗ್ಗೆ ಪರಿಶೀಲಿಸಿ ಸಂಘದ ಚಟುವಟಿಕೆಗಳ ಬಗ್ಗೆ ಪ್ರಶಂಶೆಯನ್ನು ಚನ್ನಗಿರಿಯಲ್ಲಿ ವ್ಯಕ್ತಪಡಿಸಿದ್ದಾರೆ.

- ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ.ಉದಯ್ ಜೋಷಿ

- - -

ಚನ್ನಗಿರಿ: ಪಟ್ಟಣದ ತೋಟ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಗುರುವಾರ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಉದಯ್ ಜೋಷಿ ಭೇಟಿ ನೀಡಿ ತುಮ್ ಕೋಸ್ ಸಂಸ್ಥೆಯ ಆಡಳಿತ, ವ್ಯವಹಾರ, ರೈತರಿಗೆ ನೀಡುತ್ತೀರುವ ಸಹಕಾರದ ಬಗ್ಗೆ ಪರಿಶೀಲಿಸಿ ಸಂಘದ ಚಟುವಟಿಕೆಗಳ ಬಗ್ಗೆ ಪ್ರಶಂಶೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಕಾರ ಭಾರತಿ ವತಿಯಿಂದ ಪ್ರಸಕ್ತ ವರ್ಷದಲ್ಲಿ ಸಮಿತಿಯ ಎಲ್ಲ ಸದಸ್ಯರು ದೇಶದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಸಹಕಾರ ಸಂಘಗಳ ಸವಾಲುಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಭೇಟಿ ನೀಡುತ್ತಿದ್ದೇವೆ. ಈ ಪ್ರವಾಸದಿಂದ ಸಹಕಾರ ಭಾರತಿ ಮತ್ತಷ್ಟು ಸದೃಢವಾಗಲಿದೆ. ಕರ್ನಾಟಕ ರಾಜ್ಯದ 28 ಜಿಲ್ಲೆಗಳ 650ಕ್ಕೂ ಹೆಚ್ಚು ಸಹಕಾರ ಸಂಘಗಳಿಗೆ ಭೇಟಿ ನೀಡಲಾಗಿದೆ ಎಂದರು.

ಕೇವಲ ಅಡಕೆ ತಿನ್ನುವುದರಿಂದ ಕ್ಯಾನ್ಸರ್ ಬರುವುದಿಲ್ಲ. ಅಡಕೆ ಜೊತೆ ತಂಬಾಕು ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಅಡಕೆ ಸಾಂಪ್ರದಾಯಿಕವಾಗಿ ಎಲ್ಲ ಶುಭ ಕಾರ್ಯಗಳಲ್ಲಿಯೂ ಬಳಕೆ ಮಾಡುವಂತಹ ವಸ್ತುವಾಗಿದೆ. ಇದರಲ್ಲಿ ಯಾವುದೇ ವಿಷಕಾರಕ ಅಂಶಗಳಿಲ್ಲ. ಸಹಕಾರ ಭಾರತಿ ಮತ್ತು ತುಮ್ ಕೋಸ್ ಸಂಸ್ಥೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಂಡಿದೆ. ಈ ಸಂಸ್ಥೆಯ ಎಲ್ಲ ಸದಸ್ಯರು ಸಹ ಸಹಕಾರ ಭಾರತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಪ್ರಶಂಶಿಸಿದರು.

ಚನ್ನಗಿರಿ ತಾಲೂಕಿನಲ್ಲಿ ತುಮ್ ಕೋಸ್ ಸಂಸ್ಥೆ ರೈತರಿಗೆ ಹೆಚ್ಚಿನ ಸಹಕಾರವನ್ನು ನೀಡುತ್ತಿದೆ. ಇದರಿಂದ ಮಧ್ಯ ಕರ್ನಾಟಕ ಭಾಗದಲ್ಲಿ ತುಮ್ ಕೋಸ್ ಸಂಸ್ಥೆ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಹಕಾರ ಭಾರತಿಯ ಪ್ರಭುದೇವ್, ಮಂಜುನಾಥ್, ತುಮ್ ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ನಿರ್ದೇಶಕರಾದ ಟಿ.ವಿ.ರಾಜು ಪಟೇಲ್, ಪ್ರಭುಲಿಂಗಪ್ಪ, ವಿಜಿ ಗೌಡ್ರು, ಓಂಕಾರಮೂರ್ತಿ, ಜಿ.ಆರ್. ಶಿವಕುಮಾರ್, ಮಾಚನಾಯ್ಕನಹಳ್ಳಿ ಜಯಣ್ಣ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಧು ಸೇರಿದಂತೆ ಸಂಸ್ಥೆಯ ಎಲ್ಲ ನಿರ್ದೇಶಕರು, ಅಡಕೆ ಬೆಳೆಗಾರರು ಹಾಜರಿದ್ದರು.

- - -

-18ಕೆಸಿಎನ್‌ಜಿ2:

ಚನ್ನಗಿರಿ ಪಟ್ಟಣದ ತುಮ್ ಕೋಸ್ ಸಂಸ್ಥೆಯ ಕೇಂದ್ರ ಕಚೇರಿಗೆ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ.ಉದಯ್ ಜೋಷಿ ಭೇಟಿ ನೀಡಿದರು.