ತಾಲೂಕಿನ ಉಳವಿ ಹೋಬಳಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆ, ಗಾಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿ, ಲಕ್ಷಾಂತರ ರು. ಮೌಲ್ಯ ಆಸ್ತಿಗೆ ನಷ್ಟ ಸಂಭವಿಸಿದೆ.
ಸೊರಬ: ತಾಲೂಕಿನ ಉಳವಿ ಹೋಬಳಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆ, ಗಾಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿ, ಲಕ್ಷಾಂತರ ರು. ಮೌಲ್ಯ ಆಸ್ತಿಗೆ ನಷ್ಟ ಸಂಭವಿಸಿದೆ.
ಉಳವಿ ಗ್ರಾಮದ ಭಾಷಾ ಸಾಬ್ ಎಂಬುವರ ಮನೆ ಎದುರಿನ ತೆಂಗಿನ ಮರ ಮುರಿದು ಬಿದ್ದು ಬೈಕ್ ಜಖಂಗೊAಡಿದೆ. ವೆಂಕಟೇಶ್ ಎಂಬುವರ ಮನೆಯ ಎಂಚುಗಳು ಗಾಳಿಗೆ ಹಾರಿ ಹೋಗಿವೆ. ಜನತಾ ಕಾಲೋನಿಯಲ್ಲಿ ಮುಕ್ಬುಲ್ ಸಾಬ್ ಎಂಬುವರ ಮನೆಯ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ಬಾಬಣ್ಣ ಎಂಬುವರ ಕೊಟ್ಟಿಗೆ ಮನೆಯ ಸಿಮೆಂಟ್ ಸೀಟುಗಳು ಹಾರಿ ಹೋಗಿವೆ. ಉಳವಿ ಜನತಾ ಕಾಲೋನಿಯ ನಾಗರಾಜ್ ಹಾಗೂ ಉಳವಿ ಮುಖ್ಯ ರಸ್ತೆಯಲ್ಲಿನ ಕರಿಬಸಣ್ಣ ಎಂಬುದು ಮನೆಯ ಹೆಂಚುಗಳು ಹಾರಿ ಹೋಗಿವೆ.ಕೈಸೋಡಿ ರಸ್ತೆಯಲ್ಲಿನ ಇಮ್ರಾನ್ ಹಾಗೂ ಹನೀಫ್ ಎಂಬುವರಿಗೆ ಸೇರಿದ ಗೋಡೌನ್ ಸೀಟು, ಕಬ್ಬಿಣದ ರಾಡುಗಳು ಕಿತ್ತು ಹೋಗಿವೆ ಈ ಕಾರಣ ಅಪಾರ ಪ್ರಮಾಣದ ಆಸ್ತಿ ನಷ್ಟಸಂಭವಿಸಿದ್ದು, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಅಲ್ಲದೇ ಜಿಯಾ ಉಲ್ಲಾ ಎಂಬುವರು ಶುಂಠಿ ಒಣಗಿಸಲು ಮಾಡಿದಂತ ಗೋಡೌನ್ ಸಂಪೂರ್ಣ ನಾಶವಾಗಿದೆ. ಸುಮಾರು ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ೨೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ, ಕಳೆದ ರಾತ್ರಿಯಿಂದ ವಿದ್ಯುತ್ ಕಡಿತಗೊಂಡಿದೆ.ಉಳವಿ ಮಳೆಹಾನಿ ಸ್ಥಳಕ್ಕೆ ಸೊರಬ ತಹಶೀಲ್ದಾರ್ ಕೆ. ಪುರಂದರ ಹಾಗೂ ಇಓ ಶಶಿಧರ್, ಕೃಷಿ ಅಧಿಕಾರಿ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಶ್ರೀಶೈಲ ಬಗಲಿ, ಪಿಡಿಒ ನಾಗರಾಜ್, ಆರ್.ಐ. ಮೇಘರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ, ದೂಗೂರು ಪಂಚಾಯತಿ ಘಟಕದ ಅಧ್ಯಕ್ಷ ಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.