ಸಾರಾಂಶ
ಲಿಂಗಸೂಗೂರು-ಗಂಗಾವತಿಯ ರಾಜ್ಯ ಹೆದ್ದಾರಿಯ ಸುರಕ್ಷತೆಗಾಗಿ ಲೋಕೋಪಯೋಗಿ ಇಲಾಖೆ ಅಲ್ಲಲ್ಲಿ ರಕ್ಷಣಾ ಗೋಡೆ ನಿರ್ಮಿಸುವುದು ನಿಯಮ. ಪಟ್ಟಣದಿಂದ ಗಂಗಾವತಿ ಮಾರ್ಗದಲ್ಲಿ ಸಾಗುವಾಗ ಕೆಇಬಿ ಬಳಿ ಅಳವಡಿಸಿದ್ದ ರಕ್ಷಣಾ ಗೋಡೆಯನ್ನು ಇಲಾಖೆಯ ಅನುಮತಿ ಪಡೆಯದೇ ಕಿತ್ತೆಸೆದು ಸರ್ಕಾರಿ ಆಸ್ತಿಯನ್ನು ಹಾನಿಗೊಳಿಸಲಾಗಿದೆ.
ಕನಕಗಿರಿ:
ಲೋಕೋಪಯೋಗಿ ಇಲಾಖೆಯಿಂದ ಇಲ್ಲಿಯ ಕೆಇಬಿ ಬಳಿ ನಿರ್ಮಿಸಿದ್ದ ರಾಜ್ಯ ಹೆದ್ದಾರಿಯ ರಕ್ಷಣಾ ಗೋಡೆಯನ್ನು ಗುರುವಾರ ಸಚಿವ ಶಿವರಾಜ ತಂಗಡಗಿ ಬೆಂಬಲಿಗರು ಕಿತ್ತೆಸೆದಿದ್ದಾರೆಂಬ ಆರೋಪ ಕೇಳಿ ಬಂದಿದೆ.ಲಿಂಗಸೂಗೂರು-ಗಂಗಾವತಿಯ ರಾಜ್ಯ ಹೆದ್ದಾರಿಯ ಸುರಕ್ಷತೆಗಾಗಿ ಲೋಕೋಪಯೋಗಿ ಇಲಾಖೆ ಅಲ್ಲಲ್ಲಿ ರಕ್ಷಣಾ ಗೋಡೆ ನಿರ್ಮಿಸುವುದು ನಿಯಮ. ಪಟ್ಟಣದಿಂದ ಗಂಗಾವತಿ ಮಾರ್ಗದಲ್ಲಿ ಸಾಗುವಾಗ ಕೆಇಬಿ ಬಳಿ ಅಳವಡಿಸಿದ್ದ ರಕ್ಷಣಾ ಗೋಡೆಯನ್ನು ಇಲಾಖೆಯ ಅನುಮತಿ ಪಡೆಯದೇ ಕಿತ್ತೆಸೆದು ಸರ್ಕಾರಿ ಆಸ್ತಿಯನ್ನು ಹಾನಿಗೊಳಿಸಲಾಗಿದೆ. ಅಲ್ಲದೇ ರಕ್ಷಣಾ ಗೋಡೆ ತೆರವುಗೊಳಿಸುವಾಗ ಕಬ್ಬಿಣ ತುಂಡು, ಸಿಮೆಂಟ್, ಕಾಂಕ್ರಿಟ್‌ಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ತಮ್ಮ ಮನೆಗೆ ಈ ರಕ್ಷಣಾ ಗೋಡೆ ಅಡ್ಡಿಯಾಗುತ್ತಿದೆ ಎನ್ನುವ ಕಾರಣಕ್ಕೆ ಪಪಂ ಅಧ್ಯಕ್ಷೆಯ ಪುತ್ರರು ತೆರವುಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನುಮತಿ ಪಡೆಯದೇ ಸರ್ಕಾರದ ಆಸ್ತಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಆಗ್ರಹಿಸಿದ್ದಾರೆ.ರಾಜ್ಯ ಹೆದ್ದಾರಿಯ ರಕ್ಷಣಾ ಗೋಡೆ ತೆರವುಗೊಳಿಸಿರುವುದಕ್ಕೆ ಅನುಮತಿ ನೀಡಿಲ್ಲ. ಇಲಾಖೆಗೆ ಪತ್ರ ಬಂದಿದೆ. ಈ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.ವಿಶ್ವನಾಥ ಪ್ರಭಾರಿ ಎಇಇ, ಲೋಕೋಪಯೋಗಿ ಇಲಾಖೆ ಗಂಗಾವತಿ