ದತ್ತ ಜಯಂತಿ: ಜಿಲ್ಲೆಯಾದ್ಯಂತ ಭಕ್ತರಿಂದ ಮಾಲಾಧಾರಣೆ

| Published : Dec 07 2024, 12:32 AM IST

ಸಾರಾಂಶ

ಚಿಕ್ಕಮಗಳೂರು, ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಪಂಚಮಿ ದಿನವಾದ ಶುಕ್ರವಾರ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಸಂಘ ಪರಿವಾರದ ಮುಖಂಡರು ದತ್ತಮಾಲೆ ಧರಿಸಿದರು.

ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ, ರಘು ಸಕಲೇಶಪುರ ಹಲವು ಮುಖಂಡರಿಂದ ಮಾಲಾಧಾರಣೆ । 14 ರಂದು ದತ್ತಮಾಲಾ ಅಭಿಯಾನಕ್ಕೆ ತೆರೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಪಂಚಮಿ ದಿನವಾದ ಶುಕ್ರವಾರ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಸಂಘ ಪರಿವಾರದ ಮುಖಂಡರು ದತ್ತಮಾಲೆ ಧರಿಸಿದರು.ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ಗಣಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸಿ.ಟಿ. ರವಿ, ವಿಎಚ್‌ಪಿ ಹಾಸನ ವಿಭಾಗದ ಸಹ ಕಾರ್ಯದರ್ಶಿ ರಘು ಸಕಲೇಶಪುರ, ವಿಭಾಗೀಯ ಸಹ ಕಾರ್ಯದರ್ಶಿ ಆರ್.ಡಿ. ಮಹೇಂದ್ರ, ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಕಾರ್ಯದರ್ಶಿ ರಂಗನಾಥ್, ಮುಖಂಡರಾದ ತುಡುಕೂರು ಮಂಜು, ಅಮಿತ್‌ಗೌಡ, ಶ್ಯಾಮ್ ವಿ.ಗೌಡ, ಕೃಷ್ಣ ಹಾಗೂ ಕಾರ್ಯಕರ್ತರು ಮಾಲಾಧಾರಣೆ ಮಾಡಿದರು.ಶೃಂಗೇರಿ ತಾಲೂಕು ಕೇಂದ್ರದಲ್ಲೂ ಸಹ ದತ್ತ ಭಕ್ತರು ದತ್ತಮಾಲೆ ಧರಿಸಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದತ್ತ ಭಕ್ತರು ದತ್ತ ಮಾಲೆ ಧರಿಸಲಿದ್ದಾರೆ. ಡಿ. 12 ರಂದು ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಶ್ರೀ ಬೋಳ ರಾಮೇಶ್ವರ ದೇವಾಲಯದಿಂದ ಹೊರಟು ಕೆಎಂ ರಸ್ತೆ, ಐ.ಜಿ. ರಸ್ತೆಯ ಮೂಲಕ ಶ್ರೀ ಕಾಮಧೇನು ಗಣಪತಿ ದೇವಾಲಯ ತಲುಪಿದ ಬಳಿಕ ಮಾತೆಯರು ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿ ಪೂಜೆ ನೆರವೇರಿಸಲಿದ್ದಾರೆ.

ಡಿ.13 ರಂದು ಚಿಕ್ಕಮಗಳೂರಿನಲ್ಲಿ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಮಧ್ಯಾಹ್ನ 2.30ಕ್ಕೆ ಶೋಭಾಯಾತ್ರೆ ಹೊರಟು ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮೂಲಕ ಆಜಾದ್‌ ಪಾರ್ಕ್‌ ವೃತ್ತ ತಲುಪಲಿದೆ. ಈ ಮಾರ್ಗದ ಉದ್ದಕ್ಕೂ ಕೇಸರಿ ಧ್ವಜ ಕಟ್ಟಿ ಅಲಂಕರಿಸಲಾಗಿದೆ.

ಡಿ. 14 ರಂದು ದತ್ತಪೀಠಕ್ಕೆ ರಾಜ್ಯದ ವಿವಿಧೆಯಿಂದ ದತ್ತ ಭಕ್ತರು ಆಗಮಿಸಲಿದ್ದು, ಈ ಬಾರಿ ಸುಮಾರು 25 ಸಾವಿರ ಮಂದಿ ಭಕ್ತರನ್ನು ನಿರೀಕ್ಷಿಸಲಾಗಿದೆ. ಪೀಠಕ್ಕೆ ಬರುವ ಭಕ್ತರು ದತ್ತ ಗುಹೆಯಲ್ಲಿ ಪಾದುಕೆಗಳ ದರ್ಶನ ಪಡೆದು ವಾಪಸ್‌ ತೆರಳಲಿದ್ದಾರೆ.

ಉತ್ಸವದ ಹಿನ್ನಲೆಯಲ್ಲಿ ಬಂದೋಬಸ್ತ್‌ಗೆ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌ ತುಕಡಿಗಳು ಈಗಾಗಲೇ ಜಿಲ್ಲಾ ಕೇಂದ್ರಕ್ಕೆ ಆಗಮಿ ಸಿದ್ದು, ಶುಕ್ರವಾರ ನಗರದ ಅಂಬೇಡ್ಕರ್‌ ರಸ್ತೆ, ತಮಿಳು ಕಾಲೋನಿ, ಷರೀಪ್‌ ಗಲ್ಲಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರೂಟ್‌ ಮಾರ್ಚ್‌ ನಡೆಸಿದರು.

--- ಬಾಕ್ಸ್‌---ವಕ್ಫ್‌ ಬೋರ್ಡ್‌ಗೆ ದತ್ತಪೀಠ ಬಲಿ ಪಶು: ಸಿ.ಟಿ. ರವಿ ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಸ್ತುತ ವಕ್ಫ್‌ ಬೋರ್ಡ್‌ ಗಲಾಟೆ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಮೊದಲ ಬಲಿ ಪಶು ಆಗಿದ್ದು ದತ್ತಪೀಠ ಮತ್ತು ದತ್ತಾತ್ರೇಯ ದೇವರು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಶುಕ್ರವಾರ ದತ್ತಮಾಲೆ ಧರಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, 1973- 74 ರಲ್ಲಿ ಗೆಜೆಟ್ ಮಾಡುವಾಗ ಮೂಲ ದಾಖಲೆ ಪರಿಶೀಲಿಸದೆ ದತ್ತಾತ್ರೇಯ ಪೀಠವನ್ನು ವಕ್ಫ್‌ ಬೋರ್ಡ್‌ಗೆ ಸೇರಿಸಿ ಗೆಜೆಟ್ ನೋಟಿಫೀಕೇಶನ್ ಮಾಡಿದ ಪರಿಣಾಮ ನಾವು ಅದನ್ನ ಉಳಿಸಿಕೊಳ್ಳಲು ಜನಾಂದೋಲನ-ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಯಿತು. ಜನಾಂದೋಲನ ಸಾಕಷ್ಟು ಪರಿಣಾಮ ಬೀರಿದೆ. ನ್ಯಾಯಾಂಗ ಹೋರಾಟ ಸಹ ನಮಗೆ ಅರ್ಧ ನ್ಯಾಯ ಕೊಟ್ಟಿದೆ. ಪೂರ್ಣ ನ್ಯಾಯಕ್ಕಾಗಿ ಭಕ್ತಿ ಮತ್ತು ಶಕ್ತಿ ಆಂದೋಲನ, ಹೋರಾಟ ಮುಂದುವರೆಸಲಾಗುವುದು ಎಂದರು.ಬಾಂಗ್ಲಾ ದೇಶದಲ್ಲಿ ಆಗುತ್ತಿರುವ ಬೆಳವಣಿಗೆ ಗಮನಿಸಿದಾಗ ಇಸ್ಲಾಂನ ಡಿಎನ್‌ಎ ವನ್ನ ನಾವು ಅಂಗೈಗೆ ಕನ್ನಡಿ ಹೇಗೆ ಹಿಡಿಯ ಬೇಕಾಗಿಲ್ಲವೋ ಹಾಗೆಯೇ ಇಸ್ಲಾಂ ಹೆಸರಿನಲ್ಲಿ ನಡೆದ ಕ್ರೌರ್ಯ, ನರಮೇಧ, ಸಂಸ್ಕೃತಿ ನಾಶ. ಇದಕ್ಕೆ ಮತ್ತೆ ಮತ್ತೆ ಸಾಕ್ಷಿ ಹುಡುಕುವ ಅವಶ್ಯಕತೆ ಇಲ್ಲ. ಜಗತ್ತಿನ ಉದ್ದಗಲಕ್ಕೂ ಕ್ರೌರ್ಯ, ಮತಾಂಧತೆ ಮತದ ವಿಸ್ತರಣೆ ಮಾಡುತ್ತಾ ಬಂದಿದ್ದಾರೆ. ಅವರನ್ನ ಎದುರಿಸದಿದ್ದರೆ ಜಗತ್ತಿನ ಎಲ್ಲಾ ಸಂಸ್ಕೃತಿಗಳು, ಸಾವಿರಾರು ವರ್ಷಗಳ ಪರಂಪರೆ, ಭಾಷೆ ನಾಶವಾಗುತ್ತದೆ. ಇದನ್ನು ತಡೆಯಲು ಇರುವ ಒಂದೇ ದಾರಿ ಅವರನ್ನು ಅವರದೆ ರೀತಿ ಎದುರಿಸಬೇಕು ಎಂದು ಹೇಳಿದರು.

ಬಾಂಗ್ಲಾ ದೇಶದಲ್ಲಿ ಒಂದು ಕಾಲದಲ್ಲಿ ಶೇ.1 ರಷ್ಟು ಇಸ್ಲಾಂ ಸಂಖ್ಯೆ ಇರಲಿಲ್ಲ. ಆದರೆ, ಇಂದು ಭಾರೀ ಸಂಖ್ಯೆಯಲ್ಲಿ ಬೆಳೆದಿದೆ. ಸಂಸ್ಕೃತಿ ನಾಶ ಮತ್ತು ಕಬಳಿಕೆ ನಿಲ್ಲುವಂತದ್ದು ಅಲ್ಲವೆಂದು ಮಾನಗಂಡು ಅಂಬೇಡ್ಕರ್ ವಿವರಣೆ ನೀಡಿ, ಎಲ್ಲಾ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಅಲ್ಲಿನ ಹಿಂದುಗಳನ್ನು ಇಲ್ಲಿಗೆ ಕರೆ ತನ್ನಿ ಎಂದು ಹೇಳಿದ್ದರು. ಅವರ ಮಾತು ಕೇಳದ ಪರಿಣಾಮ ಹಿಂದುಗಳು ನಿರಾಶ್ರಿತರಾಗುವ ಪರಿಸ್ಥಿತಿ ಬಂದಿದೆ ಎಂದರು.ಸಂಸತ್ತಿಗೆ ಸವಾಲ್, ವಿಧಾನಸೌಧವೇ ನಮ್ಮದು ಎನ್ನುತ್ತಿದ್ದಾರೆ. ನಮ್ಮ ದೇವಾಲಯ ಉಳಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಇಂದು ಅಲ್ಲದೇ ಹೋದರೆ ಮುಂದೆ ಯಾವತ್ತೂ ಇಲ್ಲ. ಹಾಗಾಗಿ ಯಾವುದೇ ಜಾತಿಬೇಧಕ್ಕೆ ಅವಕಾಶ ನೀಡದೆ ಮೂಲತತ್ವಕ್ಕೆ ಬದ್ಧರಾಗಿ ಒಂದಾಗಿರಬೇಕು ಎಂದು ಹೇಳಿದರು.

6 ಕೆಸಿಕೆಎಂ 8----

ದತ್ತಪೀಠದ ಹೋರಾಟಕ್ಕೆ ಈ ಬಾರಿ ರಜತ ಮಹೋತ್ಸವ ವರ್ಷ. ಇಡೀ ಕಾರ್ಯಕರ್ತರಿಗೆ ಹುಮ್ಮಸ್ಸು ಬಂದಿದೆ. ದತ್ತ ಪೀಠದಲ್ಲಿನ ಎಲ್ಲಾ ಗೋರಿಗಳನ್ನು ಸ್ಥಳಾಂತರಿಸಬೇಕು. ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ದತ್ತಪೀಠದಲ್ಲಿ ಉತ್ಖನನ ಆಗಬೇಕು. ಪಾದುಕೆಗಳ ದರ್ಶನ ಆಗ್ತಾ ಇದೆ. ಗುಹೆಯಲ್ಲಿ ತ್ರಿಕಾಲ ಪೂಜೆ ನಡೆಯಬೇಕು.

- ರಘು ಸಕಲೇಶಪುರ

ಸಹ ಕಾರ್ಯದರ್ಶಿ ವಿಎಚ್‌ಪಿ ಹಾಸನ ವಿಭಾಗಪೋಟೋ 6 ಕೆಸಿಕೆಎಂ 9

---

ಪೋಟೋ 6 ಕೆಸಿಕೆಎಂ 6ಚಿಕ್ಕಮಗಳೂರಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ರಘು ಸಕಲೇಶಪುರ, ಯೋಗೀಶ್‌ ರಾಜ್‌ ಅರಸ್‌ ಹಾಗೂ ಮುಖಂಡರು ದತ್ತಮಾಲೆ ಧಾರಣೆ ಮಾಡಿದರು.

---ಪೋಟೋ ನೇಮ್‌ 6 ಕೆಸಿಕೆಎಂ 7ದತ್ತಮಾಲಾ ಅಭಿಯಾನ ಹಿನ್ನಲೆಯಲ್ಲಿ ಬಂದೋಬಸ್ತಿಗೆ ಬಂದಿರುವ ಸಿಆರ್‌ಪಿಎಫ್‌ ಸಿಬ್ಬಂದಿ ಚಿಕ್ಕಮಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಶುಕ್ರವಾರ ರೂಟ್‌ ಮಾರ್ಚ್‌ ನಡೆಸಿದರು.