ಹಾಸನ: ಅಮೆರಿಕಾದ ಕ್ಯಾಲಿಪೋರ್ನಿಯಾದ ಸ್ಯಾನೋಜೆಯಲ್ಲಿರುವ ಬಾಲಾಜಿ ಮಠದ ಆನಂದನಾಥ ಸ್ವಾಮೀಜಿ ಅವರು ಮಂಗಳವಾರ ಹಾಸನಾಂಬೆ ದರ್ಶನ ಪಡೆದರು. ಬಾಲಗಂಗಾಧರನಾಥ ಸ್ವಾಮೀಜಿಯಿಂದ ದೀಕ್ಷೆ ಪಡೆದಿದ್ದ ಇವರು ಹಲವು ವರ್ಷಗಳಿಂದ ಕ್ಯಾಲಿಪೋರ್ನಿಯಾದಲ್ಲಿನ ಬಾಲಾಜಿ ಮಠದ ಪೀಠಾಧಿಪತಿಗಳಾಗಿದ್ದಾರೆ. ಹಾಸನಾಂಬೆ ದರ್ಶನಕ್ಕಾಗಿಯೇ ಇಲ್ಲಿಗೆ ಆಗಮಿಸಿದ್ದೇನೆ. ತಾಯಿಯ ದರ್ಶನ ಮಾಡಿದ್ದು ಬಹಳ ಖುಷಿಯಾಯಿತು. ಹಾಸನಾಂಬೆ ದರ್ಶನದ ವಿಚಾರ ದೇಶವಿದೇಶಗಳಲ್ಲಿಯೂ ಸುದ್ದಿಯಾಗಿದೆ ಎಂದು ದರ್ಶನದ ಬಳಿಕ ಪ್ರತಿಕ್ರಿಯೆ ನೀಡಿದರು.