ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಗೆಲುವು ಖಚಿತ: ಪತ್ನಿ ಅಕ್ಷತಾ ಶ್ರೇಯಸ್‌

| Published : Apr 25 2024, 01:04 AM IST

ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಗೆಲುವು ಖಚಿತ: ಪತ್ನಿ ಅಕ್ಷತಾ ಶ್ರೇಯಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ಶ್ರೇಯಸ್ ಪಟೇಲ್ ಗೆಲುವು ನಿಶ್ಚಿತ ಎಂದು ಪತ್ನಿ ಅಕ್ಷತಾ ಶ್ರೇಯಸ್ ವಿಶ್ವಾಸ ವ್ಯಕ್ತಪಡಿಸಿದರು. ಬೇಲೂರು ಶ್ರೀ ಚನ್ನಕೇಶವ ಸ್ವಾಮಿಯ ನಾಡ ರಥೋತ್ಸವದ ನಂತರ ದೇಗುಲಕ್ಕೆ ಆಗಮಿಸಿ ಪತಿಯ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.

ಪತಿಯ ಗೆಲುವಿಗೆ ಚನ್ನಕೇಶವನಿಗೆ ವಿಶೇಷ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ ಬೇಲೂರು

ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ಶ್ರೇಯಸ್ ಪಟೇಲ್ ಗೆಲುವು ನಿಶ್ಚಿತ ಎಂದು ಪತ್ನಿ ಅಕ್ಷತಾ ಶ್ರೇಯಸ್ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀ ಚನ್ನಕೇಶವ ಸ್ವಾಮಿಯ ನಾಡ ರಥೋತ್ಸವದ ನಂತರ ದೇಗುಲಕ್ಕೆ ಆಗಮಿಸಿದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪತ್ನಿ ಅಕ್ಷತಾ ಶ್ರೇಯಸ್ ಪತಿಯ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ‘ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಈಗಾಗಲೇ ರಾಜ್ಯದ ಜನತೆ ಸಂತೋಷವಾಗಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಮಾಸಿಕ 2,000 ರು. ಗೃಹಲಕ್ಷ್ಮಿ ಯೋಜನೆ, ಉಚಿತ ಬಸ್ ಪಾಸ್ ಹಾಗೂ ಉಚಿತ ವಿದ್ಯುತ್ ನೀಡುತ್ತಿರುವುದು ಅವರಿಗೆ ನವ ಚೈತನ್ಯ ತುಂಬಿದಂತಾಗಿದೆ. ಬೇಲೂರು ತಾಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು ಎಲ್ಲಾ ನಾಯಕರು ಒಗ್ಗೂಡಿ ಶ್ರೇಯಸ್ ಗೆಲುವಿಗೆ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ಕುರುಬ ಸಮಾಜದ ಮುಖಂಡರಾದ ಸೌಮ್ಯ ಆನಂದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದುಳಿದ ವರ್ಗ ಹಾಗೂ ಪಂಗಡಗಳಿಗೆ ಉತ್ತಮವಾದ ಯೋಜನೆಗಳನ್ನು ನೀಡುತ್ತಿದೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಜನತೆ ಕಾಂಗ್ರೆಸ್ ಪರವಾಗಿ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲುವುದು ಖಚಿತ ಎಂದು ಹೇಳಿದರು.

ಬೇಲೂರು ಶ್ರೀ ಚನ್ನಕೇಶವ ಸ್ವಾಮಿಯ ನಾಡ ರಥೋತ್ಸವ ಬಳಿಕ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪತ್ನಿ ಅಕ್ಷತಾ ಶ್ರೇಯಸ್ ಆಗಮಿಸಿ ಪತಿಯ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಕುರುಬ ಸಮಾಜದ ಮುಖಂಡರಾದ ಸೌಮ್ಯ ಆನಂದ್ ಹಾಜರಿದ್ದರು.