ಕರ್ನಾಟಕಕ್ಕೆ ಶಿರಸಂಗಿ ಲಿಂಗರಾಜರ ಕೊಡುಗೆ ಅನನ್ಯ

| Published : Jan 08 2025, 12:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಸವಾದಿ ಶರಣರು ಅಧ್ಯಾತ್ಮಿಕ ಸತ್ಯಗಳನ್ನು ಅನುಭವಿಸಿ, ನಿತ್ಯ, ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದವರು. ಪರಂಪರೆ, ಸಂಸ್ಕೃತಿ, ಜಾಗೃತಿ ಹಾಗೂ ಸಮಾಜದಲ್ಲಿರುವ ಲಿಂಗಾಯತ ಬಡ ಜನರ ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಏಳ್ಗೆಗೆ ಕೊಡುಗೆ ನೀಡಿದ ಕೀರ್ತಿ ಶಿರಸಂಗಿ ಲಿಂಗರಾಜ ದೇಸಾಯಿ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಸಿದ್ದಣ್ಣ ಉತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಸವಾದಿ ಶರಣರು ಅಧ್ಯಾತ್ಮಿಕ ಸತ್ಯಗಳನ್ನು ಅನುಭವಿಸಿ, ನಿತ್ಯ, ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದವರು. ಪರಂಪರೆ, ಸಂಸ್ಕೃತಿ, ಜಾಗೃತಿ ಹಾಗೂ ಸಮಾಜದಲ್ಲಿರುವ ಲಿಂಗಾಯತ ಬಡ ಜನರ ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಏಳ್ಗೆಗೆ ಕೊಡುಗೆ ನೀಡಿದ ಕೀರ್ತಿ ಶಿರಸಂಗಿ ಲಿಂಗರಾಜ ದೇಸಾಯಿ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಸಿದ್ದಣ್ಣ ಉತ್ನಾಳ ಹೇಳಿದರು.

ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಆಧುನಿಕ ಕರ್ನಾಟಕ ನಿರ್ಮಾಪಕ ಶಿರಸಂಗಿ ಲಿಂಗರಾಜ ದೇಸಾಯಿ ಅವರ ಸಾಧನೆ ಕುರಿತು ಮಾತನಾಡಿದರು. ೧೯೦೬ ರಲ್ಲಿ ನವಲಗುಂದ ಶಿರಸಂಗಿ ಟ್ರಸ್ಟ್‌ ಆಸ್ತಿತ್ವಕ್ಕೆ ಬಂದಿದ್ದು, ಸಮಸ್ತ ಸಂಸ್ಥಾನವನ್ನು ಲಿಂಗಾಯತ ಸಮಾಜದ ಶೈಕ್ಷಣಿಕ ಅಭಿವೃದ್ದಿಗಾಗಿ ಹತ್ತು ಹಳ್ಳಿಗಳನ್ನು ದಾನವಾಗಿ ನೀಡಿದರು. ಭಾರತೀಯ ಸಂಸ್ಥಾನಗಳ ಇತಿಹಾದಲ್ಲಿಯೇ ಏಕೈಕ ಉದಾಹರಣೆ ಶಿರಸಂಗಿ ಲಿಂಗರಾಜರು ಸಮಾಜಕ್ಕೆ ಪೂರಕವಾಗಿ ಬೆಳಗಾವಿಯ ಲಿಂಗರಾಜ ಕಾಲೇಜು, ವಿಜಯಪುರದಲ್ಲಿ ಲಿಂಗಾರಾಜ ಹಾಸ್ಟೇಲ್, ಧಾರವಾಡದಲ್ಲಿನ ಶಿರಸಂಗಿ ಲಿಂಗರಾಜ ವಿವಿಧೋದ್ದೇಶ ಸಂಘ ಸ್ಥಾಪಿಸಿ ಲಿಂಗಾಯತ ಸಮುದಾಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಹೀಗೆ ಸಂಸ್ಥಾನವನ್ನು ಸಾಮಾಜಿಕರಣಗೊಳಿಸುವ ಮೂಲಕ ಜನ-ಮನದಲ್ಲಿ ಉಳಿಯುವಂತಾಗಿದ್ದಾರೆ. ಅಂದಿನ ಹಿರಿಯರು ಕೂಡಿ ಸಂಸ್ಥೆಯ ಏಳ್ಗೆಗಾಗಿ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ ಉಚಿತ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಒಳತಿಗಾಗಿ ಶ್ರಮಿಸಿದವರು. ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯ ಒದಗಿಸಿದ ಮಹಾಪುರುಷರು ಎಂದು ಹೇಳಿದರು. ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿ, ಶರಣರ ವಿಚಾರಗಳೇ ನಮಗೆ ಆದರ್ಶ. ನಿತ್ಯ ಸ್ಪೂರ್ತಿ ದೌರ್ಜನ್ಯ ಅನ್ಯಾಯವನ್ನು ಹೋಗಲಾಡಿಸಲು ಸಂಸ್ಥೆಗಳನ್ನು ಸ್ಥಾಪಿಸಿದರು. ಲಿಂಗರಾಜ ದೇಸಾಯಿ ಅವರ ಟ್ರಸ್ಟ್‌ ಮೂಲಕ ಶಿಷ್ಯವೇತನ ಪಡೆದು ನೂರಾರು ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಇಂದಿಗೂ ಕೂಡ ಅದು ಮುಂದುವರೆಯುತ್ತಲಿದೆ. ಅವರ ಸ್ಮರಿಸುವುದು ಸಮಾಜಕ್ಕೆ ಅಗತ್ಯವಾಗಿದೆ ಎಂದರು.ಗದುಗಿನ ಡಾ.ಪಂಚಾಕ್ಷರಿ ಗವಾಯಿಗಳ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾದ ಹಾಗೂ ಧಾರವಾಡದಲ್ಲಿ ರಾಜ್ಯ ಮಟ್ಟದ ಪ್ರಥಮ ಕವಿಪೀಠ ಮಹಾ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಭೃಂಗಿಮಠ ಹಾಗೂ ಪಂಚಾಕ್ಷರಿ ಗವಾಯಿ ಮತ್ತು ಸಮಾಜ ಸೇವಕಿ ಪ್ರಶಸ್ತಿ ಪಡೆದ ಶಶಿಕಲಾ ಸ್ಥಾವರಮಠ ಅವರನ್ನು ಸನ್ಮಾನಿಸಲಾಯಿತು. ಕಾಶೀನಾಥ ಅಣೆಪ್ಪನವರ, ಸಹದೇವ ನಾಡಗೌಡರ, ಬಿ.ಟಿ.ಈಶ್ವರಗೊಂಡ, ಡಾ.ವಿ.ಡಿ.ಐಹೊಳ್ಳಿ, ಬಸವರಾಜ ಒಂಟಿಗೂಡಿ, ಬಸವರಾಜ ಇಟ್ಟಂಗಿ, ಎಂ.ಜಿ.ಯಾದವಾಡ, ಭೀಮಣ್ಣ ಭಜಂತ್ರಿ, ಗುರಲಿಂಗಪ್ಪ ಬಿರಾದಾರ, ಶಾರದಾ ಕೊಪ್ಪ(ಐಹೊಳ್ಳಿ) ರಮೇಶ ತೇಲಿ, ಬ್ಯಾಕೋಡ ದಂಪತಿ, ಸುಭಾಸ ಯಾದವಾಡ, ಶಿರಹಟ್ಟಿ, ಆರ್.ಎಸ್.ಪಟ್ಟಣಶೆಟ್ಟಿ, ಮಹಾದೇವ ಹಾಲಳ್ಳಿ ಉಪಸ್ಥಿತರಿದ್ದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ದೊಡ್ಡಣ್ಣ ಭಜಂತ್ರಿ ವಂದಿಸಿದರು.