ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶ್ಯಾಗೋಟಿ ಆಯ್ಕೆ

| Published : Nov 17 2024, 01:19 AM IST

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶ್ಯಾಗೋಟಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ನೌಕರರ ಸಂಘದ ತಾಲೂಕಿನ ನೂತನ ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಶ್ಯಾಗೋಟಿ, ರಾಜ್ಯ ಪರಿಷತ್ ಸದಸ್ಯರಾಗಿ ಶಿವಪುತ್ರಪ್ಪ ತಿಪ್ಪನಾಳ, ಖಜಾಂಚಿಯಾಗಿ ಹಜರತ್ ಅಲಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸರ್ಕಾರಿ ನೌಕರರ ಸಂಘದ ತಾಲೂಕಿನ ನೂತನ ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಶ್ಯಾಗೋಟಿ, ರಾಜ್ಯ ಪರಿಷತ್ ಸದಸ್ಯರಾಗಿ ಶಿವಪುತ್ರಪ್ಪ ತಿಪ್ಪನಾಳ, ಖಜಾಂಚಿಯಾಗಿ ಹಜರತ್ ಅಲಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಶಿಕ್ಷಕರ ಗುರುಭವನದಲ್ಲಿ ಶನಿವಾರ ಸಂಜೆ ನಡೆದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದಲಿಂಗಪ್ಪ ಶ್ಯಾಗೋಟಿ ಮತ್ತು ಬಸನಗೌಡ ರಾಮಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶಿವಪುತ್ರಪ್ಪ ತಿಪ್ಪನಾಳ ಹಾಗೂ ಎನ್. ಲೋಕೇಶ್, ಖಜಾಂಚಿ ಸ್ಥಾನಕ್ಕೆ ಹಜರತ್ ಅಲಿ ಮತ್ತು ಮಂಜುನಾಥ್ ಮುರುಡಿ ನಾಮಪತ್ರ ಸಲ್ಲಿಸಿದರು.

ಸಿದ್ಲಿಂಗಪ್ಪ ಶ್ಯಾಗೋಟಿ, ಶಿವಪುತ್ರಪ್ಪ, ಹಜರತ್ ಅಲಿ ಮೂವರು ತಲಾ ೨೧ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿಗಳಾಗಿ ರಾಮಶೆಟ್ಟಿ, ಲೋಕೇಶ್, ಮಂಜುನಾಥ ತಲಾ ೧೩ ಮತಗಳನ್ನು ಪಡೆದು ಸೋಲನುಭವಿಸಿದರು. ಒಟ್ಟು ೩೪ ಜನರು ಮತ ಚಲಾಯಿಸಿದ್ದಾರೆ. ಚುನಾವಣಾಧಿಕಾರಿಯಾಗಿ ನಿವೃತ್ತ ಗ್ರೇಡ್-೨ ತಹಸೀಲ್ದಾರ ನಾಗಪ್ಪ ಸಜ್ಜನ್ ಕಾರ್ಯನಿರ್ವಹಿಸಿದರು.

ನೂತನವಾಗಿ ಆಯ್ಕೆಯಾದ ಸಿದ್ಲಿಂಗಪ್ಪ ಶ್ಯಾಗೋಟಿ, ಶಿವಪುತ್ರಪ್ಪ, ಹಜರತ್ ಅಲಿ ಅವರಿಗೆ ನೌಕರರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಕುಕನೂರು ಸರ್ಕಾರಿ ನೌಕರರ ತಾಲೂಕಾಧ್ಯಕ್ಷ ಮಹೇಶ ಸಬರದ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ವ್ಹಿ.ಧರಣಾ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ನೌಕರರಾದ ಶರಣಯ್ಯ ಸರಗಣಾಚಾರ, ಶಶಿಧರ್ ಮಾಲಿಪಾಟೀಲ್, ಬಸವರಾಜ ಮುಳಗುಂದ, ಫಕೀರಪ್ಪ ಕಟ್ಟಿಮನಿ, ಶ್ರೀಕಾಂತ ಮಾಸಗಟ್ಟಿ, ಬವಸರಾಜ ಹವಳೆ, ಬಸವರಾಜ ಸಜ್ಜನ್, ಮಾರುತೇಶ ತಳವಾರ, ಮಹಾವೀರ ಕಲ್ಬಾವಿ, ರಮೇಶ ಕಾರಬಾರಿ, ಸಂಗಯ್ಯ ಹಿರೇಮಠ, ಮೆಹಬೂಬಸಾಬ ಬಾದಶಾಷ, ಮುರ್ತುಜಾಸಾಬ ಮುಜಾವರ್, ಶಿವಾನಂದ ಮಾಳಗಿ, ಬಸಲಿಂಗಪ್ಪ ಹಾಗೂ ನೂತನ ನಿರ್ದೇಶಕರು, ನಾನಾ ಸಂಘಗಳ ಪದಾಧಿಕಾರಿಗಳು, ನೌಕರರು ಇದ್ದರು.