ಭಾರತೀಯ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವ: ಡಾ.ಈ.ಸಿ.ನಿಂಗರಾಜ್‌ಗೌಡ

| Published : Jan 03 2024, 01:45 AM IST

ಭಾರತೀಯ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವ: ಡಾ.ಈ.ಸಿ.ನಿಂಗರಾಜ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಷರ ಆಗಮನದಿಂದ ಭಾರತದಲ್ಲಿ ವಿದೇಶಿ ದಿನದರ್ಶಿಕೆಯಲ್ಲಿ ಜ.೧ರಂದು ಹೊಸ ವರ್ಷ ಎಂದು ಕ್ಯಾಲೆಂಡರ್ ಬದಲಿಸುವ ದಿನವಾಗಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಜನವರಿ ಒಂದು ನಮಗೆ ಹೊಸ ವರ್ಷವೇನೂ ಅಲ್ಲ. ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಗೆಲುವು ನಗಬೇಕು ಮತ್ತು ಚಿಣ್ಣರ ಲೋಕ ಎಂಬ ಎರಡು ಕವನ ಸಂಕಲನ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯ ಸಂಸ್ಕೃತಿ ಬಿಂಬಿಸುವ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿ ಮತ್ತು ಸತ್ವ ಅಡಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದಲ್ಲಿರುವ ಶ್ರೀವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ನಡೆದ ನೂತನ ವರ್ಷದ ಶುಭಾರಂಭ ಹಾಗೂ ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಕವನ ಸಂಕಲನ ಬಿಡುಗಡೆ ಮತ್ತು ಸಾಂಸ್ಕೃತಿಕ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬ್ರಿಟಷರ ಆಗಮನದಿಂದ ಭಾರತದಲ್ಲಿ ವಿದೇಶಿ ದಿನದರ್ಶಿಕೆಯಲ್ಲಿ ಜ.೧ರಂದು ಹೊಸ ವರ್ಷ ಎಂದು ಕ್ಯಾಲೆಂಡರ್ ಬದಲಿಸುವ ದಿನವಾಗಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಜನವರಿ ಒಂದು ನಮಗೆ ಹೊಸ ವರ್ಷವೇನೂ ಅಲ್ಲ. ಅದು ನಾವೂ ಸರ್ಕಾರಿ ಕಚೇರಿಗಳು, ಬ್ಯಾಂಕಿಂಗ್ ವಹಿವಟಿನಲ್ಲಿ ಅನುಸರಿಸುವ ಕ್ಯಾಲೇಂಡರ್ ಮಾತ್ರವಾಗಿದೆ. ಆದರೆ, ಭಾರತೀಯ ಸಂಸ್ಕೃತಿ ಬಿಂಬಿಸುವ ಪಾಕೃತಿಕ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿ, ಸತ್ವವಿದೆ. ಪ್ರಾಕೃತಿಕ ಬದಲಾವಣೆಯೊಂದಿಗೆ ಆರೋಗ್ಯಕರ ಮಾಹಿತಿಯಿದೆ ಎಂದರು.

ಪ್ರಾಕೃತಿಕ ಬದಲಾವಣೆಯಲ್ಲಿ ಬರುವ ಯುಗಾದಿ ನಮಗೆ ಹೊಸ ವರ್ಷವಾಗಿದೆ. ಸೂರ್ಯ ತನ್ನ ದಿಕ್ಕನ್ನು ಬದಲಿಸುವ ಸಂಕ್ರಾಂತಿ, ಮಹಾಶಿವರಾತ್ರಿ, ದೀಪಾವಳಿ, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ಶ್ರೀರಾಮ, ಶ್ರೀಕೃಷ್ಣ ಸೇರಿದಂತೆ ಮಹಾ ಪುರುಷರ ಜಯಂತಿಗಳು, ಗ್ರಾಮೀಣ ಸೊಗಡಿನಿಂದ ಕೂಡಿದ ಹಬ್ಬಗಳು, ಮನೆ ಮಂದಿಯನ್ನು ಸಂಭ್ರಮದಿಂದ ಇರುವಂತೆ ಆಚರಿಸುವ ಹಬ್ಬಗಳಲ್ಲಿ ನಮ್ಮ ಸಂಸ್ಕೃಂತಿ ಸಂಪ್ರದಾಯದ ಜೊತೆ ವೈಜ್ಞಾನಿಕತೆಯ ಮಹತ್ವವಿದೆ ಎಂದರು.

ನೂತನ ಕ್ಯಾಲೇಂಡರ್ ನ ಹೊಸವರ್ಷದ ಆರಂಭದಿನವು ಎಲ್ಲರಿಗೂ ಒಳಿತನ್ನು ಮಾಡಲಿ, ವೈಜ್ಞಾನಿಕ ಮನೋಭಾವ ಹೆಚ್ಚಿಸಲಿ ಎಂದು ತಿಳಿಸಿದ ಡಾ.ಈ.ಸಿ.ನಿಂಗರಾಜ್ ಗೌಡ, ನಾವು ನವಯುಗದ ಅನ್ವೇಷಣೆ, ವಿಜ್ಞಾನ, ತಂತ್ರಜ್ಞಾನ ಮತ್ತು ಡಿಜಿಟಲೀಕರಣದೊಂದಿಗೆ ನಮ್ಮ ಸಾಹಿತ್ಯ ಸಂಸ್ಕೃಂತಿಯನ್ನು ವಿಶ್ವಕ್ಕೆ ಪರಿಚಯಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಗೆಲುವು ನಗಬೇಕು ಮತ್ತು ಚಿಣ್ಣರ ಲೋಕ ಎಂಬ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆಗೊಳಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಗಮಕ ವಿಧುಷಿ ಧರಿತ್ರಿ ಅನಂತರಾವ್ ಮತ್ತು ತಂಡದಿಂದ ಭಕ್ತಿಸುಧಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ರಂಜಿನಿ ಕಲಾವೇದಿಕೆ ಅಧ್ಯಕ್ಷ ಸಿ.ಪಿ ವಿದ್ಯಾಶಂಕರ್, ನಿವೃತ್ತ ಜೀವ ವಿಮೆ ಅಧಿಕಾರಿ ಡಾ.ಎಸ್. ಶ್ರೀನಿವಾಸ ಶೆಟ್ಟಿ, ಬಿ.ಎಂ.ಅಪ್ಪಾಜಪ್ಪ, ವೈದ್ಯರಾದ ಡಾ.ಚಂದ್ರಶೇಖರ್. ಮನೋವೈದ್ಯ ಡಾ. ಟಿ.ಎಸ್.ಸತ್ಯನಾರಾಯಣ ರಾವ್, ಮುಡಾ ಮಾಜಿ ಅಧ್ಯಕ್ಷ ಪಿ.ಎಂ.ಸೋಮಶೇಖರ್, ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು ಇತರರಿದ್ದರು.