ಕ್ರಾಂತಿಕಾರಿ ಭಗತ್ ಸಿಂಗ್ ಯುವಕರಿಗೆ ಮಾದರಿ-ಶಿವಾನಂದ ದೊಡ್ಡಮನಿ

| Published : Sep 29 2025, 01:05 AM IST

ಕ್ರಾಂತಿಕಾರಿ ಭಗತ್ ಸಿಂಗ್ ಯುವಕರಿಗೆ ಮಾದರಿ-ಶಿವಾನಂದ ದೊಡ್ಡಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯe ಎಂದರೆ ಕೇವಲ ಬ್ರಿಟಿಷರ ಆಡಳಿತದಿಂದ ಹೊರಬರುವುದಲ್ಲ, ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸುವುದೂ ಆಗಿದೆ. ದೇಶದ ಹಿತಕ್ಕಾಗಿ ಶ್ರಮಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ಹೇಳಿದರು.

ಶಿಗ್ಗಾಂವಿ: ಸ್ವಾತಂತ್ರ‍್ಯ ಎಂದರೆ ಕೇವಲ ಬ್ರಿಟಿಷರ ಆಡಳಿತದಿಂದ ಹೊರಬರುವುದಲ್ಲ, ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸುವುದೂ ಆಗಿದೆ. ದೇಶದ ಹಿತಕ್ಕಾಗಿ ಶ್ರಮಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ಹೇಳಿದರು.ತಾಲೂಕಿನ ಕುನ್ನೂರು ಗ್ರಾಮದಲ್ಲಿ ಭಗತ್ ಸಿಂಗ್ ಯುವಕ ಮಂಡಳದಿಂದ ಭಾನುವಾರ ಆಯೋಜಿಸಲಾದ ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಗತ್ ಸಿಂಗ್ ಅವರ ದಿನಾಚರಣೆಯು ಕೇವಲ ಸ್ಮರಣೆ ಅಲ್ಲ, ಅವರ ತ್ಯಾಗದಿಂದ ಯುವಜನತೆ ಕಲಿಯಬೇಕಾದುದು ಬಹಳಷ್ಟಿದೆ. ನಮ್ಮಲ್ಲಿ ದೇಶಪ್ರೇಮ, ನೈತಿಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಸ್ವಾತಂತ್ರ‍್ಯ ಹೋರಾಟಗಾರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.ಭಗತ್ ಸಿಂಗ್ ಯುವಕ ಮಂಡಳದ ಅಧ್ಯಕ್ಷ ಈರಣ್ಣ ಓಲೇಕಾರ ಮಾತನಾಡಿ, ಬಡವರ ಅನ್ಯಾಯಕ್ಕೂಳಗಾದವರ ಪರ ನಿಲ್ಲುವ ಹಾಗೂ ನ್ಯಾಯಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡುವ ಸದುದ್ದೇಶದಿಂದ ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಸಂಘ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ. ಸಮಾಜಕ್ಕಾಗಿ ನಮ್ಮಿಂದಾದ ಕೆಲಸ ಮಾಡಲು ನಮ್ಮ ಸಂಘದ ಎಲ್ಲ ಸದಸ್ಯರು ಉತ್ಸುಕರಾಗಿದ್ದೇವೆ. ಭಗತ್ ಸಿಂಗ್ ಅವರು ನಮಗೆಲ್ಲ ಪ್ರೇರಣೆ ಆಗಿದ್ದಾರೆ ಎಂದರು.ಸದಸ್ಯರಾದ ನಾಗರಾಜ ಶೆಟ್ಟಪ್ಪನವರ ಮಾತನಾಡಿ, ಸಂಘ ಆರಂಭವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಪ್ರಸ್ತಕ್ತ ವರ್ಷದಲ್ಲಿ ಆ ಕಾರ್ಯವನ್ನು ಮುಂದುವರೆಸುತ್ತ ಸರ್ಕಾರಿ ಶಾಲೆಗಳಲ್ಲಿ ಸಸಿ ನೆಡುವುದರ ಮೂಲಕ ಭಗತ್ ಸಿಂಗ್ ಅವರ ಜನ್ಮದಿನ ಆಚರಿಸಿದ್ದೇವೆ ಎಂದರು.ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಸೋಮಯ್ಯನವರ ಹಿರೇಮಠ ಅವರ ಸಾನಿಧ್ಯದಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಗ್ರಾಮದ ಹಿರಿಯರೊಂದಿಗೆ ಪೂಜೆ ಸಲ್ಲಿಸಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ಆವರಣದಲ್ಲಿ ಹಣ್ಣು ಬಿಡುವ ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಬ್ಯಾಹಟ್ಟಿ, ಸುರೇಶಗೌಡ ಪಾಟೀಲ, ವರ್ಧಮಾನ ಶೆಟ್ಟಪ್ಪನವರ, ಯಲ್ಲಪ್ಪ ನವಲೂರ, ಕಲ್ಲಪ್ಪ ಅಗಸಿಮನಿ, ಕಲ್ಲಪ್ಪ ಬೀರವಳ್ಳಿ, ಶಂಕರಗೌಡ ಪಾಟೀಲ, ಸಹದೇವಪ್ಪ ಬೀರವಳ್ಳಿ, ಮರೆತೆಮ್ಮಪ್ಪ ಮತ್ತಿಗಟ್ಟಿ, ವಿನಾಯಕ ಮರಿಸಿದ್ದಣ್ಣವರ, ದೇವರಾಜ ಹರಿಜನ, ಯಲ್ಲಪ್ಪ ಶ್ಯಾಡಂಬಿ, ಆನಂದ ಓಲೇಕಾರ, ಷಣ್ಮುಖಗೌಡ ಪಾಟೀಲ, ರಮೇಶ ಪತ್ತಾರ, ಮುಖ್ಯೋಪಾಧ್ಯಾಯಿನಿ ಪಿ.ಬಿ ಸಾಬೋಜಿ, ಮುಮತಾಜ, ಮಹೇಶ ಮುಂದಿನಮನಿ, ಭಗತ್ ಸಿಂಗ್ ಯುವಕ ಮಂಡಳದ ಉಪಾಧ್ಯಕ್ಷ ಬಸವರಾಜ ದೊಡ್ಡಮನಿ, ಕಾರ್ಯದರ್ಶಿ ದಾದಾಪೀರ ಸಂಶಿ, ಖಜಾಂಚಿ ಗುರುನಾಥ ಪಾಟೀಲ, ಸದಸ್ಯರಾದ ಮಹಾಲಿಂಗಸ್ವಾಮಿ ಹಿರೇಮಠ, ಮಂಜುನಾಥ ಕೊಟಗಾರ, ಮಂಜುನಾಥ ಕರಡಿ, ಚೌಡೇಶ ಮಣಕಟ್ಟಿ, ಹನುಮಂತಪ್ಪ ಮಣಕಟ್ಟಿ, ಸಾದಿಕ್ ಮತ್ತೇಖಾನ, ಸಚಿನ್ ಬೀರವಳ್ಳಿ, ಕಿರಣ ಮರಸಿದ್ದಣ್ಣವರ, ಸಂತೋಷ ಓಲೇಕಾರ ಸೇರಿದಂತೆ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.