ಶಿವಶರಣರ ಸಿದ್ದರಾಮೇಶ್ವರ ಸಮಾಜದ ಒಳಿತಿಗೆ ಬದುಕಿದ ನಿಜ ಕಾಯಕ ಯೋಗಿ: ರಮೇಶ ಪೆದ್ದೆ

| Published : Jan 15 2025, 12:45 AM IST

ಶಿವಶರಣರ ಸಿದ್ದರಾಮೇಶ್ವರ ಸಮಾಜದ ಒಳಿತಿಗೆ ಬದುಕಿದ ನಿಜ ಕಾಯಕ ಯೋಗಿ: ರಮೇಶ ಪೆದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ಕಮಲನಗರ ಪಟ್ಟಣದ ತಹಸೀಲ್‌ ಕಛೇರಿಯ ಆವರಣದಲ್ಲಿ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಶರಣರ 853ನೇ ಜಾತ್ರೆ ನಿಮಿತ್ತ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ, ಕಮಲನಗರ/ ಭಾಲ್ಕಿ

ಶಿವಯೋಗಿ ಸಿದ್ದರಾಮೇಶ್ವರ ಶರಣರ ಬಗ್ಗೆ ಮಾತನಾಡುವುದು ಶರಣ ಪೂಜೆ ಮಾಡಿದಂತೆ ಎಂದು ಗ್ರೇಡ್‌-2 ತಹಸೀಲ್ದಾರ್‌ ರಮೇಶ ಪೆದ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕಮಲನಗರ ಪಟ್ಟಣದ ತಹಸೀಲ್‌ ಕಛೇರಿಯ ಆವರಣದಲ್ಲಿ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಶರಣರ 853ನೇ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದ ಮಹಾಶರಣರ ಸಿದ್ದರಾಮೇಶ್ವರ ಸಮಾಜದ ಒಳಿತಿಗಾಗಿ ಬದುಕಿದ ನಿಜ ವಾದ ಕಾಯಕ ಯೋಗಿ. ಹೀಗಾಗಿ ಜಾತಿ, ಮತ, ಪಂಥಗಳೆನ್ನದೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು, 900 ವರ್ಷಗಳ ನಂತರ ಸಿದ್ದರಾಮೇಶ್ವರರನ್ನು ನೆನೆಯುತ್ತಿರುವ ಇಂದಿನ ನಮ್ಮ ಸಮಜ ತನ್ನನ್ನು ತಾವು ಅರಿತು ಬದಲಾಗಬೇಕಿದೆ ಎಂದು ನುಡಿದರು.ತಾಪಂ ಮಾಜಿ ಅಧ್ಯಕ್ಷರಾದ ಶ್ರೀರಂಗ ಪರಿಹಾರ ಮಾತನಾಡಿ, ಶಾಸ್ತ್ರ, ಪುರಾಣ ಮತ್ತು ವೇದಗಳನ್ನು ವಿರೋಧಿಸಿ ಸಿದ್ದರಾಮೇಶ್ವರರು ಜನರಿಗೆ ಪ್ರಯೋಜನ ಕಾರಿಯಾದ ಕೆರೆ, ಕಟ್ಟಿ, ಬಾವಿಗಳ ನಿರ್ಮಾಣಕ್ಕೆ ಮುಂದಾದವರು ಕಲ್ಯಾಣದ ಅಭಿವೃದ್ಧಿಗೆ ಶ್ರಮಿಸಿದವರು ಎಂದರು. ಕಾಯಕದ ಜೊತೆ ಸಾಹಿತ್ಯಕ್ಕೂ ಬಹು ದೊಡ್ಡ ಕೊಡುಗೆಯನ್ನು ಸಿದ್ದರಾಮೇಶ್ವರರು ನೀಡಿದ್ದಾರೆ ಎಂದು ನುಡಿದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಪ್ರವೀಣ ಬಿರಾದಾರ, ಸಂಜು ವಡೆಯರ ಭೋವಿ ಸಮಾಜದ ತಾಲುಕು ಅಧ್ಯಕ್ಷ, ಸುಬಾಷ ಮಿರ್ಚೆ, ರಾಜಕುಮಾರ ಹಿಪ್ಪಳಗಾಂವೆ, ಸುಭಾಷ ಗಾಯಕವಾಡ, ಶಾಂತಕುಮಾರ ಬಿರಾದಾರ, ಸಂತೊಷ ಸೊಲಾಪುರೆ, ಮಹೇಶ ಸಜ್ಜನ, ಮನೋಜ ಪವಾರ್‌, ರವಿ ಕಾರಬಾರಿ ಹಾಗೂ ಅನೇಕ ಮಹಿಳೆಯರು, ಮಕ್ಕಳು ಹಾಜರಿದ್ದರು.ತಹಸೀಲ್‌ ಕಾರ್ಯಾಲಯದಿಂದ ಮೆರವಣಿಗೆ ಪ್ರಾರರಂಭವಾಗಿ ಸೋನಾಳ ಮುಖ್ಯ ರಸ್ತೆ ಮೂಲಕ ಶಿವಾಜಿ ವೃತ್ತ, ಗ್ರಾಮ ಪಂಚಾಯತ್‌, ಬಸವೇಶ್ವರ ವೃತ್ತ , ಹಳೆ ಪೊಲೀಸ್‌ ಸ್ಟೇಷನ್‌, ಅತಿಥಿ ಗೃಹ, ಅಲ್ಲಮಪ್ರಭು ವೃತ್ತದ ಬೀದರ್‌ ನಾಂದೇಡ ಮುಖ್ಯ ರಸ್ತೆಯಿಂದ ಹನುಮಾನ ಮಂದಿರವರೆಗೆ ಸಾಗಿ ಮುಕ್ತಾಯ ಗೊಳಿಸಲಾಯಿತು.ಕಾಯಕದಿಂದ ಮೆಚ್ಚುಗೆ ಗಳಿಸಿದ ಮಹಾಶರಣ ಮೇದಾರ ಕೇತಯ್ಯ: ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು

ಭಾಲ್ಕಿ: 12ನೆಯ ಶತಮಾನದ ಬಸವಾದಿ ಶರಣರಲ್ಲಿ ಮೇದಾರ ಕೇತಯ್ಯ ಶರಣರು ತಮ್ಮ ಕಾಯಕ ತತ್ವದಿಂದ ಮೆಚ್ಚುಗೆ ಗಳಿಸಿದರು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಮೇದಾರ ಕೇತಯ್ಯ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಕಲ್ಯಾಣದ ಅನುಭವ ಮಂಟಪದಲ್ಲಿ ಶರಣ ಕೇತಯ್ಯ ಅವರು ಬಸವಣ್ಣನವರ ಅಚ್ಚುಮೆಚ್ಚಿನವರಾಗಿದ್ದರು. ಮೇದಾರ ಕೇತಯ್ಯ ಶರಣರು ಬಸವಣ್ಣನವರ ಕಾರ್ಯಕ್ಕೆ ಪ್ರಭಾವಿತರಾಗಿ ಅವರನ್ನು ಗುರುವಾಗಿ ಸ್ವೀಕರಿಸಿದರು ಎಂದರು. ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದರು.

ಶಿವಬಸವ ದೇವರು ಅನುಭಾವ ನೀಡಿದರು. ಈ ಸಂದರ್ಭದಲ್ಲಿ ಮೇದಾರ ಕೇತಯ್ಯ ಸಮಾಜದ ಮುಖಂಡ ನಾಗನ್ನಾಥ ಮೇಘಾ ಅಧ್ಯಕ್ಷತೆ ವಹಿಸಿದರು.ಮೇದಾರ ಕೇತಯ್ಯ ಸಮಾಜದ ಅಧ್ಯಕ್ಷ ಬಸವರಾಜ ಚಂದಾನೋರ, ಶಂಕರ ಚಂದಾನೋರ, ಶ್ರೀಧರ ಚಂದಾನೋರ, ಅನಿಲಕುಮಾರ ಚಂದಾನೋರ, ಸಚಿನ ಪೂಜಾರಿ, ಸಿದ್ದು ವಾಗ್ಮಾರೆ, ವಿಶಾಲ ಪಳಸೆ, ಶರಣು ತೆಲಗಾಣೆ ಸೇರಿದಂತೆ ಹಲವರು ಇದ್ದರು. ಪ್ರಿಯಂಕಾ ರಾಹುಲ ಸಾವಂತ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿದರು.