ಇ- ಮೇಲ್‌ ಬಂದ ಮೂಲ, ಕಳುಹಿಸಿದ ವ್ಯಕ್ತಿಯ ಗುರುತು ಹಾಗೂ ಉದ್ದೇಶವನ್ನು ಪೊಲೀಸ್‌ ಇಲಾಖೆ ಪತ್ತೆ ಹಚ್ಚುತ್ತಿದೆ. ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

ಗದಗ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಸ್ಫೋಟಿಸುವುದಾಗಿ ಇ- ಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣವೇ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ಶೋಧನಾ ತಂಡ ಆಗಮಿಸಿ ಪರಿಶೀಲನೆ ನಡೆಸಿತು.

ವಿಕ್ರಂ ರಾಜಗುರು ಔಟ್ ಲುಕ್ ಎಕ್ಸಪ್ರೆಸ್ ಅನ್ನೋ ಇ- ಮೇಲ್‌ ಅಕೌಂಟ್‌ನಿಂದ ಗದಗ ಜಿಲ್ಲಾ ನ್ಯಾಯಾಧೀಶರ ಇ- ಮೇಲ್‌ಗೆ ಸಂದೇಶ‌ ಬಂದಿದ್ದು, ಮಧ್ಯಾಹ್ನ 1.55ಕ್ಕೆ ಆತ್ಮಾಹುತಿ ದಾಳಿ ಮೂಲಕ ಸ್ಫೋಟಿಸುವುದಾಗಿ ಸಂದೇಶದಲ್ಲಿ ತಿಳಿಸಲಾಗಿದೆ. ಸಂದೇಶ ಗೊತ್ತಾದ ಬೆನ್ನಲ್ಲೇ ನ್ಯಾಯಾಲಯದ ಸಿಬ್ಬಂದಿ ಕೋರ್ಟ್ ಕಲಾಪ ಮುಂದೂಡಿ ಭಯಭೀತರಾಗಿ ಕಟ್ಟಡದಿಂದ ಓಡಿ ಹೊರಗೆ ಬಂದಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ಶೋಧನಾ ತಂಡದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇತೃತ್ವದಲ್ಲಿ ನ್ಯಾಯಾಲಯದ ಆವರಣವನ್ನು ಸಂಪೂರ್ಣ ಸೀಲ್‌ ಮಾಡಿ ತೀವ್ರ ಶೋಧ ಕಾರ್ಯ ನಡೆಯಿತು. ಇ- ಮೇಲ್‌ ಬಂದ ಮೂಲ, ಕಳುಹಿಸಿದ ವ್ಯಕ್ತಿಯ ಗುರುತು ಹಾಗೂ ಉದ್ದೇಶವನ್ನು ಪೊಲೀಸ್‌ ಇಲಾಖೆ ಪತ್ತೆ ಹಚ್ಚುತ್ತಿದೆ. ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.ಕರ್ತವ್ಯನಿರತ ಬಸ್ ನಿರ್ವಾಹಕಿ ಮೇಲೆ ಹಲ್ಲೆ

ಗದಗ: ಬಸ್ ನಿಲ್ಲಿಸಲಿಲ್ಲವೆಂದು ಆರೋಪಿಸಿ ಕರ್ತವ್ಯನಿರತ ಸಾರಿಗೆ ಇಲಾಖೆ ಮಹಿಳಾ ಸಿಬ್ಬಂದಿ (ನಿರ್ವಾಹಕಿ) ಮೇಲೆ ಇಬ್ಬರು ಹಲ್ಲೆ ಮಾಡಿದ ಘಟನೆ ನಗರದ ಹೊರ ವಲಯದ ಬಿಪಿನ್‌ ಚಿಕ್ಕಟ್ಟಿ ಶಾಲೆ ಬಳಿ ಮಂಗಳವಾರ ನಡೆದಿದೆ.ಶಿಗಟರಾಯನಕೆರೆಯಿಂದ ಗದಗ ಕಡೆಗೆ ಹೊರಟಿದ್ದ ವಾಯವ್ಯ ಸಾರಿಗೆ ಬಸ್ಸಿಗೆ ಟೋಲ್‌ ಗೇಟ್‌ ಬಳಿ ಮಕ್ಕಳನ್ನು ಹತ್ತಿಸಲು ಬಂದಿದ್ದ ಮೂವರಿಗೆ ಬಸ್‌ ನಿರ್ವಾಹಕಿ ನೇತ್ರಾ ಪತ್ರಿಮಠ ಅವರು, ಮಾರ್ಗಮಧ್ಯೆ ಟಿಕೆಟ್‌ ನೀಡಲು ಅವಕಾಶವಿಲ್ಲ, ಮುಂದೆ ಹತ್ತಿರದಲ್ಲಿರುವ ಬಸ್‌ ನಿಲ್ದಾಣಕ್ಕೆ ಬಂದು ಹತ್ತಿಸಿ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಕದಾಂಪುರ ಗ್ರಾಮದ ಪ್ರಕಾಶ ಸಂಕಣ್ಣವರ ಹಾಗೂ ಶಿಂಗಟರಾಯನಕೇರಿ ಗ್ರಾಮದ ನೀಲಪ್ಪ ಜಂತಲಿ ಎಂಬವರು ದ್ವಿಚಕ್ರ ವಾಹನದ ಮೂಲಕ ಬಸ್ ಹಿಂಬಾಲಿಸಿ ಬಂದು ಚಿಕ್ಕಟ್ಟಿ ಶಾಲೆ ಬಳಿ ಬೈಕ್ ಅಡ್ಡ ಹಾಕಿ ನಿರ್ವಾಹಕಿಗೆ ಪ್ರಶ್ನೆ ಮಾಡುವ ನೆಪದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ದರ್ಪ ತೋರಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.ಗಲಾಟೆಯ ವೀಡಿಯೋ ಚಿತ್ರಿಸುತ್ತಿದ್ದ ಬಸ್‌ ಚಾಲಕ ಎ.ಎಂ. ರೋಣದ ಅವರ ಮೊಬೈಲ್ ಕಸಿಯಲೆತ್ನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗದಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.