ಸಾರಾಂಶ
ದಂಪತಿಗಳ ಗಾಯನ ಸ್ಪರ್ಧೆಯಲ್ಲಿ ಎಚ್.ಉಮೇಶ್ ಹೇಳಿಕೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ ಮುಂಚೂಣಿಯಲ್ಲಿದ್ದು, ಮೈಸೂರು ನಂತರ ಶಿವಮೊಗ್ಗದಲ್ಲಿ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹೇಳಿದರು.ನಗರದಲ್ಲಿ ಆಯೋಜಿಸಿದ್ದ ಭಾವಗಾನ 8ನೇ ವಾರ್ಷಿಕೋತ್ಸವದಲ್ಲಿ ದಂಪತಿಗಳ ಗಾಯನ ಸ್ಪರ್ಧೆ, ನಾರಾಯಣ ಗುರುಗಳ ಗೀತೆಗಳ ಸ್ಪರ್ಧೆ ಹಾಗೂ ವಿವಿಧ ಬಗೆಯ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ನಿರಂತರ ಪರಿಶ್ರಮ ಸಾಧನೆ ಹಾಗೂ ಗುರುಗಳ ಮಾರ್ಗದರ್ಶನ ಅವಶ್ಯಕ ಎಂದು ತಿಳಿಸಿದರು.
ಮಥುರಾ ಪ್ಯಾರಾಡೈಸ್ ಹೋಟೆಲ್ ಕಲಾಪೋಷಕರಿಗೆ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದರ ಮೂಲಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರ ನೀಡುತ್ತ ಬಂದಿದ್ದಾರೆ ಎಂದರು.ದಂಪತಿಗಳ ಸ್ಪರ್ಧೆಯಲ್ಲಿ ಪ್ರಿಯಾಂಕ ಭರತ್ ಪ್ರಥಮ ಬಹುಮಾನ, ಸುಮಾ ಚಂದ್ರಶೇಖರ ಭಟ್ ದ್ವಿತೀಯ ಹಾಗೂ ಛಾಯಾ ನವೀನ್ ತೃತೀಯ ಬಹುಮಾನ ಪಡೆದಿದ್ದು, ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ತೀರ್ಪುಗಾರರಾಗಿ ಶಾಂತಾ ಶೆಟ್ಟಿ, ಉಮಾ ದಿಲೀಪ್, ಮಂಜುಳಾ ಡಿ.ಸಾಗರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಾಯಕ ಜಿ.ವಿಜಯಕುಮಾರ್ ಅವರು 57ವರ್ಷದಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಭದ್ರಾವತಿ ವಾಸು ಅವರಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನೂರು ಗಾಯಕರು ಸ್ಪರ್ಧಿಸಿದರು. ಇಡೀ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ವೇಳೆ ಗಿರೀಶ್ ಬ್ಯಾಡ, ವಿಜಯಾ ಸತೀಶ್, ಬುಜಂಗಪ್ಪ, ಪ್ರಮೋದ್, ಪ್ರಶಾಂತ್, ಹೇಮಂತ್, ಚಂದ್ರಶೇಖರ್ ಭಟ್, ಬಿಂದು ವಿಜಯಕುಮಾರ್, ಸುಮಾ, ಶಶಿರೇಖಾ, ಆದ್ಯಾ, ರವಿ, ಬಸವರಾಜ್, ರವಿ ಚವ್ಹಾಣ್ ಹಾಗೂ ಕಲಾವಿದರು ಉಪಸ್ಥಿತರಿದ್ದರು.