ಸಾರಾಂಶ
ಹಿರೇಕೆರೂರು: ಇಂದಿನ ಯುವಜನಾಂಗ ಮಹಾವಿದ್ಯಾಲಯದಲ್ಲಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲು ವಂಚಿತರಾಗುತ್ತಿರುವುದು ದುರ್ದೈವದ ಸಂಗತಿ. ಸರಕಾರಿ ಸಂಸ್ಥೆಗಳಾಗಲಿ, ಖಾಸಗಿ ಸಂಸ್ಥೆಗಳಾಗಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸದಾ ಶ್ರಮಿಸುತ್ತವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಬಿ.ಆರ್.ತಂಬಾಕದ ಕಾಲೇಜಿನ ನೂತನ ಗ್ರಂಥಾಲಯವನ್ನು ಹಾಗೂ ವಿದ್ಯಾಸಂಸ್ಥೆಯ ನೂತನ ಸಿಮೆಂಟ್ ರಸ್ತೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳದೆ ಮಾಧ್ಯಮಗಳ ಮೊರೆ ಹೋಗಿ ಅಲ್ಪಜ್ಞಾನಿಗಳಾಗುತ್ತಿರುವುದು ಅವರ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂಪೂರ್ಣಜ್ಞಾನ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರುಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಸ್.ಹೆಚ್. ಜಂಗಮಶೆಟ್ಟಿ ಮಾತನಾಡಿ. ಗ್ರಂಥಾಲಯ ಮಹಾವಿದ್ಯಾಲಯದ ಆತ್ಮವಿದ್ದಂತೆ, ವಿದ್ಯಾರ್ಥಿಗಳ ಜ್ಞಾನ ವಿಕಾಸದಲ್ಲಿ ಗ್ರಂಥಾಲಯಗಳ ಪಾತ್ರ ಅತ್ಯಂತ ಹಿರಿದಾದುದು.ಪ್ರಾಚೀನ ಕಾಲದಲ್ಲಿ ಗ್ರಂಥಗಳನ್ನು ಓದುವುದು ಅಷ್ಟೇ ಅಲ್ಲದೇವರನ್ನು ಪೂಜಿಸಿದ ಭಕ್ತಿ ಭಾವದಂತೆ ಗ್ರಂಥಗಳಿಗೆ ಗೌರವ ನೀಡುತ್ತಿದ್ದರು. ಇಂದಿನ ಆಧುನಿಕ ಯುಗದಲ್ಲಿ ಅದು ಮರೆಯಾಗಿ ತಾಂತ್ರಿಕ ಯುಗದ ಕಾಲಗರ್ಭದಲ್ಲಿ ಗ್ರಂಥಗಳೇ ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದರು. ಇಂದು ಓದುವಂತಹ ವಿದ್ಯಾರ್ಥಿಗಳು ಕಡಿಮೆಯಾಗಿ ಗ್ರಂಥಗಳು ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಘೋರ ಪರಿಣಾಮ ಬೀರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ಗ್ರಂಥಗಳನ್ನು ಬಳಕೆ ಮಾಡಿದಾಗ ತಮ್ಮ ಜೀವನದಲ್ಲಿ ಯಶಸ್ಸುಕಾಣಲು ಸಾಧ್ಯ. ಯಾರೂ ಕಣ್ಣಾರೆ ದೇವರನ್ನು ನೋಡಿರುವುದಿಲ್ಲ, ಕಣ್ಮುಂದೆ ಇರುವ ತಂದೆ ತಾಯಿ ಗುರು ಹಾಗೂ ಪುಸ್ತಕಗಳನ್ನು ಪ್ರೀತಿಯಿಂದ ಪೂಜ್ಯಭಾವನೆಯಿಂದ ಗೌರವಿಸಿದರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.ಮೃತ್ಯುಂಜಯ ಮಹಾಸ್ವಾಮಿಗಳವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಪಿ.ವ್ಹಿ. ಕೆರೂಡಿಯವರು ಮಾತನಾಡಿ, ಮೃತ್ಯುಂಜಯ ಮಹಾಸ್ವಾಮಿಗಳು ಈ ನಾಡು ಕಂಡ ಮಹಾ ಸಂತರು. ಮಹಾ ತಪಸ್ವಿಗಳು, ತಮ್ಮ ಬಾಲ್ಯ, ಯೌವನ ಹಾಗೂ ಮುಪ್ಪನ್ನುಇಡೀ ಸಮಾಜಕ್ಕಾಗಿ ಮುಡಿಪಿಟ್ಟುಇರುವಷ್ಟು ದಿನ ದಾಸೋಹ ಭಾವದಿಂದ ಬದುಕಿ ಬಡ ವಿದ್ಯಾರ್ಥಿಗಳ ಪಾಲಿನ ಕಲ್ಪವೃಕ್ಷವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿದ ಮಹಾ ಬೆಳಕು ಮುರುಘಾಮಠದ ಪೂಜ್ಯರು. ಅಂತವರ ಜೀವನವನ್ನು ಕುರಿತು ಮಾತನಾಡುವುದು ತೆಪ್ಪದಿಂದ ಸಮುದ್ರ ದಾಟುತ್ತೇನೆಂಬ ಅಜ್ಞಾನವಾಗುತ್ತದೆ. ತ್ರಿವಿಧ ದಾಸೋಹಿಗಳಾಗಿ, ತ್ರಿಕಾಲ ಜ್ಞಾನಿಗಳಾಗಿ, ಸತ್ಯ, ಧರ್ಮ, ನ್ಯಾಯದಿಂದ ಸಮಾಜವನ್ನು ಸನ್ಮಾರ್ಗದೆಡೆಗೆ ತಂದ ಸಂತರು. ಮುರುಘಾ ಶರಣರು. ಅಂತವರ ಪಾದದ ಧೂಳಿನ ದರ್ಶನ ನಮಗಾದರೆ ನಮ್ಮಜೀವನ ಪಾವನವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಮಾಜಿ ಅಧ್ಯಕ್ಷರಾದ ಜೆ.ಬಿ.ತಂಬಾಕದ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಲಿಂಗರಾಜ ಚಪ್ಪರದಳ್ಳಿ ಮಾತನಾಡಿದರು. ಆಡಳಿತಾಧಿಕಾರಿ ಎಸ್. ವೀರಭದ್ರಯ್ಯನವರು ಪ್ರಾಸ್ತಾವಿಕ ನುಡಿದರು. ಡಾ. ಎಸ್.ಬಿ. ಚನ್ನಗೌಡ್ರ ಸರ್ವರನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಎ.ವ್ಹಿ. ಹೊಂಬರಡಿ, ಎಸ್.ಎಸ್. ಪಾಟೀಲ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ರಜಿತ್‌ಕುಮಾರ, ಎಚ್.ಬಿ., ವಿದ್ಯಾಸಂಸ್ಥೆಯ ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ನ ನಿರ್ದೇಶಕರುಗಳಾದ ಆನಂದಪ್ಪ ಹಾದಿಮನಿ, ಸಿದ್ದನಗೌಡ ನರೇಗೌಡ್ರ, ಮಹೇಶ ಗುಬ್ಬಿ, ಸಿದ್ದನಗೌಡ ಚನ್ನಗೌಡ್ರ, ಮಂಜುಳಾ ಬಾಳಿಕಾಯಿ, ಶೋಭಾಅಂಗಡಿ, ಮಂಜುನಾಥತ ಬಾಕದ, ಹೂವಪ್ಪ ಕವಲಿ, ದುರುಗಪ್ಪ ನೀರಲಗಿ, ಜಯಮ್ಮ ಸನ್ನೇರ, ಪವಿತ್ರಾ ಮುದಿಗೌಡ್ರ, ನಾಗನಗೌಡ ಮುದಿಗೌಡ್ರ, ಎಸ್.ಬಿ. ಗೂಳಪ್ಪನವರ, ಉಜ್ಜಪ್ಪ ಕಳಗೊಂಡದ ಹಾಗೂ ಸಿ.ಇ.ಎಸ್. ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಸಮಸ್ತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಂಧು ಹಾಗೂ ಸುಷ್ಮಾಕಾರ್ಯಕ್ರಮ ನಿರೂಪಿಸಿದರು.ಪಿ.ಎಂ. ಡಮ್ಮಳ್ಳಿ ವಂದಿಸಿದರು.