ಸಾರಾಂಶ
ಹನ್ಯಾಳು ಗ್ರಾಮಕ್ಕೆ ಹಬ್ಬಕ್ಕೆ ಊರಿಗೆ ಆಗಮಿಸಿದ್ದ ಹುಡುಗರಿಗಾಗಿ ಗ್ರಾಮದ ಹಿರಿಯ ವಿದ್ಯಾರ್ಥಿ ಬಳಗ ನೀರಾವರಿ ತಜ್ಞ ದಿವಂಗತ ಎಚ್ ಎನ್ ನಂಜೇಗೌಡರ ಸ್ಮರಣಾರ್ಥ ಫೇಸ್ಬುಕ್ ಲೈವ್ ನಲ್ಲಿ ರೋಲಿಂಗ್ ಟ್ರೋಫಿ 2024 ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸುಮಾರು 16 ತಂಡಗಳು ಭಾಗವಹಿಸಿದ್ದು, ಶ್ರೀನಿವಾಸ್ ಅವರ ತಂಡ ಪ್ರಥಮ ಸ್ಥಾನ ಪಡೆದು ಪ್ರಪ್ರಥಮ ರೋಲಿಂಗ್ ಟ್ರೋಫಿ ಹಾಗೂ ಆಕರ್ಷಕ ಬಹುಮಾನ ಗಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಹೋಬಳಿಯ ಹನ್ಯಾಳು ಗ್ರಾಮಕ್ಕೆ ಹಬ್ಬಕ್ಕೆ ಊರಿಗೆ ಆಗಮಿಸಿದ್ದ ಹುಡುಗರಿಗಾಗಿ ಗ್ರಾಮದ ಹಿರಿಯ ವಿದ್ಯಾರ್ಥಿ ಬಳಗ ನೀರಾವರಿ ತಜ್ಞ ದಿವಂಗತ ಎಚ್ ಎನ್ ನಂಜೇಗೌಡರ ಸ್ಮರಣಾರ್ಥ ಫೇಸ್ಬುಕ್ ಲೈವ್ ನಲ್ಲಿ ರೋಲಿಂಗ್ ಟ್ರೋಫಿ 2024 ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸುಮಾರು 16 ತಂಡಗಳು ಭಾಗವಹಿಸಿದ್ದು, ಶ್ರೀನಿವಾಸ್ ಅವರ ತಂಡ ಪ್ರಥಮ ಸ್ಥಾನ ಪಡೆದು ಪ್ರಪ್ರಥಮ ರೋಲಿಂಗ್ ಟ್ರೋಫಿ ಹಾಗೂ ಆಕರ್ಷಕ ಬಹುಮಾನ ಗಳಿಸಿದರು. ಹಾಗೂ ಸ್ವಾಮಿಗೌಡರವರ ತಂಡ ದ್ವಿತೀಯ ಸ್ಥಾನ ಪಡೆದರು. ಈ ಕಾರ್ಯಕ್ರಮಕ್ಕೆ ಹಿರಿಯ ವಿದ್ಯಾರ್ಥಿ ಬಳಗದ ನಿರ್ದೇಶಕ ಮಂಜು ಅವರು ಬಹುಮಾನ ನೀಡಿ ಕ್ರೀಡಾಸಕ್ತಿ ಮೆರೆದರು. ಹಿರಿಯ ವಿದ್ಯಾರ್ಥಿ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರು ಗ್ರಾಮಸ್ಥರು ತಡರಾತ್ರಿ 2.30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದ್ದು ತುಂಬಿ ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಬಳಗದ ವಿಜಯ ಕುಮಾರ್, ಡಾ. ಅಶೋಕ್, ಸೀತಾರಾಮ್ ಸ್ವಾಮಿಗೌಡ, ಕುಮಾರ್ ಶ್ರೀನಿವಾಸ್ ಎಸ್ ಎಸ್ ಹನುಮೇಶ್, ಸೋಮೇಶ್, ಅವಿನಾಶ್, ಮೂರನೇ ತರಗತಿಯ ವಿದ್ಯಾರ್ಥಿ ಕ್ರಿಶವ್ ಎಂ ಗೌಡ ಆಟ ಎಲ್ಲರ ಮೆಚ್ಚಿಗೆಗೆ ಪಾತ್ರವಾಯಿತು.