ಪ್ರಪಂಚಕ್ಕೆ ಜ್ಞಾನಮಾರ್ಗ ತೋರಿಸಿದ ಶಂಕರಾಚಾರ್ಯ: ಅಚ್ಯುತ್‌

| Published : May 15 2024, 01:37 AM IST

ಸಾರಾಂಶ

ಇಡೀ ಜಗತ್ತಿಗೆ ದರ್ಶನ ಮತ್ತು ಜ್ಞಾನದ ಮಾರ್ಗವನ್ನು ತೋರಿಸಿ ಮಾನವ ಜನ್ಮ ಸಾರ್ಥಕ ಗೊಳಿಸಿದವರು ಶಂಕರಾಚಾರ್ಯರು ಎಂದು ಮೈಸೂರು ಸನ್ನದು ಲೆಕ್ಕಪರಿಶೋಧಕ ಎಸ್.ಅಚ್ಯುತ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇಡೀ ಜಗತ್ತಿಗೆ ದರ್ಶನ ಮತ್ತು ಜ್ಞಾನದ ಮಾರ್ಗವನ್ನು ತೋರಿಸಿ ಮಾನವ ಜನ್ಮ ಸಾರ್ಥಕ ಗೊಳಿಸಿದವರು ಶಂಕರಾಚಾರ್ಯರು ಎಂದು ಮೈಸೂರು ಸನ್ನದು ಲೆಕ್ಕಪರಿಶೋಧಕ ಎಸ್.ಅಚ್ಯುತ್ ಹೇಳಿದರು.ನಗರದ ಅಗ್ರಹಾರಬೀದಿಯ ಪಟ್ಟಾಭಿರಾಮಮಂದಿರದಲ್ಲಿ ಟ್ರಸ್ಟ್‌ನ ಶ್ರೀ ಪಟ್ಟಾಭಿರಾಮ ಮಂದಿರ ಮತ್ತು ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ವತಿಯಿಂದ ಶಂಕರಾಚಾರ್ಯ, ರಾಮಾನುಜಚಾರ್ಯ ಹಾಗೂ ನೃಸಿಂಹ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕ್ರಿಶ ೮ನೇ ಶತಮಾನದ ಕೊನೆ ಮಧ್ಯ ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದ ಆದಿಶಂಕರರು ಭಗವದ್ಗೀತೆ, ಉಪನಿಷತ್ತು, ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲಿಗರು. ಶಂಕರರಿಗೆ ಚಿಕ್ಕಂದಿನಲ್ಲೇ ಸನ್ಯಾಸದ ಕಡೆಗೆ ಒಲವಿತ್ತು. ಶಿವನ ಅವತಾರವೇ ಶಂಕರಚಾರ್ಯರು ಎಂದು ಬಣ್ಣಿಸಿದರು. ಶಂಕರ ಜಯಂತಿ ಅಂಗವಾಗಿ ವೇದಪಾರಾಯಣ, ಭಜನೆ, ಸತ್ಸಂಗ ನೆರವೇರಿತು.

ನಗರದ ಪ್ರಮುಖ ಬೀದಿಗಳಲ್ಲಿ ಶಂಕರಾಚಾರ್ಯರ ಭಾವಚಿತ್ರದ ಹೂವಿನ ಪಲ್ಲಕ್ಕಿ ಮೆರೆವಣಿಗೆ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆಯಲ್ಲಿ ಪಟ್ಟಾಭಿರಾಮಮಂದಿರ ಅಧ್ಯಕ್ಷ ಕೆ.ಬಾಲಸುಬ್ರಮಣ್ಯ, ನಾಗೇಂದ್ರ ಪ್ರಸಾದ್, ಎಸ್.ಲಕ್ಷ್ಮಿ ನರಸಿಂಹ, ಶಾಂತಲಾ ವಾಸುದೇವರಾವ್, ಪ್ರಕಾಶ್, ಮೈಸೂರು ರಮೇಶ್, ವಿಜಯ ಬುಕ್ ಡಿಪೋ ಮಾಲೀಕ ಮುರಳಿ, ಅರ್ಚಕ ಕಿರಣ್ ಭಾರದ್ವಾಜ್, ಕಾರ್ತಿಕ್ ಭಾರದ್ವಾಜ್, ಬಾಲಸುಬ್ರಹ್ಮಣ್ಯ, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಕೆ.ಅಜಿತ್, ಶ್ರೀನಾಥ್, ಬ್ರಾಹ್ಮಿ ಮಹಿಳಾ ಸಂಘದವರು, ಸಮುದಾಯದವರು ಭಾಗವಹಿಸಿದ್ದರು.

14ಸಿಎಚ್‌ಎನ್‌11

ಚಾಮರಾಜನಗರದ ಪಟ್ಟಾಭಿರಾಮಮಂದಿರದಲ್ಲಿ ಆಚಾರತ್ರಯರ ಜಯಂತಿ ಅಂಗವಾಗಿ ಶಂಕರಾಚಾರ್ಯ, ರಾಮಾನುಜಚಾರ್ಯ, ನೃಸಿಂಹ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.