ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಬೇಕು: ಪ್ರೊ.ಪಿ.ಕಣ್ಣನ್

| Published : Sep 09 2024, 01:32 AM IST

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಬೇಕು: ಪ್ರೊ.ಪಿ.ಕಣ್ಣನ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು, ಮಕ್ಕಳಿಗೆ ಮೂಢನಂಬಿಕೆಯನ್ನು ಬಿತ್ತದೆ, ವೈಜ್ಞಾನಿಕ ಮನೋಭಾವವನ್ನು ಬಿತ್ತಿ, ಜ್ಞಾನದ ಶಕ್ತಿಗಳಾಗಿ ಬೆಳೆಸಬೇಕು. ಶಿಕ್ಷಕರು ಶಿಕ್ಷಣವನ್ನು ಮಾತ್ರ ಕಲಿಸುವುದಿಲ್ಲ, ಬದುಕಿನ ನೈತಿಕ ಮೌಲ್ಯವನ್ನು ತಿಳಿಸುವ ಮಾರ್ಗದರ್ಶಕರು ಕೂಡ ಆಗಿರುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳಿಗೆ ಮೂಢನಂಬಿಕೆಗಳನ್ನು ಬಿತ್ತದೆ, ವೈಜ್ಞಾನಿಕ ಮನೋಭಾವನ್ನು ಬಿತ್ತಿ, ಜ್ಞಾನದ ಶಕ್ತಿಗಳಾಗಿ ಬೆಳೆಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಇಂಗ್ಲಿಷ್‌ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಪಿ. ಕಣ್ಣನ್‌ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಾರ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಅವರ ಸ್ಥಾನಮಾನ ನೀಡಿ ಗೌರವ ನೀಡುತ್ತೇವೆ. ಆದರೆ ಶಿಕ್ಷಕರು ಎಂದ ಕೂಡಲೇ ಪ್ರತಿಯೊಬ್ಬರಿಗೂ ಗೌರವಾಧಾರ ಸಿಗುತ್ತದೆ. ಏಕೆಂದರೆ ಶಿಕ್ಷಕರು ಸಮಾಜಮುಖಿ ಚಿಂತನೆ ಮಾಡುವ ಜತೆಗೆ ಮಕ್ಕಳ ಮನಸ್ಸನ್ನು ಅಧ್ಯಯನ ಮಾಡಿ, ಅವರ ಶೈಲಿಯಲ್ಲಿಯೇ ಪಾಠ ಮಾಡುವುದರಿಂದ ಮಕ್ಕಳು ಹಾಗೂ ಶಿಕ್ಷಕರ ಬಾಂಧವ್ಯ ಚೆನ್ನಾಗಿರುತ್ತದೆ ಎಂದರು.

ಸರ್ವಪಲ್ಲಿ ರಾಧಾಕೃಷ್ಣನ್‌ಅವರು ಶಿಕ್ಷಕ ಹುದ್ದೆಯಿಂದ ರಾಷ್ಟ್ರಪತಿ ಹುದ್ದೆಗೆ ಏರಿ ಶಿಕ್ಷಕರಿಗೆ ಗೌರವ ತರುವಂತೆ ನಡೆದುಕೊಂಡರು. ಅವರ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾದುದು ಎಂದು ಹೇಳಿದರು.

ಶಿಕ್ಷಕರು, ಮಕ್ಕಳಿಗೆ ಮೂಢನಂಬಿಕೆಯನ್ನು ಬಿತ್ತದೆ, ವೈಜ್ಞಾನಿಕ ಮನೋಭಾವವನ್ನು ಬಿತ್ತಿ, ಜ್ಞಾನದ ಶಕ್ತಿಗಳಾಗಿ ಬೆಳೆಸಬೇಕು. ಶಿಕ್ಷಕರು ಶಿಕ್ಷಣವನ್ನು ಮಾತ್ರ ಕಲಿಸುವುದಿಲ್ಲ, ಬದುಕಿನ ನೈತಿಕ ಮೌಲ್ಯವನ್ನು ತಿಳಿಸುವ ಮಾರ್ಗದರ್ಶಕರು ಕೂಡ ಆಗಿರುತ್ತಾರೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವರಾದ ಪ್ರೊ.ಕೆ.ಬಿ. ಪ್ರವೀಣ, ಡಾ.ಎಚ್. ವಿಶ್ವನಾಥ್, ಡೀನ್‌ಗಳಾದ ಪ್ರೊ.ಎನ್. ಲಕ್ಷ್ಮೀ , ಪ್ರೊ.ಎಂ. ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಎಚ್.ವಿ. ಶ್ವೇತಾ ಇದ್ದರು.

ಐಎಫ್ಎಸ್ ಅಧಿಕಾರಿಗಳಿಗೆ ತರಬೇತಿಮೈಸೂರು: ಮೈಸೂರು ಮೃಗಾಲಯವು ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿಗಳಿಗೆ ಕ್ಯಾಪ್ಟಿವ್ ಮ್ಯಾನೇಜ್ಮೆಂಟ್ ಆಫ್ವೈಲ್ಡ್ ಅನಿಮಲ್ಸ್ಅಂಡ್ ಜೂ ಮ್ಯಾನೇಜ್ಮೆಂಟ್ ಫಾರ್ ಜೂ ಮ್ಯಾನೇಜರ್ಸ್ ಕುರಿತು ಸೆ. 9 ರಿಂದ 13 ರವರೆಗೆ ಕಡ್ಡಾಯ ತರಬೇತಿ ಆಯೋಜಿಸಿದೆ. ಭಾರತದ 8 ರಾಜ್ಯದ ವಿವಿಧ ವೃಂದದ ಐಎಫ್ಎಸ್ ಅಧಿಕಾರಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಭಾರತೀಯ ಮೃಗಾಲಯಗಳ ನಿರ್ವಣೆ, ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮಗಳು ಮತ್ತು ಮಾರ್ಗಸೂಚಿಗಳು, ತಿದ್ದುಪಡಿಗೊಂಡ ವನ್ಯಜೀವಿ ಕಾಯ್ದೆ 1972ರಡಿ ಮೃಗಾಲಯಗಳ ಪಾತ್ರ, ಬೃಹತ್ಯೋಜನೆ ಹಾಗೂ ಪರಿಸರ ವಿನ್ಯಾಸ ಸೇರಿದಂತೆ ಹಲವು ವಿಷಯಗಳನ್ನು ನಿಗದಿಪಡಿಸಲಾಗಿದೆ. ಕ್ಷೇತ್ರ ವೀಕ್ಷಣೆಯಡಿ ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ರಕ್ಷಣೆ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ದುಬಾರೆ ಆನೆ ಶಿಬಿರ ಮತ್ತು ಹುಣಸೂರಿನ ಲಿಯಾನ ಪ್ರಾಜೆಕ್ಟ್ ಟ್ರಸ್ಟ್ ಗೆ ಭೇಟಿ ನೀಡುವರು.

ಸೆ. 9 ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನಿಲ್ ಪಂವಾರ್ ಅಧ್ಯಕ್ಷತೆ ವಹಿಸುವರು.