ಸ್ತಾವಿತ ವಿಧೇಯಕದ ಪ್ರಕಾರ ಪ್ರತಿ ವರ್ಷ ರಾಜ್ಯವಾರು ಬಜೆಟ್ ಹಂಚಿಕೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವನು ರಾಜ್ಯ ಸರ್ಕಾರಗಳೇ ಭರಿಸಬೇಕು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮನರೇಗಾ ರದ್ದುಪಡಿಸಿ, ರೋಜ್‌ಗಾರ್ ಮತ್ತು ಅಜೀವಿಕಾಮಿಷನ್(ಗ್ರಾಮೀಣ) ವಿಧೇಯಕ ಮಂಡಿಸಿರುವುದು ಬಡವರ ಉದ್ಯೋಗವನ್ನು ಕಿತ್ತೊಗೆಯುವ ಹುನ್ನಾರವಾಗಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಪುಟ್ಟಿ ಮತ್ತು ಪುಟ್ಟಮ್ಮ ಆರೋಪಿಸಿದರು.ನಗರದ ಜಿಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ವಿಧೇಯಕವನ್ನು ರದ್ದುಪಡಿಸಿ, ಹಿಂದಿನ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.ಪ್ರಸ್ತಾವಿತ ವಿಧೇಯಕದ ಪ್ರಕಾರ ಪ್ರತಿ ವರ್ಷ ರಾಜ್ಯವಾರು ಬಜೆಟ್ ಹಂಚಿಕೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವನು ರಾಜ್ಯ ಸರ್ಕಾರಗಳೇ ಭರಿಸಬೇಕು. ಪ್ರತಿರಾಜ್ಯದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ ಮಿತಿಯನ್ನು ಕೇಂದ್ರವೇ ಹೇರುತ್ತದೆ ಎಂದರು.ಈಗಿರುವ ಬಜೆಟ್‌ನಲಿ ಕೇಂದ್ರ ಸರ್ಕಾರವು ಪುತಿ ಕುಟುಂಬಕ್ಕೆ ವರ್ಷಕ್ಕೆ 50 ದಿನಗಳ ಕೆಲಸವನ್ನುಒದಗಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್ ಅನು ಕೇಂದ್ರ ಸರ್ಕಾರವೇ ಮಿತಿಗೊಳಿಸಿ, ಹಣವನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಇನ್ನಷ್ಟು ಹಣದ ಹೊರೆ ಹಾಕುವ ಮೂಲಕ ಬಿಜೆಪಿ ಸರ್ಕಾರ 125 ದಿನ ಉದ್ಯೋಗ ನೀಡುವ ಹುಸಿ ಭರವಸೆ ನೀಡುತ್ತಿದೆ ಎಂದು ಆರೋಪಿಸಿದರು.ಬೇಡಿಕೆ ಆಧಾರಿತ ಹಕ್ಕಿನಿಂದ ಪೂರೈಕೆ ಆಧಾರಿತ ಯೋಜನೆಯನ್ನಾಗಿ ಬದಲಾಯಿಸಲಾಗಿದೆ. ಉದ್ಯೋಗಖಾತ್ರಿ ಇನ್ನು ಮುಂದೆ ಒಂದು ಹಕ್ಕಲ್ಲ. ಬದಲಾಗಿ ಯೋಜನೆ ಅನುಷ್ಠಾನದ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣವೇ ಆಗಿದೆ ಎಂದರು. ಕೇಂದ್ರ ಸರ್ಕಾರ ಸೂಚಿಸಿದ ಆಯಾ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡುವ ಹಕ್ಕನ್ನು ಕಾರ್ಮಿಕರು ಪಡೆಯುತ್ತಾರೆ. ಕೇಂದ್ರ ಸರ್ಕಾರ ಗುರುತಿಸದ ಪ್ರದೇಶದಲ್ಲಿ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಖಾತರಿಯೇ ಇಲ್ಲ ಎಂದರು.ಮನರೇಗಾದಲ್ಲಿ ಕೇಂದ್ರಸರ್ಕಾರ ಮತು ರಾಜ್ಯ ಸರ್ಕಾರದ ಬಜೆಟ್ ಹಂಚಿಕೆ 90ರಿಂದ 100ರಷ್ಟಿತ್ತು .ಆದರೆ ಈ ವಿಧೇಯಕದಲ್ಲಿ 60ರಿಂದ 40 ರಷ್ಟಿದೆ. ವರ್ಷದಲ್ಲಿ ಎರಡು ತಿಂಗಳು ಕೆಲಸ ನಿರಾಕರಿಸುವುದರಿಂದ ಮಹಿಳೆಯರು, ಭೂಹೀನರು ಉದ್ಯೋಗದ ಹಕ್ಕಿನಿಂದ ವಂಚಿತರಾಗುತ್ತಾರೆ. ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯಿತಿಗಳನ್ನು ದುರ್ಬಲ ಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ಈ ವಿಧೇಯಕವನ್ನು ಸಂಘ ತೀವ್ರವಾಗಿ ಖಂಡಿಸಲಿದೆ ಎಂದರು.ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ದುರ್ಬಲಗೊಳಿಸುವ ರೋಜ್‌ಗಾರ್ ಮತ್ತು ಅಜೀವಿಕಾಮಿಷನ್ ವಿಧೇಯವನ್ನು ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಬಿಜೆಪಿ ಸಂಸದರ ಕಚೇರಿ ಮುಂದೆ ಡಿ. 22ರಿಂದ ಪ್ರತಿಭಟನೆ ನಡೆಸಲಾಗುತ್ತದೆ. ಚಾಮರಾಜನಗರದಲ್ಲಿ ಅಂದು ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಂತ ಹಂತವಾಗಿ ಹೋರಾಟಗಳನ್ನು ರೂಪಿಸಲಾಗುವುದು ಎಂದರು ಪತ್ರಿಕಾ ಗೋಷ್ಠಿಯಲ್ಲಿ ನಿಜದನಿ ಗೋವಿಂದರಾಜು, ರಾಣಿ ,ಪ್ರಜಾ ಪರಿವರ್ತನೆ ವೇದಿಕೆಯ ಮಹೇಶ್, ದಡದಹಳ್ಳಿ ಶಂಕರ್ ಇದ್ದರು.------೧೯ಸಿಎಚ್‌ಎನ್೪ಚಾಮರಾಜನಗರದ ಜಿಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಪುಟ್ಟಿ ಮಾತನಾಡಿದರು, ಪುಟ್ಟಮ್ಮ ನಿಜದನಿ ಗೋವಿಂದರಾಜು, ರಾಣಿ,ಪ್ರಜಾಪರಿವರ್ತನೆ ವೇದಿಕೆಯ ಮಹೇಶ್, ದಡದಹಳ್ಳಿ ಶಂಕರ್ ಇದ್ದಾರೆ.--------