ಮರಗೋಡಿನ ಶಿವ ಪಾರ್ವತಿ ದೇವಾಲಯದಲ್ಲಿ ಗೋಪೂಜೆ, ದುರ್ಗಾಪೂಜೆ ಸಂಪನ್ನ

| Published : Oct 01 2025, 01:01 AM IST

ಸಾರಾಂಶ

ಮರಗೋಡಿನ ಶಿವ ಪಾರ್ವತಿ ದೇವಾಲಯದಲ್ಲಿ ಗೋ ಪೂಜೆ ದುರ್ಗಾಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃವಾಹಿನಿ ಮರಗೋಡು ಮತ್ತು ಮೂರ್ನಾಡು ಘಟಕದ ಸಹಯೋಗದಲ್ಲಿ ಮರಗೋಡಿನ ಶಿವ ಪಾರ್ವತಿ ದೇವಾಲಯದಲ್ಲಿ ಗೋಪೂಜೆ ಮತ್ತು ದುರ್ಗಾಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯರಾದ ಭಾಗೀರಥಿ ಹುಲಿತಾಳ ಅವರು ದೇವರ ಮೇಲಿನ ನಂಬಿಕೆ ಮತ್ತು ಗೋವುಗಳ ಸಾಕಾಣೆಯ ಮಹತ್ವವನ್ನು ತಿಳಿಸಿದರು.ಬೌದ್ಧಿಕ್ ಮಹಾಬಲೇಶ್ವರ್ ಭಟ್ ಮಾತನಾಡಿ ಗೋವುಗಳ ಪೂಜೆಯಿಂದ ಐಶ್ವರ್ಯ, ಆರೋಗ್ಯ ಸಮೃದ್ಧಿಯಾಗುತ್ತದೆ. ಹಾಲು ಮತ್ತು ಗೋಮೂತ್ರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.ಅರ್ಚಕರಾದ ಅಮಿತ್ ಕೇದಿರಾಯ್ ಸಂಸ್ಕಾರದ ಬಗ್ಗೆ ವಿವರಿಸಿದರು. ಮರಗೋಡು ಘಟಕದ ಮಾತೃಶಕ್ತಿ ಪ್ರಮುಖ್ ಗುಡ್ಡೆಮನೆ ರೋಹಿಣಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯೋಧ್ಯಾ ಕರ ಸೇವಕರನ್ನು ಫಲತಾಂಬೂಲ ನೀಡಿ ಗೌರವಿಸಲಾಯಿತು. ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕೋಶಾಧ್ಯಕ್ಷ ಸಂಪತ್ ಕುಮಾರ್, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಸಹ ಕಾರ್ಯದರ್ಶಿ ಯತೀಶ್, ಪ್ರಸಾರ ಪ್ರಮುಖ್ ಶಾನ್ ಸೋಮಣ್ಣ, ಸೇವಾ ಪ್ರಮುಖ್ ಮಮತಾ ಶ್ರೀಹರಿ, ತಾಲೂಕು ಪ್ರಮುಖರಾದ ಸಜೀವ, ಪ್ರವೀಣ್, ಮರಗೋಡು ಹಾಗೂ ಮೂರ್ನಾಡು ಘಟಕದ ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಪದಾಧಿಕಾರಿಗಳು, ಕಾರ್ಯಕರ್ತರು, ಹಿಂದೂ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಘಟಕದ ಅಧ್ಯಕ್ಷ ಚಾರಿಮಂಡ ಚಂಗಪ್ಪ ಸ್ವಾಗತಿಸಿ, ಮಾತೃಶಕ್ತಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್ ನಿರೂಪಿಸಿ, ಭಜರಂಗದಳದ ಮಂಜುನಾಥ್ ವಂದಿಸಿದರು.