ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ವೇಳೆ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಮಂಗಳವಾರ ತಾಳುಬೆಟ್ಟದ ಬಳಿ ನಡೆದಿದೆ.ಚನ್ನಪಟ್ಟಣ ಮೂಲದ ಶ್ರೇಯಸ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಪಾದಯಾತ್ರೆಗಾಗಿ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬೆಳಗ್ಗೆ 11ರ ಹೊತ್ತಿಗೆ ಯಾತ್ರಿಗಳು ತೆರಳುವ ವೇಳೆ ಚಿರತೆ ದಾಳಿ ಮಾಡಿದೆ.ಪರಿಣಾಮ ಬಾಲಕ ಜೋರಾಗಿ ಕಿರುಚಿದ್ದು, ಚಿರತೆ ಸ್ಥಳದಿಂದ ಓಡಿ ಹೋಗಿದೆ. ದಾಳಿಗೆ ಬಾಲಕನ ದೇಹದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಕೊಡಲಾಗಿದೆ.---ತಿಂಗಳೊಳಗೆ ಮತ್ತೊಂದು ದಾಳಿ:ಜ.21ರಂದು ಮಂಡ್ಯ ಜಿಲ್ಲೆಯ ಪ್ರವೀಣ್ (30) ಎಂಬುವರು ಸ್ನೇಹಿತರ ಜೊತೆಗೆ ಬಲಿಯಾಗಿದ್ದರು. ಇದು ಭಕ್ತರಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿತ್ತು. ಇದಾದ 2 ದಿನಗಳಲ್ಲಿ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದರು. ಈ ಘಟನೆ ಮಾಸುವ ಮುನ್ನವೇ ಮಂಗಳವಾರ ಮತ್ತೊಂದು ದಾಳಿಯಾಗಿದೆ. ಅದೃಷ್ಟವಶಾತ್ ಬಾಲಕನಿಗೆ ದೊಡ್ಡ ಆಘಾತವಾಗಿಲ್ಲ.ಇದೀಗ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ವೇಳೆ ತಾಳ ಬೆಟ್ಟದ ಬಳಿ ಬಾಲಕನ ಮೇಲೆ ಗುಂಪಿದ್ದರು ಸಹ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವುದು ಮಾದಪ್ಪನ ಭಕ್ತಾದಿಗಳಿಗೆ ಭಯದ ಭೀತಿ ಉಂಟು ಮಾಡಿದೆ.ರಕ್ಷಣೆಗೆ ಅಗ್ರಹ:
ಇತ್ತೀಚಿನ ದಿನಗಳಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಿಂದಲೋ ತಂದು ವನ್ಯ ಪ್ರಾಣಿಗಳನ್ನು ಬಿಟ್ಟಿರುವುದರಿಂದ ಬೆಟ್ಟಕ್ಕೆ ಬರುತ್ತಿರುವ ಪಾದಯಾತ್ರಿಗಳ ಮೇಲೆ ದಾಳಿ ನಡೆಯುತ್ತಿದ್ದು, ಇಂತಹ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಬಂದೋಬಸ್ ಕಲ್ಪಿಸುವಂತೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.--- 10ಸಿಎಚ್ಎನ್15 ಮತ್ತು16 ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿ ಯುವಕನ ಮೇಲೆ ಚಿರತೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಶ್ರೇಯಸ್.10ಸಿಎಚ್ಎನ್14
ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ತಾಳ ಬೆಟ್ಟದ ಬಳಿ ಯುವಕನ ಮೇಲೆ ಚಿರತೆ ದಾಳಿ ಆತಂಕಗೊಂಡಿರುವ ಪಾದಯಾತ್ರೆ ಭಕ್ತಾದಿಗಳು..