ಸಾರಾಂಶ
ಚಿಕ್ಕಮಗಳೂರುತಾಲೂಕಿನ ಮರ್ಲೆ ಗ್ರಾ.ಪಂ. ಸಮೀಪ ಕಲ್ಲು ಗಣಿಗಾರಿಕೆಯಲ್ಲಿ ಅತಿಯಾಗಿ ಡೈನಮೈಟ್ ಬಳಕೆಯಿಂದ ನಾಗರಹಳ್ಳಿ ಗ್ರಾಮದಲ್ಲಿ ಭೂಕಂಪನ ಉಂಟಾಗಿ ಮೇಲ್ಛಾವಣಿ, ಗೋಡೆಗಳು ಬಿರುಕು ಬಿಟ್ಟಿವೆ, ಕಿಟಕಿ ಗಾಜು ಪುಡಿ ಹಾಗೂ ಗೃಹೋಪ ಯೋಗಿ ವಸ್ತುಗಳು ಬಳಸದಂತಾಗಿದೆ ಎಂದು ಗ್ರಾಮಸ್ಥರು ಶನಿವಾರ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ನಾಗರಹಳ್ಳಿ ಗ್ರಾಮದಿಂದ ಸುಮಾರು 2.5 ಕಿ.ಮೀ. ಅಂತರದಲ್ಲಿರುವ ಕಲ್ಲು ಗಣಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕಿನ ಮರ್ಲೆ ಗ್ರಾ.ಪಂ. ಸಮೀಪ ಕಲ್ಲು ಗಣಿಗಾರಿಕೆಯಲ್ಲಿ ಅತಿಯಾಗಿ ಡೈನಮೈಟ್ ಬಳಕೆಯಿಂದ ನಾಗರಹಳ್ಳಿ ಗ್ರಾಮದಲ್ಲಿ ಭೂಕಂಪನ ಉಂಟಾಗಿ ಮೇಲ್ಛಾವಣಿ, ಗೋಡೆಗಳು ಬಿರುಕು ಬಿಟ್ಟಿವೆ, ಕಿಟಕಿ ಗಾಜು ಪುಡಿ ಹಾಗೂ ಗೃಹೋಪ ಯೋಗಿ ವಸ್ತುಗಳು ಬಳಸದಂತಾಗಿದೆ ಎಂದು ಗ್ರಾಮಸ್ಥರು ಶನಿವಾರ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ನಾಗರಹಳ್ಳಿ ಗ್ರಾಮದಿಂದ ಸುಮಾರು 2.5 ಕಿ.ಮೀ. ಅಂತರದಲ್ಲಿರುವ ಕಲ್ಲು ಗಣಿ ಗಾರಿಕೆಯಲ್ಲಿ ಬಂಡೆ ಸಿಡಿಸಲು ಅತಿಯಾಗಿ ಡೈನಮೈಟ್ ಬಳಕೆಯಾದ ಕಾರಣ ಕನಿಷ್ಠ 8-10 ಸೆಕೆಂಡ್‌ಗಳ ಕಾಲ ಭೂಕಂಪನ ಸೃಷ್ಟಿಯಾಗಿದ್ದು ನಾಗರಹಳ್ಳಿ ಎಲ್‌ಇಡಿ ಬಲ್ಪ್ ಸೇರಿದಂತೆ ಟಿವಿಗಳು ಹಾನಿಗೊಂಡು, ಗ್ರಾಮಸ್ಥರು ದಿಢೀರ್‌ನೇ ರಸ್ತೆಗೆ ಧಾವಿಸಿ, ಸತ್ತು ಬದುಕಿದ ಸನ್ನಿವೇಶ ಎದುರಾಗಿದೆ.ಗಣಿಗಾರಿಕೆಯಲ್ಲಿ ಸಿಡಿಮದ್ದು ನಿಯಮಿತವಾಗಿ ಬಳಸುವ ಸಂಬಂಧ ಈ ಹಿಂದೆ ತಿಮ್ಮನಹಳ್ಳಿ ಗ್ರಾಮಸ್ಥರು ಗಣಿಗಾರಿಕೆ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಕೆಲವು ತಿಂಗಳುಗಟ್ಟಲೇ ಸಾಮಾನ್ಯವಾಗಿತ್ತು. ಆದರೀಗ ಶುಕ್ರವಾರ ಮತ್ತೇ ಹಳೇ ಚಾಳಿಯನ್ನೇ ಮುಂದುವರೆಸಿ ಗ್ರಾಮಸ್ಥರ ಪ್ರಾಣಕ್ಕೆ ಕುತ್ತು ತರಲು ಕ್ರಶರ್ ಮಾಲೀಕರು ಮುಂದಾಗಿದ್ದಾರೆ.
ನಾಗರಹಳ್ಳಿ ನಿವಾಸಿ ಮಂಜುನಾಥ್ ಮಾತನಾಡಿ, ಗಣಿಗಾರಿಕೆ ವಿಪರೀತದಿಂದ ಗ್ರಾಮದಲ್ಲಿ ಅಂತರ್ಜಲ ಕುಸಿದಿದೆ. ಮುಂದೆ ಕುಡಿಯುವ ನೀರಿಗೂ ಹಾಹಾಕಾರಪಡಬೇಕು. ಇದೀಗ ನಾಗರಹಳ್ಳಿ ಆಕ್ರಮಿಸಿಗೊಂಡಿರುವ ಭೂಕಂಪನ, ಇನ್ಯಾವ ಗ್ರಾಮಗಳನ್ನು ಬಲಿ ಪಡೆಯಲಿವೆ ಎಂಬ ಆತಂಕ ಗೋಚರಿಸುತ್ತಿದೆ. ಈ ಕಂಪನದಿಂದ ದನಕರುಗಳು ಗಾಬರಿಗೊಂಡು ಹೋಗಿರುವ ಕಾರಣ ಹುಡುಕುವ ಪರಿಸ್ಥಿತಿ ಗ್ರಾಮಸ್ಥರಿಗೆ ಎದುರಾಗುತ್ತಿದೆ ಎಂದರು.ಪೋಟೋ ಫೈಲ್ ನೇಮ್ 25 ಕೆಸಿಕೆಎಂ 5ಕಲ್ಲು ಗಣಿಗಾರಿಕೆಯಲ್ಲಿ ಅತಿಯಾಗಿ ಡೈನಮೈಟ್ ಬಳಕೆಯಿಂದ ನಾಗರಹಳ್ಳಿ ಗ್ರಾಮದಲ್ಲಿ ಮನೆಯ ಕಿಟಕಿಗಳಿಗೆ ಹಾನಿಯಾಗಿರುವುದು.