ಧಾರವಾಡ: ಇಲ್ಲಿಯ ಮರಾಠಾ ವಿದ್ಯಾಪ್ರಸಾರಕ ಮಂಡಳದ ಕಾಲೇಜು ಆವರಣದಲ್ಲಿ ಶನಿವಾರ ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ''''''''''''''''ಹಳ್ಳಿ ಹಬ್ಬ'''''''''''''''' ಹೆಸರಿನ ಜಾನಪದ ಜಾತ್ರೆಯು ಜನಮನ ಸೆಳೆಯಿತು.

ಆಧುನಿಕತೆಯ ಗೀಳಿನಲ್ಲಿ ಕಳೆದು ಹೋಗುತ್ತಿರುವ ಹಳ್ಳಿ ಸೊಗಡನ್ನು ಯುವ ಪೀಳಿಗೆಗೆ ಪರಿಚಯಿಸಲು ಆಯೋಜಿಸಿದ್ದ ''''''''''''''''ಜಾನಪದ ಜಾತ್ರೆ'''''''''''''''' ಕಣ್ಮನ ಸೆಳೆಯಿತು.

ಎತ್ತು-ಚಕ್ಕಡಿ ಮೆರವಣಿಗೆ:

ಜಾತ್ರೆಯ ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಎತ್ತು-ಚಕ್ಕಡಿಗಳ ಮೆರವಣಿಗೆ. ಶೃಂಗಾರಗೊಂಡ ಎತ್ತು, ಗಂಟೆಯ ನಾದ ಹಾಗೂ ಸಾಲಾಗಿ ಸಾಗುತ್ತಿದ್ದ ಚಕ್ಕಡಿಗಳು ಕಾಲೇಜು ಆವರಣಕ್ಕೆ ಗ್ರಾಮೀಣ ಕಳೆಯನ್ನು ತಂದುಕೊಡುವಲ್ಲಿ ಯಶಸ್ವಿಯಾದವು.

ಒಂದೆಡೆ ಹಳೆಯ ಚಕ್ಕಡಿಗಳಿದ್ದರೆ, ಇನ್ನೊಂದೆಡೆ ಇಂದಿನ ಆಧುನಿಕ ಕೃಷಿಯ ಸಂಕೇತವಾದ ಟ್ರ್ಯಾಕ್ಟರ್‌ಗಳು ಜಾನಪದ ಜಾತ್ರೆಗೆ ಹೊಸ ವೇಗ ನೀಡಿದವು. ಟ್ರ್ಯಾಕ್ಟರ್‌ಗಳ ಡಿಜೆ ಶಬ್ದದ ಅಬ್ಬರಕ್ಕೆ ಯುವಕರು ಮತ್ತು ಯುವತಿಯರು ಹೆಜ್ಜೆ ಹಾಕಿದರು. ಜಾನಪದ ಗೀತೆ ಮತ್ತು ಡೊಳ್ಳಿನ ಪದಗಳ ರಿಮಿಕ್ಸ್‌ಗೆ ಇಡೀ ಆವರಣವೇ ಧೂಳೆಬ್ಬಿಸಿತು. ಹಳೇ ಬೇರು ಹೊಸ ಚಿಗುರು ಎಂಬಂತೆ ಗ್ರಾಮೀಣ ಮತ್ತು ಆಧುನಿಕತೆಯ ಸಮ್ಮಿಲನ ಇಲ್ಲಿ ಕಂಡುಬಂತು.


ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಮ್ಮ ದಿನನಿತ್ಯದ ಜೀನ್ಸ್-ಟಿಶರ್ಟ್ ಬದಿಗಿಟ್ಟು, ಅಪ್ಪಟ ಸೀಮೆ ಸಂಪ್ರದಾಯದ ಉಡುಪುಗಳಲ್ಲಿ ಮಿಂಚಿದರು. ಗ್ರಾಮೀಣ ಜನರಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಕಂಗೊಳಿಸಿದರು.ಕಾಲೇಜಿನ ಸಂಭಾಜೀ ರಾಜೇ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಪಾರ್ವತೆವ್ವ ಹೊಂಗಲ್ ಚಾಲನೆ ನೀಡಿ, ನಶಿಸುತ್ತಿರುವ ಗ್ರಾಮೀಣ ಪರಂಪರೆ ಉಳಿಸುವ ಕಾರ್ಯವನ್ನು ಶ್ಲಾಘಿಸಿದರು. ಬಣಕಾರ ಹುಲಿ ದರ್ಬಾರ್:

ಈ ಇಡೀ ಜಾನಪದ ಜಾತ್ರೆಗೆ ಅಸಲಿ ಮೆರುಗು ನೀಡಿದ್ದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರಬಗೊಂಡದ ಪ್ರಸಿದ್ಧ ''''''''''''''''ಬಣಕಾರ ಹುಲಿ'''''''''''''''' (ಪಿಪಿ ಹೋರಿ). ''''''''''''''''ಬಣಕಾರ ಹುಲಿ'''''''''''''''' ಕಾಲೇಜು ಅಂಗಳಕ್ಕೆ ಬಂದಾಕ್ಷಣ ವಿದ್ಯಾರ್ಥಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ತಲೆಗೆ ಕಟ್ಟಿದ ಬಣ್ಣ ಬಣ್ಣದ ರಿಬ್ಬನ್‌ಗಳು, ಕೊರಳಿನ ಗೆಜ್ಜೆ ಸರ, ಬೆನ್ನಿನ ಮೇಲಿನ ಅಲಂಕಾರಿಕ ಜೂಲಾವಳಿಗಳೊಂದಿಗೆ ಗಂಭೀರವಾಗಿ ಹೆಜ್ಜೆ ಹಾಕಿದ ಈ ಹೋರಿ, ಜಾತ್ರೆಯ ಅಸಲಿ ಕಳೆ ಹೆಚ್ಚಿಸಿತು.

ಮೊಬೈಲ್, ಇಂಟರ್‌ನೆಟ್‌ ಜಗತ್ತಿನಲ್ಲಿ ಯುವ ಜನಾಂಗ ಕಳೆದುಹೋಗಿದೆ. ಅವರಿಗೆ ಜಾನಪದ ಜಾತ್ರೆ ಏರ್ಪಡಿಸುವ ಮೂಲಕ ದೇಶಿ ಹಬ್ಬಗಳ ಮಹತ್ವ, ಪರಂಪರೆ, ಸಂಸ್ಕೃತಿ ತಿಳಿಸಿಕೊಡಲು ಪ್ರಯತ್ನಿಸಿದೆ ಎನ್ನುತ್ತಾರೆ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಎಂ.ಎಸ್. ಗಾಣಿಗೇರ.