ಸಾರಾಂಶ
ಜಾತಿ ಧರ್ಮಗಳನ್ನು ಭೇದಿಸಿ ಒಗ್ಗಟ್ಟು ನಿರ್ಮಿಸುವ ವಾತಾವರಣ ಕಲ್ಪಿಸುವ ಶಕ್ತಿ ಕ್ರೀಡೆಯಿಂದ ಮಾತ್ರ ಸಾಧ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ. ಗೋಣಿಕೊಪ್ಪ ಜಿ.ಪಿ.ಎಲ್ ಪ್ರೀಮಿಯ ಲೀಗ್ ಎಂಟನೇ ಆವೃತ್ತಿಯ ಎರಡನೇ ದಿನದ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಜಾತಿ ಧರ್ಮಗಳನ್ನು ಭೇದಿಸಿ ಒಗ್ಗಟ್ಟು ನಿರ್ಮಿಸುವ ವಾತಾವರಣ ಕಲ್ಪಿಸುವ ಶಕ್ತಿ ಕ್ರೀಡೆಯಿಂದ ಮಾತ್ರ ಸಾಧ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ. ಗೋಣಿಕೊಪ್ಪ ಜಿ.ಪಿ.ಎಲ್ ಪ್ರೀಮಿಯ ಲೀಗ್ ಎಂಟನೇ ಆವೃತ್ತಿಯ ಎರಡನೇ ದಿನದ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಉತ್ತಮ ಸಮಾಜ ನಿರ್ಮಿಸಲು ತಾರತಮ್ಯಗಳನ್ನು ತೊಡೆದು ಹಾಕಲು ಕ್ರೀಡೆಗಳಿಂದ ಸಾಧ್ಯವಾಗುತ್ತದೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನಿಂದ ಬದುಕು ನಡೆಸಲು ಮತ್ತು ದೇಶ ಕಟ್ಟುವ ಗುರಿಯನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೀರಿರ ನವೀನ್ ಮಾತನಾಡಿ, ಸೋಲು ಗೆಲವುಗಳ ಬಗ್ಗೆ ಲೆಕ್ಕ ಹಾಕದೆ, ಸ್ನೇಹ ಬಾಂಧವ್ಯಗಳ ಕಡೆಗೆ ಮನಸ್ಸನ್ನು ತೆರೆದುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸಮೃದ್ಧ ಮತ್ತು ಬಲಿಷ್ಠ ಭಾರತ ಕಟ್ಟಲು ಯುವಕರು ತಮ್ಮ ಗುರಿಯಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಮ್ಮಡ ಸೋಮಣ್ಣ ಯುವಕರಲ್ಲಿ ಹುರಿದುಂಬಿಸುವ ನುಡಿಗಳನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಕಾಂಗ್ರೆಸ್ಸಿನ ಯುವ ಮುಖಂಡರಾದ ಕೊಣಿಯಂಡ ಮುತ್ತಣ್ಣ, ಶಬೀರ್, ಧ್ಯಾನ್ ದೇವಯ್ಯ, ರಕ್ಷಿತ್, ಮಾಧ್ಯಮ ಸಲಹೆಗಾರ ಜಗದೀಶ್ ಜೋಡುಬೀಟಿ, ಅಧ್ಯಕ್ಷ ಸಿಂಗಿ ಸತೀಶ್, ಸ್ಥಾಪಕಾಧ್ಯಕ್ಷ ಸರ್ಫುದ್ದೀನ್ ಚೆನೈ ಸೂಪರ್ ಕಿಂಗ್ಸ್, ಮಾಲಿಕ ವೇಣುಗೋಪಾಲ್, ಕಿಂಗ್ಸ್ ಇಲೆವನ್ ಪಂಜಾಬ್, ಮಾಲಿಕಾ ನಿತಿನ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಮಾಲಿಕಾ ಮುಕ್ತರಬೇಗ್, ಮುಂಬೈ ಇಂಡಿಯನ್ಸ್, ಮಾಲಿಕಾ ಇಲಿಯಾಸ್, ಕೊಲ್ಕತ್ತಾ ಕಿಂಗ್ ರೈಡರ್ಸ್, ಮಾಲಿಕ ಕಿರಣ್ , ರಾಜಸ್ಥಾನ್ ರಾಯಲ್ಸ್, ಮಾಲೀಕರಾದ ಅಪ್ಪಿ, ಮಂಜು, ಶರಿ, ಗುಜರಾತ್ ಟೈಟಾನ್ಸ್ ಮಾಲೀಕರುಗಳಾದ ಅಭಿ ಚೇತನ್, ಲಕ್ನೋ ತಂಡದ ಮಾಲಿಕ ಗಗನ್ ಮುಕ್ಕಾಟಿ, ಡೆಲ್ಲಿ ತಂಡದ ಮಾಲೀಕ ಶರತ್ ಕಾಂತ್, ಜಿ.ಪಿ.ಎಲ್ ಪ್ರೀಮಿಯರ್ ಲೀಗ್‌ನ ಗೌರವ ಅಧ್ಯಕ್ಷ ಹಕೀಂ, ಕ್ರೀಡಾ ಸಂಚಾಲಕ ಶಾಜಿ, ಪ್ರಧಾನ ಕಾರ್ಯದರ್ಶಿ ಶಮ್ಮು, ನಿರ್ದೇಶಕರಾದ ಅವಿನಾಶ್ , ಮುನೀರ್, ರಂಶದ್ , ಚಿದು, ಹಮೀದ್, ಅಫ್ಸಲ್, ಉಮೇಶ್, ಶಿಜು, ರಮೇಶ್ ಶಿರಾಜ್ , ಲಾಲು ಸ್ಟೆನ್ಲಿ, ಶ್ರೀಕುಮಾರ್ ಸೇರಿದಂತೆ ತಂಡದ ವ್ಯವಸ್ಥಾಪಕರು, ತರಬೇತುದಾರರು, ಕ್ರೀಡಾಪಟುಗಳು ಇದ್ದರು.