ಸಾರಾಂಶ
ವೀರಶೈವ ಲಿಂಗಾಯತ ಸಮಾಜದವರು ಒಗ್ಗಟ್ಟಿನಿಂದಿರುವ ಜೊತೆಗೆ ಜನಗಣತಿಯಲ್ಲಿ ಧರ್ಮ ವೀರಶೈವ ಲಿಂಗಾಯತ ಬರೆಯಿಸಬೇಕು ಎಂಬುದು ಏಕತಾ ಸಮಾವೇಶ ಉದ್ದೇಶ
ಕನ್ನಡಪ್ರಭ ವಾರ್ತೆ ಬಾದಾಮಿ
ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗಾಗಿ ಹುಬ್ಬಳ್ಳಿಯಲ್ಲಿ ನಡೆಯುವ ಏಕತಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದವರು ಒಗ್ಗಟ್ಟಿನಿಂದಿರುವ ಜೊತೆಗೆ ಜನಗಣತಿಯಲ್ಲಿ ಧರ್ಮ ವೀರಶೈವ ಲಿಂಗಾಯತ ಬರೆಯಿಸಬೇಕು ಎಂಬುದು ಏಕತಾ ಸಮಾವೇಶ ಉದ್ದೇಶವಾಗಿದೆ. ಸೆ.19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯುವ ವೀರಶೈವ ಲಿಂಗಾಯತ ಏಕತಾ ಮಹಾಸಭೆಯಲ್ಲಿ ಮುಂಬರುವ ಜಾತಿಗಣತಿಯಲ್ಲಿ ಯಾವ ಕಾಲಂನಲ್ಲಿ ಏನು ನಮೂದಿಸಬೇಕು ಎಂದು ತೀರ್ಮಾನ ಮಾಡಲಾಗುತ್ತಿದೆ. ಒಳಪಂಗಡ ಬೇಧಭಾವ ಮರೆತು ಒಂದಾಗಬೇಕು. ವೀರಶೈವ ಲಿಂಗಾಯತ ಸಮಾಜದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ಸೆ.19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುವ ಏಕತಾ ಸಮಾವೇಶದಲ್ಲಿ ನಮ್ಮ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರಾಚಣ್ಣ ಪಟ್ಟಣದ, ಗುರುಸಿದ್ದಯ್ಯ ಹಿರೇಮಠ, ಮಾಗುಂಡಪ್ಪ ಮಣ್ಣೂರ, ಅಡಿವೆಪ್ಪ ಡಾಣಕಶಿರೂರ, ಕೆ.ವಿ.ಮ್ಯಾಗೇರಿ, ಎಚ್.ಬಿ.ಬರಗಿ, ಎಮ್.ಬಿ.ಗೋಪಾಲಪ್ಪನವರ, ಬಸಣ್ಣ ಚವಡಿ, ಗೋವಿಂದಪ್ಪ ಮಡಿವಾಳರ, ಶಿವುಕುಮಾರ ಆಶಿ, ಸಂಜೀವ ಬರಗುಂಡಿ, ಎಚ್.ಎಸ್.ಲೋಕಾಪುರ, ಸತೀಶ ಹಂಜಿ, ಈರಣ್ಣ ಅರಗಂಜಿ, ಸುರೇಶ ಹಡಪದ್, ಜಂಬಯ್ಯ ಪೂಜಾರ್, ಎಲ್. ಆರ್.ಈಳಗೇರ ಇತರರು ಇದ್ದರು.