ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕನ್ನಡ ಭಾಷೆಯ ಪ್ರತಿಧ್ವನಿಯಾಗಿ ಮತ್ತು ಸಾಹಿತ್ಯದ ಪ್ರಚಾರಕ್ಕಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆ ಹಾಗೂ ಕವಿತಾ ಆಸಕ್ತಿಯನ್ನು ಬೆಳೆಸುವುದು ಕಲೆ ಮತ್ತು ಸಂಸ್ಕೃತಿಯ ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಾಗಿ ಒಲವು ನೀವು ಕನ್ನಡ ನಾಡಿನ ಮುತ್ತುರತ್ನಗಳು ಎಂದು ಚಿತ್ರಹಳ್ಳಿ ಪೊಲೀಸ್ ಉಪ ನಿರೀಕ್ಷಕ ಕಾಂತರಾಜ್ ನುಡಿದರುಶ್ರಾವಣ ಮಾಸದ ಸಾಹಿತ್ಯ ಸಂಭ್ರಮ ಅಂಗವಾಗಿ ಚಿತ್ರಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಸಮುಚ್ಛಯದ ಆವರಣದಲ್ಲಿ ತಾಳ್ಯ ಹೋಬಳಿಯ ಹಂತದ ಶಾಲೆಯ ಅಂಗಳದಲ್ಲಿ ಕನ್ನಡ ಗೀತ ಗಾಯನ ಸ್ಪರ್ಧೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಾತೃಭಾಷೆಗೆ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡಬೇಕು ಕನ್ನಡ,ನೆಲ, ಜಲ,ಭಾಷೆ, ಸಂಸ್ಕೃತಿ ಬಗ್ಗೆ ಕಾಳಜಿ ಹೊಂದಿರಬೇಕು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕನ್ನಡ ಸಾಹಿತ್ಯ ಅಧ್ಯಯನ ಮಾಡುವ ಅಭಿರುಚಿ ಬೆಳೆಸಿ ಕೊಳ್ಳುವುದರೊಂದಿಗೆ ಕನ್ನಡ ಭಾಷೆಯ ಉಳಿವಿಗಾಗಿ ಅವಿರತ ಹೋರಾಡುವ ಅಸಂಖ್ಯಾತ ಸಂಘಟನೆಗಳಿಗೆ ಭಾಷೆ ಒಂದು ಭಾವನಾತ್ಮಕ ವಸ್ತುವಿನಂತೆ ಕಾಣುತ್ತದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎನ್.ಶಿವಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಶ್ರಾವಣ ಮಾಸದ ಅಂಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಭಾಷಾ ಅಭಿಮಾನವನ್ನು ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ರೀತಿಯಲ್ಲಿ ಕನ್ನಡ ಪದ್ಯ ಗಾಯನ ಸ್ಪರ್ಧೆಗಳನ್ನ ಹೋಬಳಿ ಹಂತದಲ್ಲಿ ಆಯೋಜನೆ ಮಾಡುವ ಮುಖೇನ ವಿದ್ಯಾರ್ಥಿಗಳು ಉತ್ಸಹದಿಂದ ಪಾಲ್ಗೊಳ್ಳಲು ನಗದು ರೂಪವಾಗಿ ಪ್ರಥಮ ಬಹುಮಾನ 2000 ರು., ದ್ವಿತೀಯ ಬಹುಮಾನ 1500 ರು., ತೃತೀಯ ಬಹುಮಾನ 1000 ರು. ನೀಡುತ್ತಿದೆ ಎಂದರು
ಅಧ್ಯಕ್ಷತೆಯನ್ನು ತಾಳ್ಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮಹೇಶ್ ಅಂಗಡಿ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರಾ.ಸು.ತಿಮ್ಮಯ್ಯ ದ, ರಾ.ಬೇಂದ್ರೆ ಬರೆದು ಹಾಡಿದ ಶ್ರಾವಣ ಮಾಸದ ಗೀತೆಗಳನ್ನು ಗಾಯನ ಮಾಡಿದರು. ಪ್ರಥಮ,ದ್ವಿತೀಯ ಸ್ಥಾನ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಿಲಯ ಪಾಲಕರಾದ ಕೆ.ಜಿ. ಕುಸುಮ, ಶಿವಾಜಿ ಚೌಹಾಣ್, ಡಿ.ಜಯಣ್ಣ, ರೂಪ. ಬಹುಮಾನ ವಿತರಿಸಿದರು.ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಹರ್ಷ, ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕಿ ರಮ್ಯ, ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಪ್ಪ, ಪ್ರಾಂಶುಪಾಲರಾದ ಡಾ.ಪ್ರೀತಿ. ಎಲ್.ಬಿ.ಜಗದೀಶ್. ಎಚ್.ಎಚ್ ಮಾರುತಿ. ತಿಪ್ಪೇಸ್ವಾಮಿ, ಬಿಸಿಎಂ ಇಲಾಖೆ ವೆಂಕಟೇಶ್, ಕನ್ನಡ ಭಾಷಾ ಶಿಕ್ಷಕರಾದ ತಿಮ್ಮೇಶ , ಗಿರೀಶ್, ಕುಮಾರಸ್ವಾಮಿ, ಎ.ವಿ.ವಿಜಯ್ ಕುಮಾರ್. ಪ್ರಕಾಶ್. ಸರ್ವಮಂಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.