ಸಾರಾಂಶ
Suggestions for proper implementation of the guarantee scheme
-ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಕೃಷ್ಣಾ ಜಾಧವ ಮನವಿ
----ಕನ್ನಡಪ್ರಭ ವಾರ್ತೆ ಹುಣಸಗಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಯಾಗಲು ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಸಮಿತಿಯ ಅಧ್ಯಕ್ಷ ಕೃಷ್ಣಾ ಜಾಧವ ತಿಳಿಸಿದರು.ಹುಣಸಗಿ ತಾ.ಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜಗಳ ಪ್ರಗತಿ ಈವರೆಗೆ ಹುಣಸಗಿ ತಾಲೂಕಿನಲ್ಲಿ 37,264 ಕುಟುಂಬಗಳ 1,34,771 ಫಲಾನುಭವಿಗಳಿಗೆ ಪಡಿತರ ವಿತರಿಸಲಾಗಿದೆ ಎಂದು ಆಹಾರ ನಿರೀಕ್ಷಕ ಸಿ. ಎಸ್. ರಾಜು ತಿಳಿಸಿದರು.
ಮೂರು ತಿಂಗಳುಗಳಿಂದ ಕೆಲ ಕುಟುಂಬಗಳಿಗೆ ಹಣ ವರ್ಗಾವಣೆಯಾಗಿಲ್ಲ ಈ ಪ್ರಶ್ನೆಗೆ ಉತ್ತರಿಸಿದ ಅವರು, ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಮೂರು ಅಥವಾ ಮೂರಕ್ಕಿಂತ ಕಡಮೆ ಸದಸ್ಯರಿರುವ ಕುಟುಂಬಗಳು 35 ಕೆ.ಜಿ. ಆಹಾರಧಾನ್ಯ ಪಡೆಯುವ ಕುಟುಂಬಕ್ಕೆ ನಗದು ವರ್ಗಾವಣೆ ಸೌಲಭ್ಯವಿಲ್ಲ ಎಂದು ಮಾಹಿತಿ ನೀಡಿದರು. ಯುವನಿಧಿ ಯೋಜನೆಯಡಿ 2 ಸಾವಿರಕ್ಕೂ ಹೆಚ್ಚು ಯುವಕರಿಗೆ ಹಣ ವರ್ಗಾವಣೆ ಮಾಡಲಾಗಿದೆ, ಗೃಹಲಕ್ಷ್ಮೀ ಯೋಜನೆಯಡಿ ತಾ.ನಲ್ಲಿ 36,220 ಮಹಿಳೆಯರಿಗೆ ಹಣ ಜಮಾ ಆಗಿದ್ದು, ಇನ್ನೂ 818 ಜನರಿಗೆ ತಾಂತ್ರಿಕ ತೊಂದರೆಯಿಂದ ವರ್ಗಾವಣೆ ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪವನ್ ಕುಮಾರ ಮಾಹಿತಿ ನೀಡಿದರು.ಸಭೆಯಲ್ಲಿ ಸದಸ್ಯರಾದ ಗೋಪಾಲ ದೊರೆ, ತಾರಾನಾಥ ಚವ್ವಾಣ, ಮುಜಾವರ ಕೋಳಿಹಾಳ ಮಾತನಾಡಿದರು. ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕಾಗಿರುವ ಅಧಿಕಾರಿಗಳು ಸಭೆಯಲ್ಲಿ ಗೈರಾಗಿರುವದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅಂತಹ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಕಾರ್ಯರ್ವಾಹಕ ಅಧಿಕಾರಿ ಬಸಣ್ಣ ನಾಯಕ ಅವರಿಗೆ ಹೇಳಿದರು. ಬೂದೆಪ್ಪ ಪವಾರ್ ವಂದಿಸಿದರು.
------ಫೋಟೊ: ಹುಣಸಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
9ವೈಡಿಆರ್1