ಮತಗಟ್ಟೆ ಕಾರ್‍ಯ ನಿರ್ವಹಿಸಲು ಸಿದ್ಧರಾದ ಸಿಬ್ಬಂದಿ

| Published : May 07 2024, 01:09 AM IST

ಮತಗಟ್ಟೆ ಕಾರ್‍ಯ ನಿರ್ವಹಿಸಲು ಸಿದ್ಧರಾದ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆ ಸ್ಥಳೀಯ ಐಟಿಐ ಕಾಲೇಜಿನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಮಸ್ಟರಿಂಗ್‌ ಕೇಂದ್ರದಲ್ಲಿ ಅಧಿಕಾರಿಗಳಿಂದ ಮತದಾನ ಉಪಕರಣ ಪಡೆದ ಮತಗಟ್ಟೆ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ನಿಗದಿ ಪಡಿಸಲಾಗಿದ್ದ ಬಸ್ ಗಳಲ್ಲಿ ತೆರಳಲು ಸಾಗುತ್ತಿರುವುದು.

ಹೊನ್ನಾಳಿ: 2024ರ ಲೋಕಸಭಾ ಚುನಾವಣೆ ಮೇ 7ರಂದು ನಡೆಯಲಿದ್ದು, ಸೋಮವಾರ ಪಟ್ಟಣದ ಶ್ರೀಮತಿ ಗಂಗಮ್ಮ ವೀರಭಧ್ರ ಶಾಸ್ತ್ರಿ ಐಟಿಐ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದ್ದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಉಪಕರಣ ವಿತರಿಸಲಾಯಿತು.ಹೊನ್ನಾಳಿ ವಿಧಾನಸಭಾ ಕ್ಷೇತ್ರದ 245 ಮತಗಟ್ಟೆಗಳಿಗೆ ಸುಮಾರು 1100ಕ್ಕೂ ಹೆಚ್ಚಿನ ಮತಗಟ್ಟೆ ಅಧಿಕಾರಿಗಳು ನಿಯೋಜನೆಗೊಂಡಿದ್ದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಚುನಾವಣೆ ಪರಿಕರ ವಿತರಿಸಲಾಯಿತು ಎಂದು ಉಪಚುನಾವಣಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.

ಚುನಾವಣೆ ಸಿಬ್ಬಂದಿ ಸುರಕ್ಷತೆ ಮತ್ತು ಸುಗಮ ಚುನಾವಣೆಗಾಗಿ ಸಾಕಷ್ಟು ಪೊಲೀಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು,

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಸಿಬ್ಬಂದಿಗೆ ಬೆಳಗ್ಗೆ ರುಚಿಯಾದ ತಿಂಡಿ ನಂತರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು, ಎಲ್ಲರೂ ಚುನಾವಣಾ ಉಪಕರಣ ತೆಗೆದುಕೊಂಡ ತಂಡಗಳು ಊಟದ ನಂತರ ತಮಗೆ ನಿಯೋಜಿಸಲಾಗಿದ್ದ ಬಸ್ ಮೂಲಕ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಉಪಚುನಾಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ ಅಭಿಷೇಕ್, 24 ಸೆಕ್ಟರ್ ಅಧಿಕಾರಿಗಳು, ಹೊನ್ನಾಳ ತಹಸೀಲ್ದಾರ್ ಪುರಂದರೆ ಹೆಗ್ಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಶಾ, ಕಂದಾಯ ಇಲಾಖೆ ಎಲ್ಲಾ ಉಪತಹಸೀಲ್ದಾರ್, ಆರ್‌ಐ, ವಿಎ ಹಾಗೂ ಸಿಬ್ಬಂದಿ ಮಸ್ಟರಿಂಗ್ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರು.