ಕಾವೇರಿ ವ್ಯಾಪ್ತಿಯಲ್ಲಿ ಸಸಿಗಳನ್ನು ಬೆಳೆಸಲು ಸದ್ಗುರು ಕರೆ
KannadaprabhaNewsNetwork | Published : Oct 04 2023, 01:00 PM IST
ಕಾವೇರಿ ವ್ಯಾಪ್ತಿಯಲ್ಲಿ ಸಸಿಗಳನ್ನು ಬೆಳೆಸಲು ಸದ್ಗುರು ಕರೆ
ಸಾರಾಂಶ
ಸಮೃದ್ಧವಾಗಿ ಸಸಿಗಳನ್ನು ಬೆಳೆಯುವುದೇ ಕಾವೇರಿ ವರ್ಷ ಪೂರ್ತಿ ಹರಿಯುವಂತೆ ಮಾಡಲು ಇರುವ ಮಾರ್ಗ
ಕನ್ನಡಪ್ರಭ ವಾರ್ತೆ, ಬೆಂಗಳೂರು ‘ತಾಯಿ ಕಾವೇರಿಗೆ ನಾವು ಯಾವ ರಾಜ್ಯದವರು ಎಂಬುದು ಗೊತ್ತಿಲ್ಲ. ಬರಿದಾಗುತ್ತಿರುವ ನೀರಿನ ವಿಚಾರವಾಗಿ ಹೋರಾಡುವುದಕ್ಕಿಂತ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮೃದ್ಧವಾಗಿ ಸಸಿಗಳನ್ನು ಬೆಳೆಯುವುದೇ ಕಾವೇರಿ ವರ್ಷ ಪೂರ್ತಿ ಹರಿಯುವಂತೆ ಮಾಡಲು ಇರುವ ಮಾರ್ಗ’ ಎಂದು ಸದ್ಗುರು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಕಾವೇರಿ ತಾಯಿ ಬೇಸಿಗೆಯ ದಿನಗಳಲ್ಲಿ ಬರಿದಾಗುವ ಮೂಲಕ ನರಳುತ್ತಿದ್ದಾರೆ. ಬೃಹತ್ ಪ್ರಮಾಣದ ಮರ ಆಧಾರಿತ ಕೃಷಿಯನ್ನು ಅಳವಡಿಸುವುದು ಹಾಗೂ ಕಾವೇರಿ ಜಲಾನಯನ ಪ್ರದೇಶದ 83,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಯತೇಚ್ಛವಾಗಿ ಸಸ್ಯಗಳನ್ನು ಬೆಳೆಸುವುದು ಮಾತ್ರ ಕಾವೇರಿ ವರ್ಷದ 12 ತಿಂಗಳು ಸಮೃದ್ಧವಾಗಿ ಹರಿಯುವಂತೆ ಮಾಡಲು ಇರುವ ಮಾರ್ಗ’ ಎಂದು ಹೇಳಿದ್ದಾರೆ.