ಬಸವಣ್ಣನವರಿಂದಲೇ ನಿಜ ಶರಣ ಎಂದು ಕರೆಯಿಸಿಕೊಂಡ ಅಂಬಿಗರ ಚೌಡಯ್ಯ, ತಮ್ಮ ಕಾಯಕದ ಮೂಲಕವೇ ದೇವರನ್ನು ಕಂಡವರು. ಹಾಗೆಯೇ ದಾಸೋಹದ ಮೂಲಕ ದೇವರನ್ನು ಕಂಡವರು ಲಿಂ. ಡಾ.ಶಿವಕುಮಾರಸ್ವಾಮೀಜಿಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರುಬಸವಣ್ಣನವರಿಂದಲೇ ನಿಜ ಶರಣ ಎಂದು ಕರೆಯಿಸಿಕೊಂಡ ಅಂಬಿಗರ ಚೌಡಯ್ಯ, ತಮ್ಮ ಕಾಯಕದ ಮೂಲಕವೇ ದೇವರನ್ನು ಕಂಡವರು. ಹಾಗೆಯೇ ದಾಸೋಹದ ಮೂಲಕ ದೇವರನ್ನು ಕಂಡವರು ಲಿಂ. ಡಾ.ಶಿವಕುಮಾರಸ್ವಾಮೀಜಿಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಗಂಗಾ ಮತಸ್ಥರ(ಬೆಸ್ತರ) ಸಂಘ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯಅವರ 906 ನೇ ಜನ್ಮಜಯಂತಿ ಹಾಗೂ ಕರ್ನಾಟಕರತ್ನ ಡಾ.ಶಿವಕುಮಾರಸ್ವಾಮೀಜಿಗಳ 7ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಂಬಿಗರ ಚೌಡಯ್ಯನವರಿಗೆ ಕಾಯಕವೇ ದೇವರಾದರೆ, ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಕಾಯಕ ಮತ್ತು ದಾಸೋಹ ಎರಡು ದೇವರಾಗಿ ಕಂಡಿದ್ದವು ಎಂದರು.ಅಂಬಿಗರ ಚೌಡಯ್ಯ ಅನುಭವ ಮಂಟಪದಲ್ಲಿದ್ದು,ನೇರ ನಿಷ್ಟುರ ನುಡಿಗೆ ಹೆಸರಾದವರು. ಎಲ್ಲರೂ ದೇವಾಲಯಗಳಿಗೆ ದೇವರುಗಳನ್ನು ಕಾಣಲು ಎಡೆತಾಕಿದರೆ, ಚೌಡಯ್ಯನವರು ತಮ್ಮ ದೋಣಿ ನಡೆಸುವ ಕಾಯಕದ ನಂತರ, ದೇವಾಲಯಕ್ಕೆ ಬರುವ ಭಕ್ತರ ಪಾದರಕ್ಷೆ ಕಾಯುವ ಕೆಲಸ ಮಾಡುತ್ತಲೇ ದೇವರನ್ನು ಕಂಡವರು. ಆಡಂಬರದ ದೇವರ ಪೂಜೆ, ಮಡಿ, ಮೈಲಿಗೆ, ಮೂಢನಂಬಿಕೆಗಳು, ಜಾತಿಯತೆಯ ವಿರುದ್ದ ತಮ್ಮ ವಚನಗಳನ್ನು ಹೇಳುವ ಮೂಲಕ ನಿಜ ಶರಣನೆಸಿಕೊಂಡವರು ಎಂದರು.ಡಾ. ಶಿವಕುಮಾರ ಸ್ವಾಮೀಜಿಗಳು, ಜೋಳಿಗೆ ಹಿಡಿದು ಊರೂರು ಅಲೆದು, ಸಿಕ್ಕ ದವಸ ಧಾನ್ಯಗಳನ್ನು ತಂದು, ಬೀಸಿ, ಕುಟ್ಟಿ ಮಕ್ಕಳ ದಾಸೋಹಕ್ಕೆ ಬಳಸಿ, ಲಕ್ಷಾಂತರ ಮಕ್ಕಳ ಹೊಟ್ಟೆಯ ಹಸಿವು, ಜ್ಞಾನದ ಅಸಿವು ನೀಗಿಸಿ, ಆಶ್ರಯವನ್ನು ನೀಡಿದ ಮಹಾನ್ ಯೋಗಿಗಳು. ಅವರ ಕಾಲಘಟ್ಟದಲ್ಲಿ ನಾವೆಲ್ಲರೂ ಬದುಕಿದ್ದೆವು ಎಂಬುದೇ ದೊಡ್ಡಗೌರವ.ಅವರು ಮಾಡಿದ ಸೇವೆ, ಮಾನವರಾಗಿದ್ದ ಅವರನ್ನು ದೈವತ್ವಕ್ಕೆ ಏರಿಸಿದೆ ಎಂದುಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು. ತುಮಕೂರು ಜಿಲ್ಲಾ ಗಂಗಾ ಮತಸ್ಥರ(ಬೆಸ್ತರ) ಸಂಘದ ಗೌರವಾಧ್ಯಕ್ಷ ಕೆ.ಎಸ್.ದಿವಾಕರ್ ಮಾತನಾಡಿ ಅಂಬಿಗರ ಚೌಡಯ್ಯ ನಮ್ಮ ಕುಲ ಗುರುಗಳು,ಬಸವಣ್ಣನವರಿಗೆ ಹತ್ತಿರವಾಗಿ ಕಲ್ಯಾಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಖಂಡಿತವಾದಿ, ಲೋಕವಿರೋಧಿ ಎಂಬಂತೆ,ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಗುಣವನ್ನು ಬೆಳೆಸಿಕೊಂಡಿದ್ದರು. ಅವರ ಎಲ್ಲಾ ವಚನಗಳಲ್ಲಿ ಈ ಅಂಶವನ್ನು ಕಾಣಬಹುದು ಎಂದರು.ತುಮಕೂರು ಜಿಲ್ಲಾ ಗಂಗಾ ಮತಸ್ಥರ ಸಂಘದ ಉಪಾಧ್ಯಕ್ಷ ಎಚ್.ಎನ್.ಚಂದ್ರಯ್ಯ ಮಾತನಾಡಿ, ನಮಗೆ ಇದುವರೆಗೂ ಲಭ್ಯವಿರುವ ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ವಸ್ತುಗಳು, ಈ ಲೋಕದ ಡಾಂಬಿಕತನದ ವಿರುದ್ದವಾಗಿರುವ ವಿಡಂಭನೆಯೇ ಆಗಿದೆ. ಅಂಬಿಗರ ಚೌಡಯ್ಯ ಅವರ ವಚನಗಳ ಹೊರ ಅರ್ಥಗಳಿಗಿಂತ, ಒಳ ಅರ್ಥ ಬಹಳ ಗಂಭೀರವಾಗಿವೆ. ಮೂರ್ತಿ ಪೂಜೆ, ಮೂಢನಂಬಿಕೆ, ಜಾತಿಯತೆ ವಿರುದ್ದ ಬಹು ಕಠೋರವಾಗಿ ಬರೆದಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಗಂಗಾ ಮತಸ್ಥರ ಸಂಘ(ಬೆಸ್ತರ)ದಅಧ್ಯಕ್ಷ ಎಚ್.ಜಿ.ವಿರೂಪಾಕ್ಷಪ್ಪ ಮಾತನಾಡಿ, ಸಮುದಾಯದ ವತಿಯಿಂದ ಮುಂದಿನ ದಿನಗಳಲ್ಲಿ ಅಂಬಿಗರಚೌಡಯ್ಯ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದು, ಸಮಾಜದ ಭಾಂಧವರು ಸಹಕಾರ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಸಮಾಜ ಸೇವೆಯಿಂದ ಶಕುಂತಲ,ಗರುಡಯ್ಯ,ವೈದ್ಯಕೀಯ ಕ್ಷೇತ್ರದಿಂದ ಬಿ.ಎನ್.ವಿಶ್ವನಾಥ್, ಸೈನಿಕರಾದ ಟಿ.ಕೆ.ಶಿವಶಂಕರ್,ಉದ್ಯಮಿಗಳಾದ ಕೆ.ಎಸ್.ದಿವಾಕರ್, ಟಿ.ಎನ್.ಪಾಂಡುರಂಗಯ್ಯ, ಶ್ರೀನಿವಾಸ್,ಶಿಕ್ಷಕರಾದ ಎಚ್.ಎನ್.ಚಂದ್ರಯ್ಯ, ಸರಕಾರಿ ಸೇವೆಯಿಂದ ಹೆಚ್.ಕೆ.ರಾಜಕುಮಾರ್ ಹಾಗೂ ರೈತಕ್ಷೇತ್ರದಿಂದ ವಿಜಯಮ್ಮ ಅವರುಗಳನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದಈಶ್ವರ್ ಕು ಮಿರ್ಜಿ, ತುಮಕೂರುಜಿಲ್ಲಾ ಗಂಗಾ ಮತಸ್ಥರ ಸಂಘದ ಕಾರ್ಯದರ್ಶಿ ಡಿ.ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಎಲ್.ಐ.ಸಿ.ಕೃಷ್ಣಮೂರ್ತಿ, ಸಹಕಾರ್ಯದರ್ಶಿ ಗೋಪಾಲಕೃಷ್ಣ, ಖಜಾಂಚಿ ಹೇಮಲತ ಅವರು ಉಪಸ್ಥಿತರಿದ್ದರು.