ರಾಜ್ಯ ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳಿಗೆ ಬೇಡ್ತಿ-ಅಘನಾಶಿನಿ ಸಮಿತಿಯ ಆಗ್ರಹ
ಕನ್ನಡಪ್ರಭ ವಾರ್ತೆ ಶಿರಸಿಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ನಿಯೋಗ ಬೆಂಗಳೂರಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಜಲ ಅಭಿವೃದ್ದಿ ಸಂಸ್ಥೆಯ ಮುಖ್ಯ ಎಂಜಿನಿಯರ್ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿ ವೈಜ್ಞಾನಿಕ ಮಾಹಿತಿಗಳ ವರದಿ ಸಲ್ಲಿಸಿತು.
ಪಟ್ಟಣದ ಹೊಳೆಯಲ್ಲೇ ೭ ಪಂಚಾಯಿತಿಗಳ ೧೦೦೦ ಜನರು ನದಿ ಪೂಜೆ ಮಾಡಲು ಹೋದಾಗ ಚಿಕ್ಕ ಹಳ್ಳದ ರೀತಿಯಲ್ಲಿ ಇಲ್ಲಿ ನೀರು ಹರಿಯುವ ಸ್ಥಿತಿಯನ್ನು ಎತ್ತಿ ಹೇಳಿದರು. ನೀರೇ ಇಲ್ಲದ ಶಾಲ್ಮಲೆ, ಬೇಡ್ತಿ ಅಘನಾಶಿನಿ ನದಿಗಳ ನೀರಿನ ಲೆಕ್ಕ ತಲೆಕೆಳಗಾಗಿದೆ. ಪಶ್ಚಿಮ ಘಟ್ಟದ ಬೃಹತ ಯೋಜನೆಗಳ ಭಾರದಿಂದ ವಿನಾಶದ ಪರಿಸ್ಥಿತಿಗೆ ಬಂದಿದೆ ಎಂದು ಸಮಿತಿ ತಜ್ಞರು ಪ್ರತಿಪಾದಿಸಿದರು.ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಂಚಾಲಕರಾದ ಡಾ. ಬಾಲಚಂದ್ರ ಸಾಯಿಮನೆ, ನಾರಾಯಣ ಗಡೀಕೈ, ಗಣಪತಿ ಕೆ., ವಿವೇಕ್ ನರಹರಿ ಮುಂತಾದವರು ತಜ್ಞ ಮಾಹಿತಿಗಳನ್ನು ಆಧಾರ ಸಹಿತ ಗಮನಕ್ಕೆ ತಂದರು.ಉ.ಕ. ಜಿಲ್ಲಾ ಕೆಡಿಪಿ ಸಭೆ ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡಬೇಕು ಎಂದು ಕೈಗೊಂಡ ನಿರ್ಣಯದ ಬಗ್ಗೆ ನಿಯೋಗ ಗಮನ ಸೆಳೆಯಿತು.ನಂತರ ರಾಜ್ಯ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಲಕರ್ಣಿ ಹಾಗೂ ಮುಖ್ಯ ಎಂಜಿನಿಯರ್‌ಗಳ ತಂಡವನ್ನು ಬೇಡ್ತಿ ಅಘನಾಶಿನಿ ಸಮಿತಿ ಭೇಟಿ ಮಾಡಿ ಚರ್ಚೆ ನಡೆಸಿತು.
ಬೆಂಗಳೂರಿನ ಬೇಡ್ತಿ ಅಘನಾಶಿನಿ ಸಮಿತಿ ಕಾರ್ಯಕರ್ತರ ಜೊತೆ ನಡೆದ ಸಭೆಯಲ್ಲಿ ಭೂಗರ್ಭ ಶಾಸ್ತ್ರಜ್ಞ ವಿ.ಆರ್. ಹೆಗಡೆ ರಾಜ್ಯದ ನೀರಾವರಿ ಯೊಜನೆಗಳ ವಿಫಲತೆಯ ಕರಾಳ ಮುಖದ ವಿವರ ಮಂಡಿಸಿದರು.
ಸಮಿತಿಯ ಸಾಮಾಜಿಕ ಜಾಲತಾಣ ಭಗಿರಥಕ್ಕೆ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಶುಭ ಹಾರೈಸಿದರು. ಜಾಲತಾಣದ ಸಂಚಾಲಕ ವಿವೇಕ ಕಿಬ್ಬಳ್ಳಿ, ಭಗಿರಥ ಯಶಸ್ವಿಗೊಳಿಸಲು ಅನುಸರಿಸಬೇಕಾದ ದಾರಿ ಮಂಡಿಸಿದರು.