ರೋಟರಿ ಮಿಸ್ಟಿ ಹಿಲ್ಸ್‌ ಮಕ್ಕಳ ದಸರಾ

| Published : Oct 01 2025, 01:01 AM IST

ಸಾರಾಂಶ

ಮಕ್ಕಳ ದಸರಾದಲ್ಲಿ ಕಳೆದ ವರ್ಷದ ವಿಜೇತ ತಂಡ ಟೀಂ ಅಗ್ನಿ ಈ ವರ್ಷವೂ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾದ ಮಕ್ಕಳ ದಸರಾದಲ್ಲಿನ ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಕಳೆದ ವರ್ಷದ ವಿಜೇತ ತಂಡ ಟೀಂ ಅಗ್ನಿ, ಈ ವರ್ಷವೂ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿತು. ಪಾರ್ಕ್‌ ಸೈಡ್ ಕೇಸರಿ ಮಕ್ಕಳ ಸಂಘ ದ್ವಿತೀಯ ಸ್ಥಾನ ಪಡೆದರೆ, ಕ್ರಿಯೇಟಿವ್ ಬಾಯ್ಸ್ ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು. ಚತುರ್ಥ ಬಹುಮಾನವನ್ನು ಟೀಂ ವಾರಿಯರ್ಸ್ ಮತ್ತು ಟೀಂ 14 ಸಮಧಾನಕರ ಬಹುಮಾನ ಪಡೆದುಕೊಂಡಿತು.ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತ ರೋಟರಿ ಮಿಸ್ಟಿ ಹಿಲ್ಸ್‌ನ 12ನೇ ವರ್ಷದ ಮಕ್ಕಳ ದಸರಾದ ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ವಿಜೇತರ ಮಾಹಿತಿ ಇಂತಿದೆ.ಮಕ್ಕಳ ಸಂತೆ:ಪ್ರಥಮ- ಬೊಳ್ಳಮ್ಮ ಎ.ಎ., ಬೊಳ್ಳಮ್ಮ ಎಚ್.ಎನ್. ಚೋಂದಮ್ಮ, ಕೆ.ಕೆ. ಲಿಷಾ ದೇಚಮ್ಮ. ದ್ವಿತೀಯ-ಶೀತಲ್, ಜಸಿಕಾ. ತೃತೀಯ- ಕವಿನ್ ಎನ್.ಟಿ., ಕಾವೇರಿ, ಎನ್.ಎಸ್. ಚತುರ್ಥ- ಲಿಪಿಕಾ, ಜಸ್ವಿನ್, ಮಾನ್ವಿತ್, ವೇದಿಕಾ, ಚಿರಾಗ್. ಸಮಾಧಾನಕರ- ಪುಪ್ಪಿಕಾ ಪಿ.ಡಿ., ಬಿ.ಎನ್. ಜ್ಞಾನಿಕ, ತಶ್ವಿನ್ ಬಿ.ಪಿ., ಲವಿತ್ ಬಿ.ಪಿ., ಲಿಯಾನ್ ಸುಬ್ಬಯ್ಯ.

ಮಕ್ಕಳ ಅಂಗಡಿ:ಪ್ರಥಮ- ಶಾರ್ವಿ, ಶ್ಲೋಕ. ದ್ವಿತೀಯ- ದಿಯಾನ್, ಧಿಯಾರ. ತೃತೀಯ- ಸಿಂಚನ, ಚೈತ್ರ. ಚತುರ್ಥ- ಹಿರಣ್, ಶಮಿತ್. ಸಮಾಧಾನಕರ- ಸ್ವರ, ದೀತ್ಯ.ಕ್ಲೇ ಮಾಡೆಲಿಂಗ್ ಸ್ಪರ್ಧೆ (5ರಿಂದ 7ನೇ ತರಗತಿ)

ಪ್ರಥಮ- ಅರ್ಷಾದ್ ಅಹಮ್ಮದ್, ದ್ವಿತೀಯ- ಸಖಿತ್, ತೃತೀಯ- ಗ್ರಹಿಥ್, ಚತುರ್ಥ- ಯಕ್ಷಿತ್, ಸಮಧಾನಕರ- ಸಾಗರಿ.

8 ರಿಂದ 10 ನೇ ತರಗತಿ ವಿಭಾಗ: ಪ್ರಥಮ - ಹರ್ಷಿತ್‌ ಪೊನ್ನಪ್ಪ, ದ್ವಿತೀಯ- ಉದ್ಯಾನ್, ತೃತೀಯ- ಪರ್ವಿನ್, ಚತುರ್ಥ- ಪ್ರಧಾನ್ ಬಸಪ್ಪ ಕೆ.ಪಿ., ಸಮಧಾನಕರ- ಚಂದನ್ ಪಿ.ಆರ್.ಛದ್ಮವೇಷ ಸ್ಪರ್ಧೆ: (ಎಲ್‌ಕೆಜಿ, ಯುಕೆಜಿ ವಿಭಾಗ)

ಪ್ರಥಮ- ಶ್ರೇಷ್ಟ ತನಿಷ್ಟ, ದ್ವಿತೀಯ- ಜಾಗೃತಿ, ತೃತೀಯ- ವೈಭವ್, ಚತುರ್ಥ- ರೋಹಿತ್ ಬಿ.ವಿ., ಸಮಧಾನಕರ- ಸೃತಿ.ಒಂದರಿಂದ ನಾಲ್ಕನೇ ತರಗತಿ ವಿಭಾಗ: ಪ್ರಥಮ- ಧಿವಿನ್, ದ್ವಿತೀಯ- ಗಾನವಿ, ತೃತೀಯ- ಆರುಷ್, ಚತುರ್ಥ- ಓವಿಯ, ಸಮಾಧಾನಕರ- ಆರಾಧ್ಯ.5ರಿಂದ 7ನೇ ತರಗತಿ ವಿಭಾಗ: ಪ್ರಥಮ- ವರ್ಷಿತಾ, ದ್ವಿತೀಯ- ಜನ್ಯಾ ಹರೀಶ್, ತೃತೀಯ- ದೃಷಿಕ, ಚತುರ್ತ- ಯಶ್ವಂತ್, ಸಮಾಧಾನಕರ- ರಕ್ಷಿತ.ತೀರ್ಪುಗಾರರಾಗಿ ಮಲ್ಲಿಕಾ, ಸೌಮ್ಯ ನಿರಂಜನ್, ಬಾಳೆಯಡ ಸವಿತಾ ಪೂವಯ್ಯ, ಪ್ರಿಯಾ ನವೀನ್, ಸ್ವರ್ಣ, ನೇತ್ರಾವತಿ ಬಿ.ಎಂ., ಬಿಂದು ಹರೀಶ್, ಮಮತಾ ಶಾಸ್ತ್ರಿ, ಮಮತಾ ಚಿಣ್ಣಪ್ಪ, ಮಂಜುನಾಥ್, ಶ್ಲೋಕ ಆಳ್ವ, ಶಶಿಕಲಾ, ಪಿ.ಜಿ. ಮಂಜುನಾಥ್, ಇ.ಎಲ್. ಸುರೇಶ್, ಎಚ್.ಪಿ. ರಘು ಕಾರ್ಯನಿರ್ವಹಿಸಿದರು.ಈ ಬಾರಿ ಮಕ್ಕಳ ದಸರಾಕ್ಕೆ ದಾಖಲೆಯ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಮಳೆಯ ನಡುವೆಯೂ ಉತ್ಸಾಹ ಕಳೆದುಕೊಳ್ಳದ ಮಕ್ಕಳು, ಅತ್ಯಂತ ಸಡಗರದಿಂದಲೇ ಪಾಲ್ಗೊಂಡಿದ್ದರು. ಮಕ್ಕಳ ಅಂಗಡಿಗೆ 115, ಮಕ್ಕಳ ಸಂತೆಗೆ 82, ಛದ್ಮವೇಷಕ್ಕೆ 67, ಕ್ಲೇಮಾಡೆಲಿಂಗ್‌ಗೆ 15 ಮತ್ತು ಮಕ್ಕಳ ಮಂಟಪಕ್ಕೆ 18 ಸ್ಪರ್ಧಿಗಳು ಪಾಲ್ಗೊಂಡಿದ್ದರು ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆಮಕ್ಕಳ ಮಂಟಪದ ತೀರ್ಪುಗಾರಿಕೆ ಸುಮಾರು 4.30 ಗಂಟೆ ನಡೆಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್, ಡಾ.ಜಿ.ಡಿ. ಚೇತನ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಮೂಡಾ ಸದಸ್ಯೆ ಮೀನಾಜ್ ಪ್ರವೀಣ್, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಬಹುಮಾನಗಳನ್ನು ವಿತರಿಸಿದರು.