ಬೆಂಗಳೂರು : ಈದ್‌ ಮಿಲಾದ್‌ ಮೆರವಣಿಗೆ : ನಾಡಿದ್ದು ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡು

| Published : Sep 14 2024, 01:48 AM IST / Updated: Sep 14 2024, 11:08 AM IST

ಬೆಂಗಳೂರು : ಈದ್‌ ಮಿಲಾದ್‌ ಮೆರವಣಿಗೆ : ನಾಡಿದ್ದು ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡು
Share this Article
  • FB
  • TW
  • Linkdin
  • Email

ಸಾರಾಂಶ

ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಸೆ.16ರಂದು   ಸುಗಮ ಸಂಚಾರದ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ.

 ಬೆಂಗಳೂರು :  ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಸೆ.16ರಂದು ಮುಸ್ಲಿಂ ಬಾಂಧವರು ನಗರದ ವಿವಿಧ ಭಾಗಗಳಿಂದ ಅಲಂಕೃತ ವಾಹನಗಳು ಹಾಗೂ ಮೆರವಣಿ ಮುಖಾಂತರ ನೃತಪತುಂಗ ರಸ್ತೆಯ ವೈಎಂಸಿಎ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಸುಗಮ ಸಂಚಾರದ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ.

ಈದ್‌ ಮಿಲಾದ್‌ ಮೆರವಣಿಗೆ ಮಾರ್ಗಗಳು:

ಈದ್‌ ಮಿಲಾದ್‌ ಮೆರವಣಿಗೆಗಳು ಜೆ.ಸಿ ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ಮೆಂಟ್ ಕಡೆಗೆ, ಯಲಹಂಕ ಓಲ್ಡ್ ಟೌನ್ ಮಸೀದಿಯಿಂದ ಯಲಹಂಕ ಓಲ್ಡ್ ಟ್ರೈನ್ ಮಸೀದಿಯವರೆಗೆ, ಬೆಳ್ಳಳ್ಳಿ ಕ್ರಾಸ್ ನಿಂದ ನಾಗವಾರ ಸಿಗ್ನಲ್, ರಾಜಗೋಪಾಲನಗರ ಮುಖ್ಯರಸ್ತೆಯಿಂದ ಪೀಣ್ಯ 2ನೇ ಹಂತದವರೆಗೆ, ಸೌತ್ ಎಂಡ್ ಸರ್ಕಲ್ ನಿಂದ ಆರ್.ವಿ ರಸ್ತೆ ಮೂಲಕ ಲಾಲ್‌ ಬಾಗ್‌ ವೆಸ್ಟ್ ಗೇಟ್ ಸರ್ಕಲ್‌ವರೆಗೆ, ಬೇಂದ್ರೆ ಜಂಕ್ಷನ್‌‌ ನಿಂದ ಓಬಳಪ್ಪ ಗಾರ್ಡನ್ ಜಂಕ್ಷನ್‌, ಮಹಾಲಿಂಗೇಶ್ವರ ಬಡಾವಣೆಯಿಂದ ಆಡುಗೋಡಿ ಈ ಮಾರ್ಗಗಳಿಂದ ವೈಎಂಸಿಎ ಮೈದಾನಕ್ಕೆ ಬರಲಿವೆ.

ಸಂಚಾರ ನಿರ್ಬಂಧಿತ ಸ್ಥಳಗಳು:

* ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ ಮೂಲಕ ಟ್ಯಾನರಿ ರಸ್ತೆ ಕಡೆಗೆ

* ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ.ರಸ್ತೆ ಮೂಲಕ ನೇತಾಜಿ ಜಂಕ್ಷನ್ ವರೆಗೆ ಎಂ.ಎಂ.ರಸ್ತೆ ರಸ್ತೆಯಲ್ಲಿ ದ್ವಿಮುಖ ಸಂಚಾರದ ಬದಲು ಏಕ ಮುಖ ಸಂಚಾರ

*ಹೇನ್ಸ್‌ ರಸ್ತೆಯಲ್ಲಿ ನೇತಾಜಿ ಜಂಕ್ಷನ್ ನಿಂದ ಪೇಸ್ಟ್ ಜಂಕ್ಷನ್ ವರೆಗೆ

* ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ ರಸ್ತೆ ವರೆಗೆ ಭಾಗಶಃ ಸಂಚಾರ ನಿರ್ಬಂಧ

ವಾಹನ ನಿಲುಗಡೆ ನಿರ್ಬಂಧಿತ ರಸ್ತೆಗಳು:

* ನೃಪತುಂಗ ರಸ್ತೆ-ಕೆ.ಆರ್‌.ವೃತ್ತದಿಂದ ಪೊಲೀಸ್‌ ಕಾರ್ನರ್‌

* ಕೆ.ಜಿ.ರಸ್ತೆ- ಪೊಲೀಸ್‌ ಕಾರ್ನರ್‌ನಿಂದ ಮೈಸೂರು ಬ್ಯಾಂಕ್‌ ವೃತ್ತ

* ಎನ್‌.ಆರ್‌.ರಸ್ತೆ- ಟೌನ್‌ ಹಾಲ್‌ ಜಂಕ್ಷನ್‌ನಿಂದ ಪೊಲೀಸ್‌ ಕಾರ್ನರ್‌

*ಪಿ.ಕಾಳಿಂಗರಾವ್ ರಸ್ತೆ- ಎನ್.ಆರ್ ಜಂಕ್ಷನ್‌ನಿಂದ ಸುಬ್ಬಯ್ಯ ವೃತ್ತ

* ಕಸ್ತೂರಿಬಾ ರಸ್ತೆ- ಹಡ್ರನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ-ಸಿದ್ದಲಿಂಗಯ್ಯ ವೃತ್ತದಿಂದ ಕ್ವೀನ್ಸ್‌ ವೃತ್ತ

* ಮಲ್ಯ ಆಸ್ಪತ್ರೆ ರಸ್ತೆ- ಸಿದ್ಧಲಿಂಗಯ್ಯ ವೃತ್ತದಿಂದ ಆರ್‌ಆರ್‌ಎಂಆರ್‌ ಜಂಕ್ಷನ್‌

*ಆರ್‌ಆರ್‌ಎಂಆರ್‌ ರಸ್ತೆ-ರಿಚ್ಮಂಡ್‌ ವೃತ್ತದಿಂದ ಹಡ್ಸನ್‌ ವೃತ್ತ

*ಎಂ.ಜಿ.ರಸ್ತೆ- ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತ

* ಸೆಂಟ್ರಲ್‌ ಸ್ಟ್ರೀಟ್‌-ಅನಿಲ್‌ ಕುಂಬ್ಳೆ ವೃತ್ತದಿಂದ ಬಿಆರ್‌ವಿ ಜಂಕ್ಷನ್‌

*ಕ್ವೀನ್ಸ್ ರಸ್ತೆ- ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್‌ ವೃತ್ತ

* ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ- ಕೆ.ಆರ್‌.ವೃತ್ತದಿಂದ ಬಾಳೇಕುಂದ್ರಿ ವೃತ್ತ

*ಶೇಷಾದ್ರಿ ರಸ್ತೆ- ಮಹಾರಾಣಿ ವೃತ್ತದಿಂದ ಕೆ.ಆರ್‌.ವೃತ್ತ

* ಹಳೇ ಅಂಚೆ ಕಚೇರಿ ರಸ್ತೆ- ಮೈಸೂರು ಬ್ಯಾಂಕ್‌ ವೃತ್ತದಿಂದ ಕೆ.ಆರ್‌.ವೃತ್ತದ ವರೆಗೆ

* ಕಬ್ಬನ್‌ ಉದ್ಯಾನದ ಒಳ ಆವರಣ

* ನೇತಾಜಿ ರಸ್ತೆ, ಹೇನ್ಸ್‌ ರಸ್ತೆ, ಎಂ.ಎಂ.ರಸ್ತೆ, ಮಾಸ್ಕ್‌ ರಸ್ತೆ, ಕೋಲ್ಸ್‌ ರಸ್ತೆ, ಸೌಂಡರ್ಸ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ಯೆ, ಮಿಲ್ಲರ್ಸ್‌ ರಸ್ತೆಗಳ ಎರಡೂ ಬದಿ

* ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್‌ ವರೆಗೆ ರಸ್ತೆಯ ಎರಡೂ ಬದಿ

* ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಪೊಲೀಸ್‌ ಠಾಣೆ ವರೆಗೆ ರಸ್ತೆಯ ಎರಡೂ ಬದಿ

* ಎಚ್‌ಬಿಆರ್‌ ಬಡಾವಣೆ ಸಿದ್ಧಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್‌ ಜಂಕ್ಷನ್‌ ವರೆಗೆ ರಸ್ತೆ ಎರಡೂ ಬದಿ

---