ಕಡಲಿನಲ್ಲಿ ಮುಳುಗಿದ ಮೀನುಗಾರಿಕಾ ದೋಣಿ: ನಾಲ್ವರು ಮೀನುಗಾರರ ರಕ್ಷಣೆ

| Published : Jan 10 2025, 12:50 AM IST

ಕಡಲಿನಲ್ಲಿ ಮುಳುಗಿದ ಮೀನುಗಾರಿಕಾ ದೋಣಿ: ನಾಲ್ವರು ಮೀನುಗಾರರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗೆಕೊಳ್ಳದಿಂದ ಮೀನುಗಾರಿಕೆಗೆ ತೆರಳಿದ್ದ ಸಂದೀಪ ಸುರೇಶ ತಾಂಡೇಲ್, ರಾಜು ಗಣಪತಿ ಕಾಂಬಳೆ, ಪ್ರಶಾಂತ ಫಂಡರಿನಾಥ ಮೆಹ್ತಾ, ಸೃಜನ್ ಮಹಾಬಲೇಶ್ವರ ಕವಣೇಕರ ಜೀವಾಪಾಯದಿಂದ ಪಾರಾಗಿ ಬಂದ ಮೀನುಗಾರರು.

ಗೋಕರ್ಣ: ಮೀನುಗಾರಿಕೆಗೆ ತೆರಳಿದ ದೋಣಿ ಗಾಳಿಯ ರಭಸಕ್ಕೆ ಮಗುಚಿದ ಪರಿಣಾಮ ನೀರುಪಾಲಾಗುತ್ತಿದ್ದ ನಾಲ್ವರು ಮೀನುಗಾರರನ್ನು ಮಂಗಳೂರಿನ ಬೋಟ್‌ (ಓಸಿಯನ್ ಬ್ಲೂ)ನವರು ರಕ್ಷಿಸಿದ ಘಟನೆ ಗುರುವಾರ ಬೆಳಗ್ಗೆ ಗಂಗೆಕೊಳ್ಳದಿಂದ ೩೫ ನಾಟಿಕಲ್ ದೂರದ ಕಡಲಿನಲ್ಲಿ ನಡೆದಿದೆ.ಗಂಗೆಕೊಳ್ಳದಿಂದ ಮೀನುಗಾರಿಕೆಗೆ ತೆರಳಿದ್ದ ಸಂದೀಪ ಸುರೇಶ ತಾಂಡೇಲ್, ರಾಜು ಗಣಪತಿ ಕಾಂಬಳೆ, ಪ್ರಶಾಂತ ಫಂಡರಿನಾಥ ಮೆಹ್ತಾ, ಸೃಜನ್ ಮಹಾಬಲೇಶ್ವರ ಕವಣೇಕರ ಜೀವಾಪಾಯದಿಂದ ಪಾರಾಗಿ ಬಂದ ಮೀನುಗಾರರು.ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರಿ ಗಾಳಿಯ ಹೊಡೆತಕ್ಕೆ ದೋಣಿ ಮುಳುಗಿದ್ದು, ನಾಲ್ವರು ಮೀನುಗಾರರು ನೀರಿನಲ್ಲಿ ಈಜಾಡುತ್ತಾ ಪ್ರಾಣ ರಕ್ಷಣೆಗೆ ಪರದಾಡುತ್ತಿದ್ದರು. ಅದೇ ಸಮಯದಲ್ಲಿ ಅಲ್ಲೇ ಸಂಚರಿಸುತ್ತಿದ್ದ ಮಂಗಳೂರಿನ ಓಸಿಯನ್ ಬ್ಲೂ ಬೋಟ್‌ನವರು ಗಮನಿಸಿದ್ದು, ತಕ್ಷಣ ರಕ್ಷಣೆಗೆ ಧಾವಿಸಿ ನಾಲ್ವರು ಮೀನುಗಾರರ ಪ್ರಾಣ ಉಳಿಸಿದ್ದಾರೆ.

ನಂತರ ಗಂಗೆಕೊಳ್ಳದಿಂದ ಶ್ರೀಲೀಲಾ ಬೋಟ್‌ನ ಮೂಲಕ ಸ್ಥಳೀಯರು ತೆರಳಿ ನಾಲ್ವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಜೀವ ಕಾಪಾಡಿದ ಮಂಗಳೂರಿನ ಬೋಟ್‌ನವರಿಗೆ ಹಾಗೂ ಸಹಕರಿಸಿದ ಸ್ಥಳೀಯರಿಗೆ ಮೀನುಗಾರರು ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಘಟನೆಯಲ್ಲಿ ಆರು ಲಕ್ಷ ಮೌಲ್ಯದ ದೋಣಿ ಹಾಗೂ ಎಂಟು ಲಕ್ಷ ಮೌಲ್ಯದ ಬಲೆ ಸಮುದ್ರಪಾಲಾಗಿ ನಷ್ಟ ಉಂಟಾಗಿದೆ.ಚಾಕುವಿನಿಂದ ವ್ಯಕ್ತಿಗೆ ಇರಿದು ಅಪಹರಣ

ಮುಂಡಗೋಡ: ಪಟ್ಟಣದಲ್ಲಿ ದುಷ್ಕರ್ಮಿಗಳ ಗುಂಪೊಂದು ಪಟ್ಟಣದ ಎನ್ಎಂಡಿ ಗ್ರೂಪ್ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಎಂಬವರಿಗೆ ಚಾಕುವಿನಿಂದ ಇರಿದು ಅಪಹರಣ ಮಾಡಿರುವ ಘಟನೆ ಗುರುವಾರ ರಾತ್ರಿ ಪಟ್ಟಣದ ಶಾಸಕರ ಮಾದರಿ ಶಾಲೆ ಬಳಿ ನಡೆದಿದೆ.

ತಾಲೂಕು ಕ್ರೀಡಾಂಗಣದಿಂದ ಜಮೀರಹ್ಮದ ದರ್ಗಾವಾಲೆ ತಮ್ಮ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ತೆರಳುವಾಗ ಸುಮಾರು ೮ ಘಂಟೆ ವೇಳೆಗೆ ಶಾಸಕರ ಮಾದರಿ ಶಾಲೆ ಬಳಿ ಬರುತ್ತಿದ್ದಂತೆ ಏಕಾಏಕಿ ವಾಹನದ ಮೇಲೆ ಬಂದ ರೌಡಿಗಳ ತಂಡ, ಹಿಂದಿನಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಜಮೀರ್ ಅಹ್ಮದ್ ದರ್ಗಾವಾಲೆಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಗಾಯಗೊಂಡರೂ ಬಿಡದೇ, ವಾಹನದಲ್ಲಿ ಎತ್ತಾಕೊಂಡು ಪರಾರಿಯಾಗಿದ್ದಾರೆ. ಕಾರು ಹುಬ್ಬಳ್ಳಿ ಮಾರ್ಗವಾಗಿ ಹೋಯಿತು ಎನ್ನಲಾಗಿದ್ದು, ಮಾರಕಾಸ್ತ್ರದ ಹಿಡಿಕೆಯೊಂದು ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ.ವಿಷಯ ತಿಳಿದು ಕಾರ್ಯಪ್ರವರ್ತರಾದ ಮುಂಡಗೋಡ ಪೊಲೀಸರು ಪರಾರಿಯಾಗಿರುವ ಆಗುಂತಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.