ಸಾರಾಂಶ
ಈ ರಾಜ್ಯದಲ್ಲಿರುವಂತಹ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಆಧಾರದ ಮೇಲೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬ ಆಶಯದಿಂದ ನಮ್ಮ ಸರ್ಕಾರ ಜಾತಿ ಗಣತಿಯನ್ನು ಸಮೀಕ್ಷೆ ಮಾಡಲು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗೆ ಸೇರುವ ಬಲಗೈ ಸಮುದಾಯದವರು ಹೊಲಯ ಎಂದೇ ಬರೆಯಿರಿ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು ಗೊಂದಲಕ್ಕೆ ಒಳಗಾಗದೆ ತಮ್ಮ ಜಾತಿಯ ಪಕ್ಕದಲ್ಲಿ ಹೊಲೆಯ ಎಂದು ನಮೂದಿಸಿ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು.ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಒಳ ಮೀಸಲಾತಿ ಪಡೆಯಲು ಉಪ ಜಾತಿಗಳ ವಿವರ ನೀಡುವುದು ಕಡ್ಡಾಯವಾಗಿದೆ . ಸರ್ಕಾರವು ಪರಿಶಿಷ್ಟ ಜಾತಿಯ ದತ್ತಾಂಶವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸಂಗ್ರಹಿಸಬೇಕಿದೆ. ಪರಿಶಿಷ್ಟರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಉಪ ಜಾತಿಯೂ ಸೇರಿದಂತೆ ಎಲ್ಲ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು ಎಂದು ಸಲಹೆ ನೀಡಿದರು.ಉಪಜಾತಿ ನಮೂದಿಸಿ ಈ ರಾಜ್ಯದಲ್ಲಿರುವಂತಹ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಆಧಾರದ ಮೇಲೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬ ಆಶಯದಿಂದ ನಮ್ಮ ಸರ್ಕಾರ ಜಾತಿ ಗಣತಿಯನ್ನು ಸಮೀಕ್ಷೆ ಮಾಡಲು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗೆ ಸೇರುವ ಬಲಗೈ ಸಮುದಾಯದವರು, ಛಲವಾದಿ ಸಮುದಾಯದವರು, ತಮಿಳು ಮಾತನಾಡುವವರು, ತೆಲುಗು ಮಾತನಾಡುವವರು, ಎಲ್ಲರೂ ಸಹ ನಿಮ್ಮ ನಿಮ್ಮ ಜಾತಿಯ ಪಕ್ಕದಲ್ಲಿ ಕಡ್ಡಾಯವಾಗಿ ಉಪ ಜಾತಿಯನ್ನು ನಮೂದಿಸಿ ಎಂದು ಮನವಿ ಮಾಡಿದರು.ಚಿಕ್ಕತಾಳಿ, ದೊಡ್ಡತಾಳಿ ಇಲ್ಲ
ಪರಿಶಿಷ್ಟ ಜಾತಿಯ ಸಮುದಾಯದಲ್ಲಿ ಚಿಕ್ಕ ತಾಳಿ ಮತ್ತು ದೊಡ್ಡ ತಾಳಿ ಎಂಬ ಪ್ರಕ್ರಿಯೆ ಇಲ್ಲ ಇದನ್ನು ಜಿಲ್ಲೆಯಲ್ಲಿ ಯಾರು ಹುಟ್ಟು ಹಾಕಿದವರು ಎಂಬುದು ತಿಳಿದಿಲ್ಲ, ನಾವೆಲ್ಲರೂ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ವಲಯ ಸಮುದಾಯಕ್ಕೆ ಸೇರಿದವರಾಗಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಪ್ರತಾಪ್, ಲಕ್ಷ್ಮೀನಾರಾಯಣ ಪ್ರಸಾದ್, ನಾರಾಯಣಪ್ಪ, ಪ್ರಸನ್ನ, ರವಿ, ಅ.ನಾ ಹರೀಶ್ ಹಾಗೂ ಮೊದಲಾದವರು ಇದ್ದರು.