ಶೃಂಗೇರಿ ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಮಳೂರು ಶ್ರೀ ರೇಣುಕಾ ಯಲ್ಲಮ್ಮ ಜಾತ್ರಾ ಮಹೋತ್ಸವ ಜನವರಿ 31 ರಿಂದ ಫೆಬ್ರವರಿ 1 ರವರೆಗೆ ನಡೆಯಲಿದೆ.

ಫೆಬ್ರವರಿ 1 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಮಳೂರು ಶ್ರೀ ರೇಣುಕಾ ಯಲ್ಲಮ್ಮ ಜಾತ್ರಾ ಮಹೋತ್ಸವ ಜನವರಿ 31 ರಿಂದ ಫೆಬ್ರವರಿ 1 ರವರೆಗೆ ನಡೆಯಲಿದೆ.

ಜನವರಿ 31 ರಿಂದ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಗೆ ಪುಣ್ಯಾಹವಾಚನ, ಶ್ರೀ ರೇಣುಕಾ ಯಲ್ಲಮ್ಮ ದೇವಿ ಮೂಲಮಂತ್ರ ಹೋಮ, ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ, ತೀರ್ಥ ಪ್ರಸಾದ ವಿನಿಯೋಗ. ಅನ್ನದಾನ, ಸಂಜೆ 6 ಗಂಟೆಯಿಂದ ಮೆಣಸೆ ಶ್ರೀ ಜ್ಞಾನಜ್ಯೋತಿ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 1 ರ ಭಾನುವಾರ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಮಹಾಭಿಷೇಕ, ಸಹಸ್ರ ಕುಂಕುಮಾರ್ಚನೆ, ನಂತರ ಚಂಡೆ ವಾದನದೊಂದಿಗೆ ಪಲ್ಲಕ್ಕಿಯಲ್ಲಿ ಅಮ್ಮನವರ ರಥ ಬೀದಿ ಉತ್ಸವ, ಗಂಗಾಪೂಜೆ, ಉಡಿಪೂಜೆ ಮತ್ತು ಹರಕೆ ಸೇವೆ. ಮಧ್ಯಾಹ್ನ ಪಡಲಿಗೆ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನದಾನ ನಡೆಯಲಿದೆ.

ಸಂಜೆ ಅಪ್ಸರ ಮ್ಯೂಸಿಕ್ ಆಶೀಶ್ ದೇವಾಡಿಗ ತಂಡದವರಿಂದ ಚೆಂಡೆ, ಕೊಳಲು, ಸ್ಯಾಕ್ಸೋಫೋನ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 6 ರ ಶುಕ್ರವಾರ ಶ್ರೀ ಮಾತಂಗಿ ದೇವಿಯ ಹರಕೆ ಸೇವೆ ನಡೆಯಲಿದೆ.

12 ಶ್ರೀ ಚಿತ್ರ 1-

ಮಳೂರು ಶ್ರೀ ರೇಣುಕಾ ಯಲ್ಲಮ್ಮ ದೇವಿ