ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ರೈತ ಕುಟುಂಬಗಳ ಪ್ರತಿಭಟನೆ
Author : KannadaprabhaNewsNetwork
Published : Dec 15 2025, 02:45 AM IST
14ಕೆಎಂಎನ್ಡಿ-15ಶ್ರೀರಂಗಪಟ್ಟಣ ತಾಲೂಕಿನ ನೀಲಕೊಪ್ಪಲು ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಬಳಸಿದ್ದ ಸ್ಟೋಟಕಗಳ ಮೇಲೆ ರೈತರು ತಮ್ಮ ಜೀವದ ಹಂಗು ತೊರೆದು ಪ್ರತಿಭಟನೆ ನಡೆಸಿದರು. | Kannada Prabha
Image Credit: KP
ಗ್ರಾಮದ ಸರ್ವೇ ನಂ. 18ರಲ್ಲಿ ಪ್ರಭಾವಿ ವ್ಯಕ್ತಿಗಳು ಭಾರೀ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು, ರೈತ ಕುಟುಂಬಗಳ ಜಮೀನು ಕಸಿದು ದಬ್ಬಾಳಿಕೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಬಳಸಿದ್ದ ಸ್ಫೋಟಕಗಳ ಮೇಲೆ ರೈತರು ತಮ್ಮ ಜೀವದ ಹಂಗು ತೊರೆದು ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ನೀಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ವೇ ನಂ. 18ರಲ್ಲಿ ಪ್ರಭಾವಿ ವ್ಯಕ್ತಿಗಳು ಭಾರೀ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು, ರೈತ ಕುಟುಂಬಗಳ ಜಮೀನು ಕಸಿದು ದಬ್ಬಾಳಿಕೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರೈತರಿಗೆ ಸೇರಿದ್ದ ಜಮೀನಿನಲ್ಲಿ ಬಂಡೆ ಸಿಡಿಸಲು ಅಳವಡಿಸಿದ್ದ ಸ್ಫೋಟಕಗಳ ಮೇಲೆ ಸುಮಾರು 20 ದಲಿತ ಕುಟುಂಬದ ರೈತರು ಕುಳಿತು ತಮ್ಮ ಜಮೀನು ಹಾಗೂ ನ್ಯಾಯಕ್ಕಾಗಿ ಜೀವದ ಹಂಗು ತೊರೆದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದಯ್ಯ, ಗವಿಯಯ್ಯ, ಬೋರಯ್ಯ, ಚಿಕ್ಕೋನು, ಚಿಕ್ಕಜವರಯ್ಯ, ನರಸಿಂಹ, ದೊಳ್ಳಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.