ರೈತರು ಆಧುನಿಕ ಯಾಂತ್ರಿಕ ಬೇಸಾಯಕ್ಕೆ ಮಾರುಹೋಗಿ ಎಲ್ಲಾದಕ್ಕೂ ಯಂತ್ರಗಳು ಅವಲಂಭಿತರಾಗಿ ರೈತರು ದುಡಿಯುವ ವರ್ಗ ಕಡಿಮೆಯಾಗುತ್ತದೆ. ಹಾಗೆಯೇ ಗ್ರಾಮಗಳಲ್ಲಿ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗಿ ದನ ಕರು ರಾಸುಗಳ ಸಾಕದೆ ರಾಸುಗಳ ಸಂಖ್ಯೆ ಕ್ಷಿಣಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಪ್ರಸ್ತುತ ಯಾಂತ್ರಿಕ ಯುಗವಾಗಿದ ‘ಸುಗ್ಗಿ ಹಬ್ಬ’ ಕಂಗೆಟ್ಟಿದ್ದು ಸಂಕ್ರಾಂತಿ ಸಂಭ್ರಮ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿ ಖುಷಿ ಪಡುವ ಹಂತಕ್ಕೆ ತಲುಪಿ ಹಬ್ಬದ ಗತವೈಭವವನ್ನು ಕಳೆದುಕೊಂಡಿದೆ ಎಂದು ಶಾಸಕ ಕದಲೂರು ಉದಯ್ ಕಳವಳ ವ್ಯಕ್ತಪಡಿಸಿದರು.

ಸಮೀಪದ ದೊಡ್ಡರಸಿನಕೆರೆ ಗೇಟಿನ ಬಳಿ ಇರುವ ಎಸ್‌ವೈಎಸ್ ಸಮುದಾಯ ಭವನದಲ್ಲಿ ದಾರಿ ದೀಪ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಸಂಕ್ರಾಂತಿ ಸಂಭ್ರಮೋತ್ಸವ’ ಹಾಗೂ ದಾರಿದೀಪ ರತ್ನ ಪ್ರಶಸ್ತಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ರೈತರು ಆಧುನಿಕ ಯಾಂತ್ರಿಕ ಬೇಸಾಯಕ್ಕೆ ಮಾರುಹೋಗಿ ಎಲ್ಲಾದಕ್ಕೂ ಯಂತ್ರಗಳು ಅವಲಂಭಿತರಾಗಿ ರೈತರು ದುಡಿಯುವ ವರ್ಗ ಕಡಿಮೆಯಾಗುತ್ತದೆ. ಹಾಗೆಯೇ ಗ್ರಾಮಗಳಲ್ಲಿ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗಿ ದನ ಕರು ರಾಸುಗಳ ಸಾಕದೆ ರಾಸುಗಳ ಸಂಖ್ಯೆ ಕ್ಷಿಣಿಸುತ್ತಿದೆ ಎಂದರು.

ವರ್ಷ ಇಡೀ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ದೊರೆತಂತಾಗುತ್ತದೆ ಸಂಕ್ರಾಂತಿ ಹಬ್ಬವು ಗ್ರಾಮೀಣ ಸಂಸ್ಕೃತಿಯ ಸೊಗಡಿನ ಸಂಕೇತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಬ್ಬವು ಹಳ್ಳಿಗಾಡಿನಲ್ಲಿ ತನ್ನ ಮೌಲ್ಯ ಕಳೆದು ಕೊಳ್ಳುತಿದೆ. ಮುಂದಿನ ಪೀಳಿಗೆಗೆ ನಾವು ಹಬ್ಬಗಳನ್ನು ಬರಿ ಫೋಟೋಗಳಲ್ಲಿ ತೋರಿಸುವ ಕ್ಯಾಲೆಂಡರ್ ಗಳಿಲ್ಲಿ ಸಿಗುವ ರಜಾಕ್ಕೆ ಮಾತ್ರ ಸೀಮಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜನ ಸಾಮಾನ್ಯರಿಗೆ ನಮ್ಮ ಹಿರಿಯರು ವರ್ಷದ ಮೊದಲ ಬೆಳೆಯನ್ನು ಬೆಳದು ರಾಶಿ ಪೂಜೆ ನಡೆಸಿ ರಾಸುಗಳಿಗೆ ಕಿಚ್ಚು ಹಾಯಿಸುತ್ತಿದ್ದ ಗತ ವೈಭವ ಮರೆಯಗುತ್ತಿದ್ದು ನಗರ ಪ್ರದೇಶದವರಿಗೆ ಗ್ರಾಮೀಣ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಪರಿಚಯಿಸುವ ಉದ್ದೇಶದಿಂದ ಸಂಕ್ರಾಂತಿ ಸಂಭ್ರಮೊತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳಬೇಕು ಎಂದರು.

ರೈತನ ಹೊಸ ವರ್ಷದ ಮೊದಲ ಫಸಲು ಕೈ ಸೇರುವ ಮೊದಲ ಹಬ್ಬ ಎಂದರೇ ಅದು ಸಂಕ್ರಾಂತಿ ಹಬ್ಬ, ಸಂಕ್ರಾಂತಿ ಮುಖ್ಯವಾಗಿ ಸುಗ್ಗಿಯ ಹಬ್ಬ, ರೈತ ತಾನು ಬೆಳೆದ ಧವಸ, ಧಾನ್ಯಗಳ ಬೆಳೆಗಳಿಗೆ ಪೂಜೆ ಸಲ್ಲಿಸಿ ತನ್ನ ಬೆಳೆಗಳಿಗೆ ಬೆನ್ನಲುಭಾಗಿ ನಿಂತ ರಾಸುಗಳಿಗೆ ಪೂಜಿಸುವ ದಿನವಾಗಿದ್ದು ಅದನ್ನು ಎಂದು ಮರೆಯದೆ ಆಚರಿಸಿ ಎಂದರು.

ದನ ದನಕರುಗಳನ್ನು ವಿಶೇಷವಾಗಿ ಸಿಂಗರಿಸಿ ವಿಶೇಷ ಬಣ್ಣಗಳಿಂದ ಅಲಂಕರಿಸಿ ಕಬ್ಬು, ಬೆಲ್ಲ, ಬಾಳೆಹಣ್ಣು, ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸಿ ಸಂಭ್ರಮ ಪಡುತ್ತ ರಾಸುಗಳನ್ನು ಗ್ರಾಮಗಳಲ್ಲಿ ಮೆರವಣಿಗೆ ಮಾಡಿ ಅವುಗಳನ್ನು ನಂತರ ಸಂಕ್ರಾಂತಿ ಯ ಕಿಚ್ಚು ಹಾಯಿಸಿ ಸಂಭ್ರಮ ಪಡುವ ದಿನವೇ ಸಂಕ್ರಾಂತಿಯಾಗಿದೆ ಎಂದರು.

ಸಂಕ್ರಾಂತಿ ಸಂಭ್ರಮದಲ್ಲಿ ಪ್ರತಿ ಮನೆಗಳಲ್ಲೂ ರಾಸುಗಳು ಇರುತ್ತಿದ್ದವು. ಆ ಕಿಚ್ಚನ್ನು ನೋಡುವುದೇ ಸಂಭ್ರಮ. ಈ ಆಧುನಿಕ ಯುಗಲ್ಲಿ ಎಲ್ಲಾ ನಾಪತ್ತೆಯಾಗುತ್ತಿವೆ. ರೈತ ಮಹಿಳೆಯರು ನಾಟಿ ಮಾಡುವಾಗ ಆಡುತ್ತಿದ್ದ ಜಾನಪದ ಶೈಲಿಯ ಹಾಡುಗಳು ಮಾಯವಾಗಿವೆ. ಹಾಡುಗಳನ್ನು ಆಡುವುದರಿಂದ ರೈತರ ಶ್ರಮ ಹಗುರಗೊಳಿಸಿ ಒಗ್ಗಟ್ಟಿನಿಂದ ಕೆಲಸ ಉತ್ಸುಕದಿಂದ ಮಾಡುತ್ತಿದ್ದರು. ಈಗ ಅದೆಲ್ಲ ಮಾಯವಾಗಿರುವುದು ಬೇಸರದ ಸಂಗತಿ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಮಹೇಶ್ ಚಂದ್ರಗುರು, ದೋ.ಚಿ.ಗೌಡ, ತೊರೆಚಾಕನಹಳ್ಳಿ ಶಂಕರೇಗೌಡ, ಪೈ.ಅಬ್ದುಲ್ ರಫೀಕ್ (ಜೋಬಾ ರಫೀಕ್) ಸಿ.ಎಸ್.ಮಂಜುನಾಥ್, ಎಂ.ನಂದೀಶ್, ಡಾ.ಆರ್.ರಾಘವೇಂದ್ರ, ಕೃಷ್ಣಮೂರ್ತಿ, ಮಲ್ಲುಸ್ವಾಮಿ, ನಟರಾಜು, ಸವಿತ ಚಿರು ಕುನ್ನಯ್ಯ, ಸಿ.ಟಿ.ರಾಜೇಂದ್ರ, ಕೆ.ಪಿ.ಅರುಣಕುಮಾರಿ, ಚೆಲುವರಾಜು, ಪಿ.ವಿ.ಮಹದೇವು, ಪತ್ರಕರ್ತ ಮಂಜುನಾಥ್ ಗಂಜಾಂ, ಡಿ.ಎಸ್. ಭಾರ್ಗವಿ, ಡಿ.ಎಂ. ಮಹೇಶ್ ಅವರಿಗೆ ದಾರಿ ದೀಪ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್ , ರೈತ ಮುಖಂಡ ಅಣ್ಣೂರು ಮಹೇಂದ್ರ, ದಾರಿದೀಪ ಫೌಂಡೇಶನ್ ಅಧ್ಯಕ್ಷ ಎಲ್.ದಯಾನಂದ, ಉಪಾಧ್ಯಕ್ಷ ವಿ.ವೈ. ಆನಂದ್, ಕಾರ್ಯದರ್ಶಿ ನಳಿನಿ, ಜಂಟಿ ಕಾರ್ಯದರ್ಶಿ ಧಮೇರ್ಂದ್ರಸಿಂಗ್, ಖಜಾಂಚಿ ಎ.ಎಸ್.ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.