ಪೂರ್ವಾಪರ ಪಾಪ-ಕರ್ಮಗಳನ್ನು ಗುರು, ಗೋ ಹಾಗೂ ಸಮಾಜ ಸೇವೆ ಮಾಡುವ ಮೂಲಕ ನಿವಾರಿಸಿಕೊಳ್ಳಬಹುದು ಎಂದು ಖ್ಯಾತ ಜ್ಯೋತಿಷಿ ಲಕ್ಷ್ಮಿ ಶ್ರೀನಿವಾಸ ಗುರೂಜಿ ಹೇಳಿದರು.
ರಾಣಿಬೆನ್ನೂರು: ಪೂರ್ವಾಪರ ಪಾಪ-ಕರ್ಮಗಳನ್ನು ಗುರು, ಗೋ ಹಾಗೂ ಸಮಾಜ ಸೇವೆ ಮಾಡುವ ಮೂಲಕ ನಿವಾರಿಸಿಕೊಳ್ಳಬಹುದು ಎಂದು ಖ್ಯಾತ ಜ್ಯೋತಿಷಿ ಲಕ್ಷ್ಮಿ ಶ್ರೀನಿವಾಸ ಗುರೂಜಿ ಹೇಳಿದರು.
ತಾಲೂಕಿನ ಹೊನ್ನತ್ತಿ ಗ್ರಾಮದ ಶ್ರೀ ಹೊನ್ನನಾಗದೇವತಾ ಹಾಗೂ ಹೇಮಾವತಿ ದೇವಸ್ಥಾನ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಮಂಡಲ ಪೂಜಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಏಕಾಗ್ರತೆ ಮತ್ತು ಧ್ಯಾನ ಮಾಡುವುದರಿಂದ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ ಎಂದರು.ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಣ್ಣ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ರಾಣಿಬೆನ್ನೂರಿನ ಲಕ್ಷ್ಮಿ ಭಜನಾ ಮಂಡಳಿ ಸದಸ್ಯರು ವಿಷ್ಣು ಸಹಸ್ರನಾಮ ಹಾಡಿದರು. ಆತ್ಮಾನಂದ ಜಾನಪದ ಕಲಾ ತಂಡದ ಸದಸ್ಯರು ಜಾನಪದ ಗಾಯನ ಪ್ರಸ್ತುತ ಪಡಿಸಿದರು.
ಏಕಾಂತ ಮುದ್ರಿಗೌಡ್ರ, ಸಣ್ಣತಮ್ಮಪ್ಪ ಬಾರ್ಕಿ, ಪಿ.ವಿ. ಮಠದ, ವಾಗೀಶ ಭಿಕ್ಷಾವತಿಮಠ, ಬಸವರಾಜಪ್ಪ ಕುರುಗೋಡಪ್ಪನವರ, ಶಿವಕುಮಾರ ಮುದಿಗೌಡ್ರ, ಕುರುವತ್ತೆಪ್ಪ ಬಣಕಾರ, ಕೊಟ್ರೇಶಪ್ಪ ಉಕ್ಕುಂದ, ಶಿವಪ್ಪ ದಾಸನಹಳ್ಳಿ, ಫಕ್ಕಿರಮ್ಮ ಬ್ಯಾಡಗಿ, ಅರುಣಕುಮಾರ, ವಿಶ್ವನಾಥ ಹಾದಿಮನಿ, ದಾನಪ್ಪ ಯಲಿಗಾರ, ಮೋಹನ ಅರ್ಕಾಚಾರಿ, ಗಂಗಾಧರಪ್ಪ ಮತ್ತಿತರರಿದ್ದರು.