ಶಿಶುಪಾಲನಾ ಕೇಂದ್ರದ ಮಕ್ಕಳಿಗೆ‌ ಸ್ವೆಟರ್ ವಿತರಣೆ

| Published : Aug 01 2025, 02:15 AM IST

ಸಾರಾಂಶ

ಕುಶಾನಗರದ ದಂಡಿನಪೇಟೆಯ ಶಿಶುಪಾಲನಾ ಕೇಂದ್ರದ ಮಕ್ಕಳಿಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್‌ ಸ್ವೆಟ್ಟರ್‌ ವಿತರಣೆ ಮಾಡಿದರು.

ಕುಶಾಲನಗರ: ಕುಶಾಲನಗರದ ದಂಡಿನಪೇಟೆಯ ಶಿಶುಪಾಲನಾ ಕೇಂದ್ರದ ಮಕ್ಕಳಿಗೆ‌ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ಸ್ವೆಟರ್ ವಿತರಣೆ ಮಾಡಿದರು. ಕೊಡಗು ಜಿಲ್ಲೆಯಲ್ಲಿ 30 ಸಾವಿರ ದಷ್ಟು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಚೆಟರ್ ವಿತರಿಸುವ ಯೋಜನೆ ಕೈಗೊಳ್ಳಲಾಗಿದೆ. ಮಳೆಗಾಲದ ವಾತಾವರಣದಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಬಹು ಮುಖ್ಯ. ನಲಿ ಕಲಿ ಎಂಬಂತೆ ಇಂದಿನ ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸಲು ಪೂರಕ ವಾತಾವರಣ ಅನುಕೂಲ ಒದಗಿಸಲಿದೆ ಎಂದರು.ಈ ಸಂದರ್ಭ ಕಲಿಕಾ ಸಾಮಗ್ರಿಗಳನ್ನು ಕೂಡ ಶಾಸಕರು ಮಕ್ಕಳಿಗೆ ಒದಗಿಸಿದರು.ಈ ಸಂದರ್ಭ ಶಿಶುಪಾಲನಾ ಕೇಂದ್ರದ ಅಧ್ಯಕ್ಷೆ ಎಚ್.ಎಂ.ಹೇಮಲತಾ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್.ಚಂದ್ರ ಮೋಹನ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪ್ರಮುಖರಾದ ಸೋಮೇಶ್, ವೈಶಾಖ್, ಪ್ರವೀಣ್, ಕೇಂದ್ರದ ಶಿಕ್ಷಕಿ ರಂಜಿತ, ಸಹಾಯಕರಾದ ಕೃಪಾ, ಅಭಿಲಾಷ ಇದ್ದರು.