ಕೊಪ್ಪತಾಲೂಕು ಒಕ್ಕಲಿಗರ ಸಂಘದ ೨೦೨೫-೨೬ ರಿಂದ ೨೦೨೯-೩೦ರವರೆಗಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಪ್ರಥಮ ಸಭೆಯನ್ನು ಡಿ.೧೩ರ ಶನಿವಾರ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಪ್ರಥಮ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕು ಒಕ್ಕಲಿಗರ ಸಂಘದ ೨೦೨೫-೨೬ ರಿಂದ ೨೦೨೯-೩೦ರವರೆಗಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಪ್ರಥಮ ಸಭೆಯನ್ನು ಡಿ.೧೩ರ ಶನಿವಾರ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಅಧ್ಯಕ್ಷರಾಗಿ ಕಾಫಿ ಪ್ಲಾಂಟರ್ ಸಹದೇವ್ ಬಾಲಕೃಷ್ಣರವರು ಪುನರಾಯ್ಕೆ ಯಾದರು. ಯು.ಎಸ್. ಶಿವಪ್ಪ, ಬಿ.ಎಂ. ಸುರೇಶ್ ನಾಯ್ಡ್ ಮತ್ತು ಎಚ್.ಜಿ. ವೆಂಕಟೇಶ್ ಉಪಾಧ್ಯಕ್ಷ, ನಾಗರಾಜ್ ವಗಳೆ ಗೌರವ ಕಾರ್ಯದರ್ಶಿ, ಎ.ಕೆ. ಸುಧಾಕರ್ ಸಹಕಾರ್ಯದರ್ಶಿ ಮತ್ತು ಎಲ್.ಎಂ. ಪ್ರಕಾಶ್ ಖಜಾಂಚಿ ಸರ್ವಾನುಮತದಿಂದ ಆಯ್ಕೆಯಾದರು. ಎ.ಒ.ಸುರೇಶ್, ಡಿ. ನಾಗರಾಜ್, ಎಸ್.ಎನ್ ರಾಮಸ್ವಾಮಿ, ಎಸ್.ಜಿ ಜಗದೀಶ್, ಕೆ.ಪಿ. ಮದನ್, ಕವಿರಾಜ್, ಬಿ.ಎನ್. ಸುದರ್ಶನ್, ಕೆ.ಎಸ್. ಬೆಳ್ಳಪ್ಪ ಗೌಡ, ಎ.ಎನ್. ರಾಮಸ್ವಾಮಿ, ಎನ್.ಕೆ. ಸತೀಶ್, ಅನ್ನಪೂರ್ಣ ನರೇಶ್, ಕೆ.ಆರ್. ಶ್ರೀನಿವಾಸ್, ಎನ್.ಕೆ. ಸುರೇಂದ್ರ, ಟಿ.ಕೆ ಸುದರ್ಶನ್, ವೈ.ಎಸ್. ದೀಪಕ್, ಕೆ.ಟಿ ಸತೀಶ್, ಕವಿತ ನಾಗರಾಜ್ ಸೇರಿದಂತೆ ೧೭ ಸದಸ್ಯರು ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ ಅಯ್ಕೆಯಾದರುಸಂತಾಪ ಸೂಚಕ ಸಭೆ: ಇತ್ತೀಚೆಗೆ ನಿಧಾನರಾದ ಕೊಪ್ಪ ತಾಲೂಕು ಒಕ್ಕಲಿಗರ ಸಂಘದ ಸ್ಥಾಪಕ ಕಾರ್ಯದರ್ಶಿ ಎಚ್.ಎಸ್. ಶ್ರೀನಿವಾಸ್ ನಾಯ್ಕ ಚಿಕ್ಕಮಗಳೂರು ಜಿಲ್ಲಾ ಸಂಘದ ನಿರ್ದೇಶಕ ಗಣೇಶ್ ಮತ್ತು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಚಿಕ್ಕಮಗಳೂರು ಜಿಲ್ಲಾ ಮಾಜಿ ನಿರ್ದೇಶಕ ಬ್ಯಾರಳ್ಳಿ ನಾಗರಾಜ್ ಇವರು ಒಕ್ಕಲಿಗರ ಸಂಘಟನೆಗಾಗಿ ಸಲ್ಲಿಸಿದ ಸೇವೆಯನ್ನು ಸಭೆಯಲ್ಲಿ ಸ್ಮರಿಸಿ ಸಂತಾಪ ಸೂಚಿಸಲಾಯಿತು.