ಸಾರಾಂಶ
ಕಾರ್ಮಿಕ ಇಲಾಖೆಯ ಮೂಲಕ ಬಂಟ್ವಾಳ ಕ್ಷೇತ್ರದಲ್ಲಿ ಪ್ರಸ್ತುತ ೩೧೮ ಮಂದಿ ಮೇಸ್ತ್ರಿಗಳಿಗೆ ಕಿಟ್, ೧೦೧ ಮಂದಿ ವೆಲ್ಡರ್‌ಗಳಿಗೆ ಕಿಟ್ ಹಾಗೂ ೬೩ ಮಂದಿ ಎಲೆಕ್ಟ್ರೀಷಿಯನ್‌ಗಳಿಗೆ ಸೇರಿ ಒಟ್ಟು ೪೮೨ ಮಂದಿಗೆ ಕಿಟ್ ಮಂಜೂರಾಗಿದ್ದು, ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಯಿತು. ಜತೆಗೆ ೩೬ ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಆರ್ಥಿಕವಾಗಿ ಹಿಂದುಳಿದ ಅರ್ಹ ಫಲಾನುಭವಿಗಳಿಗೆ ಸರಕಾರ ವಿವಿಧ ಸಲಕರಣೆಗಳನ್ನು ನೀಡುತ್ತಿದ್ದು, ಅದನ್ನು ಪಡೆದುಕೊಂಡವರು ತಮ್ಮ ಆದಾಯಕ್ಕೆ ಪೂರಕವಾಗಿ ಬಳಸಿಕೊಂಡು ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.ಅವರು ತಮ್ಮ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಮಂಜೂರಾದ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಪ್ರಸ್ತುತ ಅರ್ಜಿ ಹಾಕಿರುವ ೧೨೬ ಮಂದಿಯ ಪೈಕಿ ಸರಕಾರದ ಗುರಿಯಂತೆ ೩೬ ಮಂದಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಟೈಲರಿಂಗ್ ಯಂತ್ರ ನೀಡಲಾಗಿದೆ. ಮುಂದೆ ಮತ್ತೆ ಯಂತ್ರ ಮಂಜೂರಾದಾಗ ಉಳಿದ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದರು.ಕಾರ್ಮಿಕ ಇಲಾಖೆಯ ಮೂಲಕ ಬಂಟ್ವಾಳ ಕ್ಷೇತ್ರದಲ್ಲಿ ಪ್ರಸ್ತುತ ೩೧೮ ಮಂದಿ ಮೇಸ್ತ್ರಿಗಳಿಗೆ ಕಿಟ್, ೧೦೧ ಮಂದಿ ವೆಲ್ಡರ್‌ಗಳಿಗೆ ಕಿಟ್ ಹಾಗೂ ೬೩ ಮಂದಿ ಎಲೆಕ್ಟ್ರೀಷಿಯನ್‌ಗಳಿಗೆ ಸೇರಿ ಒಟ್ಟು ೪೮೨ ಮಂದಿಗೆ ಕಿಟ್ ಮಂಜೂರಾಗಿದ್ದು, ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಯಿತು. ಜತೆಗೆ ೩೬ ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಯಿತು.ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್, ಬಂಟ್ವಾಳ ಕಾರ್ಮಿಕ ನಿರೀಕ್ಷಕಿ ಲವಿನಾ ಡಿಸೋಜ, ಕಚೇರಿ ಸಹಾಯಕರಾದ ಶಶಿಧರ, ಮುರಳಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))